ಬಳ್ಳಾರಿ/ ಕಂಪ್ಲಿ :ದಿನಾಂಕ 08/03/2025ರ ಶನಿವಾರದಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ಗಂಟೆಗೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿ ಕೆ ಶ್ವೇತಾ ಇವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ ಶ್ವೇತಾ ಇವರು ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ವೃತ್ತಿ ,ಸಂಘಟನೆ, ಕುಟುಂಬ ನಿರ್ವಹಣೆ ಎಲ್ಲದರಲ್ಲೂ ಮಹಿಳೆಯರು ಇಂದು ಮುಂದಿದ್ದಾರೆ ಸಮಸ್ಯೆಗಳು ಬಂದಾಗ ಮಹಿಳೆಯರು ದಿಟ್ಟವಾಗಿ ಎದುರಿಸಿ ನಿಲ್ಲಬೇಕು ಎಂದರು. ಜೊತೆಗೆ ಶೈಕ್ಷಣಿಕವಾಗಿ ಇಂದು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
2025 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯ “ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು ಸಮಾನತೆ, ಸಬಲೀಕರಣ ಎಲ್ಲಾ ಜನರನ್ನು ಸಮಾನವಾಗಿ ಪರಿಗಣಿಸುವ ಸ್ತ್ರೀವಾದಿ ಭವಿಷ್ಯವನ್ನು ಸಾಧಿಸಲು, ಈ ವರ್ಷದ ವಿಷಯವು ಮಹಿಳೆಯರಿಗೆ ಸಮಾನ ಹಕ್ಕುಗಳು, ಅಧಿಕಾರ ಮತ್ತು ಅವಕಾಶಗಳನ್ನು ಅನ್ಲಾಕ್ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತದೆ, ಪ್ರಸ್ತುತ ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳು ಇವೆ ಮಹಿಳೆಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮಹಿಳಾ ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಬಿ ಜಿಲಾನ್ ಸಾಬ್ ಶಾಲಾ ಶಿಕ್ಷಕಿರಾದ ಜೆ ಅಕ್ಷತಾ, ಮಣ್ಣೂರ್ ಲಕ್ಷ್ಮಿ, ಆರ್. ಕೆ .ಮುಸ್ಕಾನ, ಗೌಸಿಯ, ವರ್ಷ ಮಜುಂದಾರ, ಕೋಲ್ಕರ್ ಉಮಾ, ಸುನಿತಾ, ಶಾಂತಾ ಹಾಗೂ ಸಹಾಯಕಿ ಶರ್ಮಾಸ ಬೀ ಸೇರಿದಂತೆ ಸಿಬ್ಬಂದಿ ಪಾಲಕ ಪೋಷಕ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಜಿಲಾನ್ ಸಾಬ್ ಬಡಿಗೇರ