ವಿಜಯಪುರ / ಮುದ್ದೇಬಿಹಾಳ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಢವಳಗಿಯಲ್ಲಿ ಢವಳಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಮ್ಮಿಕೊಳ್ಳಲಾಯಿತು. ಮಕ್ಕಳಲ್ಲಿ ಅಡಗಿರುವ ಕೌಶಲವನ್ನು ಹೊರ ಹಾಕುವ ಪ್ರಚುರ ಪಡಿಸುವುದೇ ಶಿಕ್ಷಣ ಎಂಬ ಅರ್ಥದಲ್ಲಿ ಕಲಿಕಾ ಹಬ್ಬವು ಅತ್ಯಂತ ಉತ್ಸುಕತೆ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಬೆಳಗ್ಗೆ 9:30 ನಿಮಿಷಕ್ಕೆ ಗ್ರಾಮಸ್ಥರು ಹಾಗೂ ಪಾಲಕರು ನಿರ್ಣಾಯಕರು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಗಳು ಸಹ ಶಿಕ್ಷಕರು ಹಾಗೂ ಮುಖ್ಯ ಗುರುಗಳು ಮತ್ತು ಭಾಗವಹಿಸುವ ವಿದ್ಯಾರ್ಥಿಗಳೊಂದಿಗೆ ಉದ್ಘಾಟನೆ ನಡೆಸಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಸುರೇಶ ಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಯು ಬಿ ಧರಿಕಾರ, ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಮ್ ಎಮ್ ಬೆಳಗಲ್ ಉಪಸ್ಥಿತರಿದ್ದರು.
ಕಲಿಕಾ ಹಬ್ಬದಲ್ಲಿ ಏಳು ಸ್ಟಾಲ್ ಗಳನ್ನು ನಿರ್ಮಿಸಲಾಗಿದ್ದು ಪ್ರತಿ ಸ್ಟಾಲ್ ಗಳಲ್ಲಿ ತರಗತಿವಾರು ಮೌಲ್ಯಮಾಪನ ನಡೆಸಿ ಆಯಾ ಸ್ಟಾಲ್ ಗಳ ನಿರ್ಣಾಯಕರು ಶ್ರೇಣಿಗಳನ್ನು ನೀಡಿದರು.
ಕೊನೆಯಲ್ಲಿ ಅವುಗಳನ್ನು ಕ್ರೋಢೀಕರಣ ಮಾಡಿ ಪ್ರತಿ ಸ್ಟಾಲ್ ನಿಂದ ವಿಜೇತರ ಶಾಲೆಗಳ ಪಟ್ಟಿಯನ್ನು ಸಮೂಹ ಸಂಪನ್ಮೂಲ ವ್ಯಕ್ತಿಗಳು ತಯಾರಿಸಿದರು. ಒಟ್ಟಾರೆ ತಾರತಮ್ಯ ರಹಿತವಾದ ಸ್ಪರ್ಧೆ ಹಾಗೂ ನಿರ್ಣಯಗಳು ಏರ್ಪಟ್ಟವು ಸಾಯಂಕಾಲ 4:00 ಗೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು ಎ.ಪಿ.ಎಫ್ ನಿಂದ ಸಹಾಯಕ ಶಿಕ್ಷಕರಾಗಿ ರಾಜೇಶ ಮಹಾಂತಮಠ ಆಗಮಿಸಿದರು.
ಪ್ರತಿ ಸ್ಟಾಲ್ ಗಳ ವಿಜೇತ ಶಾಲೆಗಳ ಪಟ್ಟಿ
1) ಗಟ್ಟಿ ಓದು ಎಂಪಿಎಸ್ ಢವಳಗಿ
2) ಕಥೆ ಹೇಳುವುದು ಎಂಪಿಎಸ್ ಢವಳಗಿ
3) ಕೈ ಬರಹ ಎಂಪಿಎಸ್ ಢವಳಗಿ
4) ಸಂತಸದಾಯಕ ಗಣಿತ ಹೆಚ್ ಪಿ ಎಸ್ ಹಳ್ಳೂರ
5) ಮೆಮೊರಿ ಪರೀಕ್ಷೆ ಎಚ್ ಪಿ ಎಸ್ ಅಗಸಬಾಳ
6) ರಸಪ್ರಶ್ನೆ ಎಂಪಿಎಸ್ ಢವಳಗಿ
7) ಪಾಲಕ ಪೋಷಕರ ಆಟ ಎಲ್ ಪಿ ಎಸ್ ಹಳ್ಳೂರ ಕ್ರಾಸ್
ಈ ರೀತಿ ಬಹುಮಾನ ಪಡೆದರು ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಿಗೂ ಸಹ ಶೀಲ್ಡ್ ಗಳನ್ನು ನೀಡಲಾಯಿತು. ಭಾಗವಹಿಸಿದ ಪ್ರತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಸನ ನೀರು ಹಾಗೂ ಊಟೋಪಚಾರಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸುರೇಶ್ ಗೌಡ, ಪಾಟೀಲ್ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಗಳಾದ ಆನಂದಯ್ಯಾ ಹಿರೇಮಠ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಶಿಕ್ಷಣ ಆಸಕ್ತರು ಆದ ಎಂ.ಕೆ ಗುಡಿಮನಿ, ಗ್ರಾಮದ ಹಿರಿಯರಾದ ಬಸನಗೌಡ ಬಿರಾದಾರ, ಶಿವರಾಜ ರಕ್ಕಸಗಿ, ಈರಣ್ಣ ಯಡವಣ್ಣವರ, ಗುರುಬಸಪ್ಪ ಕೋರಿ, ಮಡಿವಾಳಪ್ಪ ಗೌಡ ಬಿರಾದಾರ, ಬಾಬೂಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಎಸ್. ಎಚ್. ಕಥೆಗಾರ ನಿರೂಪಿಸಿದರು.
ಬಿ ಎಸ್ ಶೇಖಣ್ಣವರ ಸ್ವಾಗತಿಸಿದರು, ಮಹೇಶ್ ಕೊಣ್ಣೂರ ವಂದಿಸಿದರು, ಸಂಗಮೇಶ ಶಾಂತಪ್ಪ ನವಲಿ ವರದಿ ಮಂಡಿಸಿದರು.
- ಕರುನಾಡ ಕಂದ