ಕಲಬುರಗಿ: ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಅತ್ಯಂತ ಜನಪರವಾಗಿದ್ದು, ಬಡವರ ಪರವಾಗಿ ಅತ್ಯುತ್ತಮ ಬಜೆಟ್ ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದವರ್ಗ ಜನಾಂಗಕ್ಕೂಕೂಡಹೆಚ್ಚು ಅನುದಾನ ನೀಡಿರುವುದು ಅಲ್ಲದೇ ಸಾಮಾನ್ಯ ಜನ ಸಾಮಾನ್ಯರಿಗೆ ಜನಪರ ಬಜೆಟ್ ಮಂಡಿಸಿರುವುದು ಶ್ಲಾಘನೀಯವಾಗಿದೆ ಎಂದು ಅಖಿಲ ಕರ್ನಾಟಕ ಡಾ. ಎಚ್. ಸಿ. ಮಹಾದೇವಪ್ಪ ಅಭಿಮಾನಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಓಂಕಾರ ವಠಾರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ದಾಖಲೆಯ 16ನೇ ಬಜೆಟ್ ಮಂಡಿಸಿರುವ ಮೂಲಕ ದಾಖಲೆ ರಾಮಯ್ಯ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಇಂದಿನ ಬಜೆಟ್‌ನಲ್ಲಿ ಮುಖ್ಯವಾಗಿ ಕಂಡು ಬಂದಿದ್ದು ರೈತರು ಮತ್ತು ಮಹಿಳೆಯರು ರೈತರಿಗೆ ಬಂಪರ್ ಗಿಫ್ಟ್ ಕೊಡುವುದರ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಶಿಕ್ಷಣ ಕ್ಷೇತ್ರ, ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಬಜೆಟ್ ಇದಾಗಿದ್ದು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸು ಸಾಕಾರಗೊಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ 9,40,009, ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಗೆ 42,000 ಕೋಟಿ ರೂ. ಕೃಷಿ ಭಾಗ್ಯ, ಅನ್ನಭಾಗ್ಯ ಯೋಜನೆಗಳನ್ನು ಮರುಜಾರಿ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ಕಾಮಗಾರಿ ಹಾಗೂ ಕೈಗಾರಿಕಾ ಪ್ರವೇಶ ಹಂಚಿಕೆಯಲ್ಲಿ ಭರ್ಜರಿ ಮೀಸಲಾತಿಯನ್ನು ಈ ಸಲದ ಬಜೆಟ್ ನಲ್ಲಿ ಒದಗಿಸಲಾಗಿದೆ. ಈ ಬಜೆಟ್ ಅತ್ಯಂತ ಜನಪರ ಬಜೆಟ್ ಆಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
- ಕರುನಾಡ ಕಂದ