
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುಡಬಿ-ಬಸವಕಲ್ಯಾಣ ರಸ್ತೆಯ ಮಧ್ಯದಲ್ಲಿ ಬೃಹತ್ ಆಕಾರದ ಮರ ಒಂದು ಉರುಳಿ ಬಿದ್ದಿದ್ದು, ಅದರಿಂದ ವಾಹನಗಳ ಸಂಚಾರಕ್ಕೆ ಅಡೆ ತಡೆ ಉಂಟಾಗಿ ಸಾರ್ವಜನಿಕರಿಗೆ ಓಡಾಡಲು ಬಹಳಷ್ಟು ತೊಂದರೆ ಆಗುವುದನ್ನು ಗಮನಿಸಿದ ಮುಡುಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಕು. ಜೈಶ್ರೀ ರವರು ತಕ್ಷಣ ಕಾರ್ಯ ಪ್ರವರ್ತರಾಗಿ ತಮ್ಮ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಮತ್ತು ಸ್ಥಳಿಯರ ಸಹಯೋಗದೊಂದಿಗೆ ಬೃಹತ್ ಆಕಾರದ ಮರವನ್ನು ತೆಗೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಸಿರುತ್ತಾರೆ.
ಮುಡಬಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಯವರ ಅತ್ಯತ್ತಮ ಕಾರ್ಯಕ್ಕೆ ಪ್ರಸಂಶಿಸಿ, ಅವರ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯನ್ನು ತೋರಿದಕ್ಕೆ ಗೌರವಿಸಿ ಅವರ ಈ ಪ್ರಾಮಾಣಿಕತೆ ಎಲ್ಲರಿಗೂ ಪ್ರೇರಣೆ ಆಗಲಿ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ಶ್ರೀನಿವಾಸ ಬಿರಾದಾರ