ಬೀದರ/ ಬಸವಕಲ್ಯಾಣ: ಕರ್ನಾಟಕ ಸರ್ಕಾರದ ಆಡಳಿತ ಪಕ್ಷದ ಮಾನ್ಯ ಮುಖ್ಯಮಂತ್ರಿಗಳು ಹಿರಿಯ ನಾಯಕರಾದ ಸಿದ್ದರಾಮಣ್ಣನವರು ಕೇವಲ ಮತ ಬ್ಯಾಂಕಿಗಾಗಿ, ಮತ ಓಲೈಕೆಯ ರಾಜಕಾರಣದ ಬಜೆಟ್ ಮಂಡನೆಯಾಗಿದೆ ವಿನಹ ಬೇರೇನಿಲ್ಲ ಇಲ್ಲಿ ನೇರವಾಗಿ ಹಿಂದೂಗಳಿಗೆ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಅನುದಾನ ಮಾತ್ರ ಶೂನ್ಯಯಾಗಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ನೀಡದ ಅನುದಾನ ಬರೀ ಒಂದೇ ಸಮುದಾಯಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಖಂಡನೀಯ, ನಾವುಗಳು ಬರೀ ಮತಗಳಿಗೆ ಸೀಮಿತವಾದವು ಹೊರತು ಸರ್ವಾಂಗಿಣ ಅಭಿವೃದ್ಧಿಗಾಗಿ ಅಲ್ಲ ಈ ಬಜೆಟ್ ಶೈಕ್ಷಣಿಕ ಅಭಿವೃದ್ಧಿಗಾಗಿ, ಉದ್ಯೋಗ ನೀಡುವ ಕೈಗಾರಿಕರಣಕ್ಕಾಗಿ, ವ್ಯವಸಾಯ ಆಧಾರಿತ ರೈತರಿಗಾಗಿ, ಸಂಸ್ಕೃತಿಯ ವಲಯ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡದೇ ಯಾವುದೇ ಕ್ಷೇತ್ರಕ್ಕೆ ಪೂರಕವು ಇಲ್ಲಾ, ಪರವಾಗಿಯೂ ಇಲ್ಲಾ, ಪ್ರೋತ್ಸಾಹದಾಯಕವೂ ಇಲ್ಲಾ, 100 ಉರ್ದು ಶಾಲೆಗಳಿಗೆ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಡೆಗಣಿಸಲಾಗಿದೆ, ಒಂದೇ ಸಮುದಾಯದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡುವ ಸರ್ಕಾರ ನನ್ನ ಹಿಂದೂ ಸಮುದಾಯದ ವಿದ್ಯಾರ್ಥಿನಿಯರ ಆತ್ಮ ರಕ್ಷಣಾ ತರಬೇತಿ ಯಾವಾಗ..? ಅವರ ರಕ್ಷಣೆ ಹೇಗೆ..? ಸರ್ಕಾರಿ ಶಾಲೆಗಳ ಕಟ್ಟಡ ಹಾಗೂ ನವೀಕರಣ ಬಗ್ಗೆ ಮಾತೇ ಎತ್ತಲಿಲ್ಲ, ಬಸವಕಲ್ಯಾಣ ಸಾರ್ವಜನಿಕ ಆಸ್ಪರ್ತೆ ಜಿಲ್ಲಾ ದರ್ಜೆಗೆ ಏರಿಸುವುದಷ್ಟೆ ಅಲ್ಲ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ನೀಡಿರುವ ಅನುದಾನವೇಷ್ಟು ? ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡದೆ ಕೇವಲ, ಕೇವಲ ಮತ ಓಲೈಕೆಯ ಬಜೆಟ್ ಮಂಡಿಸಿದ್ದು ಅತ್ಯಂತ ಖಂಡನೆಯ, ಹಾಗೂ ಇದು ಹಿಂದೂ ವಿರೋಧಿ , ರೈತ ವಿರೋಧಿ ಬಜೆಟ್ ಇದಾಗಿದೆ ಎಂದು ರವಿ ನಾವದ್ಗೇಕರ ಹಿಂದೂ ಪರ ಹೋರಾಟಗಾರರು, ಬಸವಕಲ್ಯಾಣ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ