ಗದಗ: ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ದಿಗಾಗಿ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿರುವುದಿಲ್ಲ. ಶೋಷಿತ ಸಮುದಾಯದ ಅಭಿವೃದ್ದಿಗಿರುವ ವಿವಿಧ ನಿಗಮಗಳಲ್ಲಿನ ಯೋಜನೆಗಳನ್ನು ಪುನಶ್ಚೇತನ ಗೊಳಿಸದೆ ದಲಿತರ ಆಶೋತ್ತರಗಳಿಗೆ ಸ್ಪಂಧಿಸದ ನಿರಾಶಾದಾಯಕ ಬಜೆಟ್ ಇದಾಗಿದೆ.
ಎಸ್ ಸಿ, ಎಸ್ ಟಿ ಮೀನುಮಾರಾಟಗಾರರ ಸಂಚಾರಿ ವಾಹನ ಖರೀದಿಸಲು 3 ಲಕ್ಷ ಸಹಾಯಧನ ಒದಗಿಸಲಾಗಿದೆ ಆದರೆ ಈ ಯೋಜನೆ ಕರಾವಳಿ ಭಾಗದ ಮೀನು ಮಾರಾಟಗಾರರಿಗೆ ಅನುಕೂಲವಾಗಿದೆ ಉತ್ತರ ಕರ್ನಾಟಕ ಭಾಗದ ಸಮುದಾಯದ ಜನತೆಗೆ ಅನ್ಯಾಯವೆಸಗಿದಂತಾಗಿದೆ.
ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡದೇ ಮತ್ತೆ ರೈತರಿಗೆ ವಂಚಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ನಾಡಿದ ದಲಿತರ ರೈತರ ಹಿಂದುಳಿದ ವರ್ಗದ ಜನ ವಿರೋಧಿ ಬಜೆಟ್ ಮಂಡಿಸಿರುತ್ತಾರೆ ಎಂದು ಸುರೇಶ ವಾಯ್.ಚಲವಾದಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಕ್ಷ ಎಸ್ ಸಿ ಮೋರ್ಚಾ ಗದಗ ಜಿಲ್ಲೆ ಇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ