ಶಿವಮೊಗ್ಗ : ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಪೂರಕವೇ? ನೀವೇ ಉತ್ತರಿಸಬೇಕು!!
ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಸಾಲದ ಒತ್ತಡ ಇರುವ ಬಜೆಟ್ ಸಿ.ಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ‘ಅಸಮರ್ಥ ಬಜೆಟ್’ ಇದಾಗಿದೆ. ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಇವತ್ತು ಯಾವುದೇ ಹಿಂದುಳಿದವರ್ಗಗಳ ಕಲ್ಯಾಣಕ್ಕಾಗಿ ಏನನ್ನೂ ನೀಡದೆ, ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿಕೊಂಡು ಬಂದಂತಹ ಕರ್ನಾಟಕದ ಅಭಿವೃದ್ಧಿಗೊ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೊ ಎಂಬ ಪ್ರಶ್ನೆ ಹುಟ್ಟು ಹಾಕುವಂತಿದೆ!
ಹಿಂದೂ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ, ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಪ್ರಮುಖ ಪಾತ್ರ ವಹಿಸುವ ಮುಜರಾಯಿ ಇಲಾಖೆಗೆ ಈ ಬಜೆಟ್‌ನಲ್ಲಿ ಈ ವಿಭಾಗಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಜೊತೆಗೆ ರಾಜ್ಯ ಸರ್ಕಾರವು ಶಿವಮೊಗ್ಗವನ್ನು ಪರೋಕ್ಷ ನಿರ್ಲಕ್ಷ್ಯ ತೋರಿಸಿರುವುದು ಬಹಳ ವಿಷಾದನೀಯ. ಈ ಬಜೆಟ್‌ನಲ್ಲಿ ನಮ್ಮ ಶಿವಮೊಗ್ಗಕ್ಕೆ ಪ್ರತ್ಯೇಕ ಯೋಜನೆಗಳನ್ನು ಘೋಷಿಸದೆ, ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿರುವುದು ಖಂಡನೀಯ.
ರಾಜ್ಯದ ಆದಾಯ ಹೆಚ್ಚಿಸುವ ಯಾವುದೇ ಸ್ಪಷ್ಟ ಯೋಜನೆಗಳಿಲ್ಲದ ಅಭಿವೃದ್ಧಿಹೀನ ಈ ಬಜೆಟ್ ಕೇವಲ ರಾಜ್ಯದ ಜನತೆಯ ಸಾಲದ ಹೊರೆ ಹೆಚ್ಚಿಸಿದೆ.
ರಾಜ್ಯದ ಎಲ್ಲಾ ವರ್ಗದ ಜನತೆಗೆ ಸಮನ್ಯಾಯತೆ ನೀಡುವ ಬದಲು, ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲಭೂತ ಆದರ್ಶಗಳಿಗೆ ವಿರುದ್ಧವಾಗಿದೆ. ಇದರ ಜೊತೆ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ತತ್ವಗಳಿಗೆ ಪೂರಕವಲ್ಲ ಎಂಬುದನ್ನು ಎತ್ತಿ ತೋರುತ್ತಿದೆ ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್. ಚನ್ನಬಸಪ್ಪ (ಚೆನ್ನಿ) ಶಾಸಕರು, ಶಿವಮೊಗ್ಗ ನಗರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ