ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜೂಜು ಕೇಂದ್ರಗಳಾದ ಧಾರ್ಮಿಕ ಸ್ಥಳಗಳು, ಕ್ರಮ ಕೈಗೊಳ್ಳದ ದೇಗುಲ ಆಡಳಿತ ಮಂಡಳಿಗಳು

ಉತ್ತರ ಕನ್ನಡ: ಧಾರ್ಮಿಕ ಸ್ಥಳಗಳು ಇರುವುದು ಆಸ್ತಿಕ ಜನರಲ್ಲಿ ಶ್ರದ್ಧೆ ಹೆಚ್ಚಿಸಲು ಹಾಗೂ ಭಕ್ತರ ಮನಸ್ಸಿಗೆ ಶಾಂತಿ ನೀಡಿ , ಸಮಾಜವನ್ನು ಉತ್ತಮ ಮಾರ್ಗದಲ್ಲಿ ಮುನ್ನೆಡೆಸುವ ರೀತಿಯಲ್ಲಿ ಮಾರ್ಗದರ್ಶನ ನೀಡಲು. ಅಂತಹದ್ದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಸ್ಥಳಗಳು ಜೂಜು ಕೇಂದ್ರಗಳಾದವಾ ಎಂಬ ಗಂಭೀರ ಪ್ರಶ್ನೆಯೊಂದು ತಾಲೂಕಿನ ಆಸ್ತಿಕ ಭಕ್ತರಲ್ಲಿ ಮೂಡಿದೆ.

ಕಾರಣ ಜಿಲ್ಲೆಯಲ್ಲಿ ಎಲ್ಲೇ ಜಾತ್ರೆ ,ಮಹೋತ್ಸವಗಳು ನಡೆಯಲಿ ಅಲ್ಲೆಲ್ಲಾ ಹೊಸದೊಂದು ಖಯಾಲಿ ಪ್ರಾರಂಭವಾಗಿ ಬಿಟ್ಟಿದೆ, ಅದೇನಪ್ಪಾ ಅಂದ್ರೆ ಪ್ರತಿ ದೇವಸ್ಥಾನಗಳ ವಾರ್ಷಿಕ ಮಹೋತ್ಸವ, ಜಾತ್ರೋತ್ಸವ , ವರ್ಧಂತಿ ಉತ್ಸವ ನಡೆಯಲಿ ಹಣವನ್ನು ಬಾಜಿ ಕಟ್ಟಿ ಆಡುವ ,ಒಂದಕ್ಕೆ ಎರಡು ಪಟ್ಟು ಹಣ ಕಟ್ಟುವ ಜೂಜು ಆಟಗಳು ತಲೆ ಎತ್ತಲು ಪ್ರಾರಂಭ ಮಾಡಿವೆ. ಇದರಿಂದ ಜಾತ್ರೆಗೆ, ದೇವಸ್ಥಾನಕ್ಕೆ ಬರುವವರಿಗೆ ದೊಡ್ಡ ಮಟ್ಟದ ಹಣ ಗೆಲ್ಲಬಹುದು ಎಂಬ ಆಸೆ ಹುಟ್ಟಿ ಅವರೆಲ್ಲರೂ ಈ ಜೂಜು ಕೇಂದ್ರ ಗಳಂತಿರುವ ಬಾಲ್ ಗೇಮ್ ಆಟ, ಗುಳುಗುಳಿ ಆಟ ಗಳಲ್ಲಿ ಹಣ ವಿನಿಯೋಗಿಸಿ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ಶಿರಸಿ ,ಯಲ್ಲಾಪುರ, ದಾಂಡೇಲಿ, ಸೇರಿದಂತೆ ಜಿಲ್ಲೆಯ ಅನೇಕ ಕಡೆ ಇದೆ ರೀತಿಯ ಹೊಸ ಖಯಾಲಿ ಪ್ರಾರಂಭವಾಗಿದ್ದು ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಜನವರಿಯಲ್ಲಿ ಮುಂಡಗೋಡ ತಾಲೂಕಿನ ಸಾಲಗಾಂವ ಬಾಣಂತಿ ದೇವಿ ಜಾತ್ರೆ ಮಹೋತ್ಸವದಲ್ಲಿ ಕೂಡಾ ಬಾಲ್ ಗೇಮ್ ಆಟ ಸದ್ದು ಮಾಡಿತ್ತು, 4 ದಿನಗಳ ಕಾಲ ಭರ್ಜರಿ ಯಾಗಿ ನಡೆದ ಬಾಲ್ ಗೇಮ್ ಆಟದಲ್ಲಿ ಹಣ ತುಂಬಿಕೊಂಡು ಹೋದ ಕೈಗಳು ಎಷ್ಟೋ ,ಹಣ ಕಳೆದುಕೊಂಡ ಕೈಗಳು ಎಷ್ಟೋ, ಬಳಿಕ ಬೇಡಸಂಗಾವ್ ರಾಮಲಿಂಗೇಶ್ವರ ಜಾತ್ರೆಯಲ್ಲಿ ಕೂಡಾ ಬಾಲ್ ಗೇಮ್ ಆಟ ಸದ್ದು ಮಾಡಿತ್ತು ಈ ಬಗ್ಗೆ ಕರುನಾಡ ಕಂದ ಕೂಡ ವರದಿ ಮಾಡಿತ್ತು. ಈಗ ಮತ್ತೆ ಕೋಡoಬಿ ಮೇಲುಗೈ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಕೂಡಾ ಮತ್ತೆ ಬಾಲ್ ಗೇಮ್ ಆಟದ ಸದ್ದು ಕೇಳಿ ಬರುತ್ತಿದ್ದು, ದೇಗುಲದ ಆಡಳಿತ ಮಂಡಳಿ ಅವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಬಾಜಿ ಕಟ್ಟಿ ಹಣ ಗೆಲ್ಲುವ ಆಟಗಳನ್ನು ಆಡಿಸಿ, ದೇವರ ದರ್ಶನಕ್ಕೆ ಬರುವ ಭಕ್ತರನ್ನು ದಿವಾಳಿ ಮಾಡುವ ಯೋಜನೆಗೆ ಆಸ್ತಿಕ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲಿಯೂ ದೇವಸ್ಥಾನದ ಆಡಳಿತ ಕಮಿಟಿ ಯವರು ಇಂತಹ ಪ್ರಮಾದಗಳಿಗೆ ಹೊಣೆಗಾರರು, ಇಂತಹ ಸಮಾಜ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ದೇಗುಲಕ್ಕೆ ದರ್ಶನ ಮಾಡಲು ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೂರಾರು ಜನ ಸಾವಿರಾರು ರೂಪಾಯಿ ಹಾಕಿ ಹಣ ಬಾಜಿ ಕಟ್ಟಿ ಕಳೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನರಿಗೆ ಜೂಜು ಕೇಂದ್ರಗಳಾದವಾ ಧಾರ್ಮಿಕ ಸ್ಥಳಗಳು? ಎಂಬ ಪ್ರಶ್ನೆ ನಿಜಕ್ಕೂ ಓದುಗರಾದ ನಿಮ್ಮನ್ನು ಕಾಡದೇ ಇರದು.

ಭಕ್ತರಿಗಾಗಿ ಇರುವ ದೇವಸ್ಥಾನಗಳ ಆವರಣದಲ್ಲಿ ಈ ರೀತಿಯಾಗಿ ಅಕ್ರಮ ಆಟಗಳಿಗೆ ದೊಡ್ಡವರು ಅವಕಾಶ ನೀಡಬಾರದೆಂದು ಕೆಲ ಭಕ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈಗ ಸಾಲು ಸಾಲು ಜಾತ್ರಾ ಮಹೋತ್ಸವ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಡೆಯಲಿದ್ದು ಇನ್ನೂ ಮುಂದೆ ಯಾವುದೇ ಗ್ರಾಮಗಳಲ್ಲಿ ಈ ರೀತಿಯ ಬಾಜಿ ಆಟಗಳನ್ನು ಆಡಿಸಲು ಸಂಬಂಧಪಟ್ಟವರು ಅವಕಾಶ ನೀಡಬಾರದು ಹಾಗೂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾವಂತರು ಆಗ್ರಹ ಮಾಡುತ್ತಿದ್ದಾರೆ.

  • ಕರುನಾಡ ಕಂದ ಉತ್ತರ ಕನ್ನಡ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ