
ಬಳ್ಳಾರಿ/ ಕಂಪ್ಲಿ: ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಮುಕ್ತಾಯವಾಗಿದೆ. ಬರೋಬ್ಬರಿ ಮೂವರುವರೇ ಗಂಟೆಯ ಭಾಷಣ ಓದಿದ್ದು, ಹಲವು ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸದನ ಸೋಮವಾರ ಬೆಳಿಗ್ಗೆ ಮುಂದೂಡಿಕೆ ಆಗಿದೆ.
ಸಿ.ಎಂ ಸಿದ್ದರಾಮಯ್ಯ ಬಜೆಟ್ 2025-26 ಮಂಡನೆ:
ಬಜೆಟ್‌ನಲ್ಲಿ ರಾಜ್ಯದ ಮಲ್ಟಿಪ್ಲೆಕ್ಸ್ ಗಳಿಗೂ ಸೇರಿದಂತೆ ಎಲ್ಲಾ ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರ 200 ರೂ ಸೀಮಿತಗೊಳುವ ಘೋಷಣೆ ಮಾಡಲಾಗಿದೆ.
ಹಣಕಾಸು ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಮಂಡನೆ ಆರಂಭಿಸಿದ್ದಾರೆ. ಇದು ಅವರ ದಾಖಲೆಯ 16ನೇ ಬಜೆಟ್ ಆಗಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ 4,09,549 ಕೋಟಿ ರೂ. ದಾಖಲೆ ಗಾತ್ರದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ 5 ಗ್ಯಾರಂಟಿ ಯೋಜನೆಗಳಿಗಾಗಿ ಸಿ.ಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ 51,300 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.
ಬಜೆಟ್ ಬಗ್ಗೆ ಅಭಿಪ್ರಾಯಗಳು ಜನಪರವಾದ ಬಜೆಟ್ ಮಂಡನೆ :ರಿಯಾಜ್ ಅಹ್ಮದ್
ಕಂಪ್ಲಿ: ಈ ಬಾರಿಯ ಬಜೆಟ್ ಜನಪರವಾಗಿದ್ದು, ಸಿಎಂ ತಮ್ಮ ದಾಖಲೆಯ ಬಜೆಟ್‌ನ್ನು ಬಡವರು ಹಾಗೂ ಶ್ರಮಿಕರ ಪರವಾಗಿ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ದಾಖಲೆಯ 16ನೇ ಬಜೆಟ್ ಮಂಡಿಸಿದ್ದು, ಇದು ಜನಪರವಾದ ಬಜೆಟ್ ಆಗಿದೆ. ಈ ಬಾರಿಯ ಬಜೆಟ್ ಬಡವರ ಹಾಗೂ ಶ್ರಮಿಕರ ಪರವಾಗಿದ್ದು, ಸರ್ವತೋಮುಖ ಅಭಿವೃದ್ಧಿಗಾಗಿ ನೀಡಲಾಗಿದೆ. ಜನಪರವಾದ ಬಜೆಟ್ ಅನ್ನು ಮಂಡಿಸಿದ್ದು, ಪ್ರತಿಯೊಂದು ಕ್ಷೇತ್ರಗಳಿಗೆ ಮಾನ್ಯ ಸಿದ್ದರಾಮಯ್ಯ ಆಧ್ಯತೆ ನೀಡಿ, ಯೋಜನೆ ಮತ್ತು ಅನುದಾನ ಮೀಸಲಿಟ್ಟಿದ್ದಾರೆ.

ರಿಯಾಜ್ ಅಹ್ಮದ್ : ಅಧ್ಯಕ್ಷರು, ಯೂತ್ ಕಾಂಗ್ರೆಸ್, ಕಂಪ್ಲಿ ವಿಧಾನಸಭಾ ಕ್ಷೇತ್ರ.
ಕಂಪ್ಲಿ ತಾಲ್ಲೂಕಿಗೆ ಬಜೆಟ್ ಶೂನ್ಯ : ಬಿ. ರಮೇಶ
ಕಂಪ್ಲಿ: ಕಂಪ್ಲಿ ಹೊಸ ಸೇತುವೆ ಬೇಡಿಕೆಗೆ ಈ ಬಜೆಟ್ ತಣ್ಣೀರು ಎರಚಿದೆ. ಕಂಪ್ಲಿ ತಾಲೂಕಿನಲ್ಲಿ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿವೆ. ಆದರೆ, ಹೊಸ ಯೋಜನೆ ಮತ್ತು ಅನುದಾನ ನೀಡದೇ, ಕಂಪ್ಲಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಬಿ. ರಮೇಶ, ತಾಲ್ಲೂಕು ಅಧ್ಯಕ್ಷರು, ಕರವೇ ( ಪ್ರವೀಣ್ ಶೆಟ್ಟಿ ಬಣ ) , ಕಂಪ್ಲಿ.
ನಿರಾಶಾದಾಯಕ ಬಜೆಟ್ : ಟಿ.ವಿ. ಸುದರ್ಶನರೆಡ್ಡಿ
ಕಂಪ್ಲಿ : ರಾಜ್ಯದ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಹೊಸತನ ಇಲ್ಲ. ಜನ ವಿರೋಧಿ ಮತ್ತು ನಿರಾಶಾದಾಯಕ ಬಜೆಟ್ ಇದಾಗಿದೆ. ಗ್ಯಾರಂಟಿಗಳ ಮೂಲಕ ಬಜೆಟ್ ಹಳ್ಳ ಹಿಡಿದಿದೆ. ದುರಾದೃಷ್ಠ ಇಲ್ಲದ ಬಜೆಟ್ ಶೂನ್ಯವಾಗಿದೆ. ಈಗಾಗಲೇ ಕಂಪ್ಲಿಯಲ್ಲಿ ನೂರು ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಡ ನಡೆಯುತ್ತಿರುವುದು ಗೊತ್ತಿರುವ ವಿಚಾರ. ಕಂಪ್ಲಿ ತಾಲೂಕಿನಲ್ಲಿ ಹೊಸ ಯೋಜನೆ ಬಗ್ಗೆ ಚಕಾರವೆತ್ತದೆ ನಿರಾಶಾದಾಯಕ ಬಜೆಟ್ ಆಗಿದೆ.
ಟಿ.ವಿ. ಸುದರ್ಶನರೆಡ್ಡಿ ಸದಸ್ಯರು, ಪುರಸಭೆ, ಕಂಪ್ಲಿ.

ವರದಿ : ಜಿಲಾನ್ ಸಾಬ್ ಬಡಿಗೇರ.