ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಪಶು ಆಸ್ಪತ್ರೆ ವತಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಎಲ್ಲಾ ಶ್ವಾನ ಹಾಗೂ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ತಾಲ್ಲೂಕಿನ ಎಲ್ಲಾ ಶ್ವಾನಗಳು ಭಾಗವಹಿಸಿ ಅದರಲ್ಲಿ ಅತ್ಯುತ್ತಮವಾದ ಶ್ವಾನಕ್ಕೆ ಪ್ರಥಮ ಬಹುಮಾನ ವಿತರಿಸಲಾಯಿತು.
ಹಾಗೆ ರೈತರಿಗೆ ಹಾಲು ಕರೆಯುವ ಸ್ಪರ್ಧೆಯನ್ನು ಬೆಳಿಗ್ಗೆ ಹಾಗೂ ಸಂಜೆ ಏರ್ಪಡಿಸಲಾಗಿತ್ತು ಇದರಲ್ಲಿ ಅತಿ ಹೆಚ್ಚು ಹಾಲು ಕರೆಯುವ ಹಸುವಿಗೆ ಸೂಕ್ತ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಡಾ. ಮೋಹನ್ ಕುಮಾರ್ ರವರು ಉದ್ಘಾಟಿಸಿದರು.
ಶಾಸಕರು ಆದ ಮಾನ್ಯ ಶ್ರೀ H. M. ಗಣೇಶ್ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ನಡೆದಿದೆ
ಬಹುಮಾನ ವಿತರಣೆ ಪುರಸಭೆ ಅಧ್ಯಕ್ಷರು ಮಧುಸೂದನ್, ಉಪಾಧ್ಯಕ್ಷರು ಅಣ್ಣಯ್ಯ ಸ್ವಾಮಿ ನೇತೃತ್ವದಲ್ಲಿ ಗೆದ್ದ ರೈತರಿಗೆ ಬಹುಮಾನ ವಿತರಿಸಿದರು.
ವರದಿ ಗುಂಡ್ಲುಪೇಟೆ ಕುಮಾರ್