ಸರ್ವೇ ಅಧಿಕಾರಿಯಾದ ನಾಗರಾಜ್ ರವರನ್ನು ತರಾಟೆಗೆ ತೆಗೆದುಕೊಂಡ ಕೂಡಲಕುಪ್ಪೆ ಗ್ರಾಮಸ್ಥರು..!
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ಕೂಡಲಕುಪ್ಪೆ ಗ್ರಾಮದಲ್ಲಿ ಸಾರ್ವಜನಿಕರು ಓಡಾಡಲು ಇಡುವಳಿ ಜಮೀನನ್ನು ಭೂಸ್ವಾಧೀನ ಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಜನವರಿ ಮಾಹೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡಲಕುಪ್ಪೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಇಡುವಳಿ ಜಮೀನಿನ ರಸ್ತೆಯಾಗಿದ್ದು ಸ್ಥಳಿಯ ತಕರಾರು ಇರುತ್ತದೆ. ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜಾಗದಲ್ಲಿ ವ್ಯಾಜ್ಯವಿದ್ದು ಇದನ್ನು ಬಗೆಹರಿಸಿ ರಸ್ತೆಯನ್ನು ನಿರ್ಮಿಸಿ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಅಲ್ಲದೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕುಮಾರ ಕೆ.ಪಿ. ರವರ ಅಧ್ಯಕ್ಷತೆಯಲ್ಲಿ ಗ್ರಾಮ ಮಟ್ಟದ ವಿಶೇಷ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಸದರಿ ಸಭೆಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸರ್ವ ಸದಸ್ಯರುಗಳು ಹಾಗೂ ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಗ್ರಾಮದ ಕುಂದುಕೊರತೆಗಳನ್ನು ಚರ್ಚಿಸಿ ಗ್ರಾಮಕ್ಕೆ ರಸ್ತೆ ಕಲ್ಪಿಸಲು ಸರ್ವೇ ನಂ.35ರಲ್ಲಿ 8ಗುಂಟೆಯಲ್ಲಿ ರಸ್ತೆಯ ನಕ್ಷೆಯನ್ನು ಗುರುತಿಸಲು ಮಾನ್ಯ ತಹಶೀಲ್ದಾರ್ ಆಶೋಕ್ ರವರು ವಿಷಯ ತಿಳಿಸಿದ್ದರೂ ಸಹ ಸರ್ವೇ ಅಧಿಕಾರಿಗಳು ಅಕ್ಕ-ಪಕ್ಕದವರಿಗೆ ಯಾವುದೇ ರೀತಿಯ ನೋಟಿಸ್ ನೀಡದೇ ಗ್ರಾಮಸ್ಥರಿಗೆ ದಿಕ್ಕು ತಪ್ಪಿಸುತ್ತಿರುವ ನಾಗರಾಜ್ ರವರು ಗ್ರಾಮಕ್ಕೆ ಸರ್ವೇ ಮಾಡಲು ಎರಡನೇ ಬಾರಿಗೆ ಆಗಮಿಸಿದ ತಾಲ್ಲೋಕು ಸರ್ವೇ ಅಧಿಕಾರಿಯಾದ ನಾಗರಾಜ್ ರವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕೂಡಲಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಇದರ ವಿಷಯವಾಗಿ ಫೆಬ್ರವರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದರಿ ವಿಷಯದ ಬಗ್ಗೆ ಚರ್ಚಿಸಿ ಪರಿಶೀಲಿಸಲಾಗಿದ್ದು ಸದರಿ ಗ್ರಾಮಕ್ಕೆ ಯಾವುದೇ ಸಂಪರ್ಕ ರಸ್ತೆ ಇಲ್ಲದೇ ಇರುವುದರಿಂದ, ಸದರಿ ರಸ್ತೆಯು ಅಂಗಡಿ ಮಹದೇವನ ಮನೆಯಿಂದ ಸುಶೀಲಮ್ಮನ ಮನೆವರೆಗೆ (ಕಾಲುವೆವರೆಗೆ) ಸುಮಾರು 60.00ಮೀಟರ್ ಉದ್ದವಿದ್ದು ಈ ರಸ್ತೆಯನ್ನು ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವ ಉದ್ದೇಶದಿಂದ ರಸ್ತೆಯ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರವನ್ನು ನೀಡಿ ಕೂಡಲಕುಪ್ಪೆ ಗ್ರಾಮದ ಗ್ರಾಮಸ್ಥರು ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಮತ್ತೆ ಮನವಿ ಸಲ್ಲಿಸಲಾಗಿದ್ದು ಸುಮಾರು 30ವರ್ಷಗಳ ಸಮಸ್ಯೆಗೆ ತಹಸಿಲ್ದಾರ್ ರವರು ಪರಿಹಾರ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದಾರೆ .!
ಕೂಡಲಕುಪ್ಪೆ ಗ್ರಾಮಕ್ಕೆ ಸಂಬಂಧಿಸಿದಂತೆ ರಸ್ತೆ ಕಲ್ಪಿಸಲು ಸರ್ವೇ ನಂ. 35ರಲ್ಲಿ 8 ಗುಂಟೆಯಲ್ಲಿ ರಸ್ತೆಯ ನಕ್ಷೆಯನ್ನು ಗುರುತಿಸಲು ನನಗೆ ಮೌಖಿಕವಾಗಿ ಹೇಳಿದ್ದಾರೆ ಆಗಾಗಿ ಮುಂದಿನ ದಿನಗಳಲ್ಲಿ ಅಕ್ಕ-ಪಕ್ಕದವರಿಗೆ ನೋಟಿಸ್ ಜಾರಿ ಮಾಡಿದ ನಂತರ ಸರ್ವೇ ಮಾಡಲಾಗುತ್ತದೆ ಎಂದು ತಾಲ್ಲೋಕು ಸರ್ವೇ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.
- ಕರುನಾಡ ಕಂದ