ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಿಗೂ ಹಿರಿಯ ವಯಸ್ಸಿನವರು ಹಾಗೂ ಕಣ್ಣಿನ ಸಮಸ್ಯೆ ಉಳ್ಳವರ ಹಾಗೂ ಅವರ ಆರೋಗ್ಯ ಸಮಸ್ಯೆ ಅರಿತ ಶಾಸಕರು ಹಾಗೂ ಈ ಕ್ಷೇತ್ರದ ಬಡ ಜನರು ಆರೋಗ್ಯ ಸುಧಾರಣೆಗಾಗಿ 6 ಹಾಗೂ 7 ಮಾರ್ಚ್ 2025 ರಂದು ಹೊಸಪೇಟೆ ನಗರದ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ಏರ್ಪಡಿಸಿದ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ನೂರಾರು ಜನ ಮಹಿಳೆಯರು ಮತ್ತು ಪುರುಷರು ಹಾಗೂ ಕಣ್ಣಿನ ದೃಷ್ಟಿಯ ಸಮಸ್ಯೆ ಇದ್ದವರು ಉಚಿತವಾಗಿ ಚಿಕಿತ್ಸೆ ಪಡೆದರು.
ಡಾಕ್ಟರ್ ಎನ್ ಟಿ ಶ್ರೀನಿವಾಸ್ ಅವರು ರಾಜಕೀಯಕ್ಕೆ ಬರುವ ಮುಂಚೆಯೇ ರಾಜಕೀಯದಲ್ಲಿ ಏನು ಸಾಧನೆ ಮಾಡುತ್ತೇನೆ ಗೊತ್ತೇ ಇಲ್ಲ ಆದರೆ ಜನರ ಸೇವೆಗೆ ನಾನು ಸದಾ ಸಿದ್ದನಾಗಿರುವೆ ಎಂಬ ಮಾತನ್ನು ಕೊಟ್ಟಿದ್ದರು ಕೊಟ್ಟ ಮಾತಿನಂತೆ ಜನಗಳ ಸೇವೆಗಾಗಿ ತನ್ನ ರಾಜಕೀಯದಲ್ಲೂ ಮತ್ತು ಕ್ಷೇತ್ರದ ಒಳಿತಿಗಾಗಿ ಹಾಗೂ ಜನರ ಸೇವೆಗಾಗಿ ಸದಾ ಸಿದ್ಧನಾಗಿರುವೆ,
ನಿಮ್ಮ ಬೆಂಬಲ ಹೀಗೆ ಇದ್ದರೆ ಜನಪರ ಕಾರ್ಯಗಳಿಗೆ ನಾನು ಯಾವಾಗಲೂ ಸಹಕಾರ ನೀಡುತ್ತೇನೆ ಎಂದರು. ಶಾಸಕರ ಕಾರ್ಯಗಳಿಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ