ಬಳ್ಳಾರಿ/ ಕಂಪ್ಲಿ: ಮಾ.08. ಎ.ಪಿ.ಎಂ.ಸಿ ಮಾರುಕಟ್ಟೆಯ ಶುಲ್ಕವನ್ನು ಆನ್‌ಲೈನ್ ಮೂಲಕ ವರ್ತಕರು ಪಾವತಿಸಲು ಜಾಗ್ರತೆವಹಿಸಬೇಕೆಂದು ಕಂಪ್ಲಿ ಎ.ಪಿ.ಎಂ.ಸಿ ಪ್ರಭಾರ ಕಾರ್ಯದರ್ಶಿ ಕೆ.ರಾಜು ತಿಳಿಸಿದರು.
ಪಟ್ಟಣದ ಎ.ಪಿ.ಎಂ.ಸಿ ಕಛೇರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾಡುವ ಹಿನ್ನಲೆ ವರ್ತಕರಿಗೆ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, 2025ರ ಫೆ.28 ರಿಂದ ಇಡೀ ರಾಜ್ಯಾದ್ಯಂತ ಮಾರುಕಟ್ಟೆ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗಿದೆ. ಏಕೀಕೃತ ಮಾರಾಟ ವೇದಿಕೆ ಅಡಿಯಲ್ಲಿ ಆನ್‌ಲೈನ್ ಮೂಲಕ ಮಾರುಕಟ್ಟೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಕಂಪ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನೋಂದಾಯಿತ ವರ್ತಕರಿಗೆ ಆನ್‌ಲೈನ್ ವ್ಯವಹಾರ ಮಾಡುವುದು ಹೇಗೆ ಎಂಬುವುದರ ಬಗ್ಗೆ ತರಬೇತಿ ಮೂಲಕ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಕಿಗಿರಿಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ವರ್ತಕರಾದ ಟಿ.ಕೊಟ್ರೇಶ, ಟಿ.ರಮಣಯ್ಯ, ಎಸ್.ಎಂ.ನಾಗರಾಜ, ಸತ್ಯನಾರಾಯಣಬಾಬು, ಹರೀಶ, ಹನುಮಂತರೆಡ್ಡಿ, ಸುರೇಶ, ಎ.ರಾಮಲಿಂಗಯ್ಯ, ಜಿ.ಗಿರಿಯಪ್ಪ, ಶ್ರೀನಿವಾಸ ಹಾಗೂ ಮಾರುಕಟ್ಟೆ ಮೇಲ್ವಿಚಾರಕ ಎಂ.ಸುಕೃಸ್ವಾಮಿ, ಕಂಪ್ಯೂಟರ್ ಆಪರೇಟರ್‌ಗಳಾದ ಮಂಜುನಾಥ, ಮಹ್ಮದ್‌ಗೌಸ್ ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ