ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮತ್ತು ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸoಯುಕ್ತಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ 11ನೇ ಮಾರ್ಚ್ 2025 ರಂದು ಸಂಜೆ 4.30 ಕ್ಕೆ ಸರ್ ಎಂ.ವಿ ಆಡಿಟೋರಿಯಂ, FKCCI, ಶತಮಾನೋತ್ಸವ ಕಟ್ಟಡ, ಕೆಜಿ ರಸ್ತೆ, ಬೆಂಗಳೂರು ಇಲ್ಲಿ ಆಚರಿಸಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಸುಮಲತಾ ಅಂಬರೀಶ್, ಮಾಜಿ ಸಂಸದೆ ಮತ್ತು ನಟಿ ಹಾಗೂ ಡಾ.ಆರತಿ ಕೃಷ್ಣ, ಉಪಾಧ್ಯಕ್ಷ, ಎನ್.ಆರ್.ಐ ಫೋರಂ, ಕರ್ನಾಟಕ ಸರಕಾರ ಇವರುಗಳು ಭಾಗವಹಿಸುವರು.
ಗೌರವ ಅತಿಥಿಗಳಾಗಿ ಶ್ರೀಮತಿ ಭವ್ಯ ಗೌಡ, ಮಿಸ್ ಅರ್ಥ್, MD, ಕಾನ್ಕಾರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಇವರು ಆಗಮಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ. ಜಿ. ಬಾಲಕೃಷ್ಣ, ಅಧ್ಯಕ್ಷರು, FKCCI ಇವರು ವಹಿಸುವರು.
ಶ್ರೀಮತಿ ಉಮಾ ರೆಡ್ಡಿ ಅರ್., ಉಪಾಧ್ಯಕ್ಷರು,ಟಿ ಸಾಯಿರಾಮ್ ಪ್ರಸಾದ್ ಉಪಾಧ್ಯಕ್ಷರು,ರಮೇಶ್ ಚಂದ್ರ ಲಹೋಟಿ. ಮಾಜಿ ಅಧ್ಯಕ್ಷರು, ಡಾ. ಮಧುರಾಣಿ ಗೌಡ,ಅಧ್ಯಕ್ಷರು, ಮಹಿಳಾ ವಿಭಾಗ,ಡಾ. ಪೆರಿಕಲ್ ಎಂ ಸುಂದರ್, ಹಿಂದಿನ ಅಧ್ಯಕ್ಷರು, FKCCI & ಸಲಹೆಗಾರರು ಮುಂತಾದವರು ಮಹಿಳಾ ಉದ್ಯಮಿಗಳ ಪ್ರದರ್ಶನವನ್ನು ಆಯೋಜಿಸಿದ್ದು ಮಧ್ಯಾಹ್ನ 2.00 ರಿಂದ ಸಂಜೆ 7.00 ರವರೆಗೆ ಮಹಿಳಾ ಸಾಧಕರನ್ನು ಸನ್ಮಾನಿಸುವರು.
ಕಾರ್ಯಕ್ರಮದಲ್ಲಿ ನೃತ್ಯ ಮತ್ತು ಫ್ಯಾಷನ್ ಶೋ ಏರ್ಪಡಿಸಲಾಗುವುದಲ್ಲದೆ ಲಘು ಉಪಹಾರ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು FKCCI ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಮಧುರಾಣಿ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
RSVP: ಭಾಗ್ಯಲಕ್ಷ್ಮಿ – 94497 11705
ನೆಟ್‌ವರ್ಕಿಂಗ್, ಹೈ ಟೀ @ 3.45 pm.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.