
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಬೋರಗಿ ಪುರದಾಳದಲ್ಲಿ ಸದ್ಗುರು ವಿಶ್ವಾರಾಧ್ಯ ಅಜ್ಜನ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವವು ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮಠದ ಪೀಠಾಧಿಪತಿಗಳಾದ ತಪೋರತ್ನಂ ಶ್ರೀ ಶ್ರೀ ಮಾಲಿಂಗೇಶ್ವರ ಮಹಾಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಉತ್ಸವದಲ್ಲಿ ಪುರುವಂತರ ಕುಣಿತದೊಂದಿಗೆ ಸುಮಂಗಲಿಯರು ಆರತಿ ಹಿಡಿದು ಕಳಸದೊಂದಿಗೆ ಬರುವ ದೃಶ್ಯ ನೋಡಲು ಜನರು ಸಾಗರ ಸೇರಿದ್ದರು. ಭಕ್ತರು ಸ್ವಾಮೀಜಿಗಳ ಶಿವಶರಣರ ಆಶೀರ್ವಾದ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡರು. ವಿಜಯಪುರ, ಶಹಾಪುರ, ಯಾದಗಿರಿ, ಕಲಬುರಗಿ ಹಾಗೂ ಮಹಾರಾಷ್ಟ್ರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದು. ಪರಸ್ಥಳದಿಂದ ಬಂದ ಭಕ್ತರಿಗೆಲ್ಲಾ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ರಥೋತ್ಸವದಲ್ಲಿ ಭೋರಗಿ ಪುರದಾಳ ಭಕ್ತರು, ಮತ್ತು ಬೇರೆ ಬೇರೆ ಜಿಲ್ಲೆಗಳಿಂದ ಬಂದ ಭಕ್ತರು ಭಾಗಿಯಾಗಿದ್ದರು.
ವರದಿ : ಹಣಮಂತ ಚ. ಕಟಬರ್