ವಿಜಯಪುರ / ತಾಳಿಕೋಟೆ : ಈ ಬಾರಿ ರಂಜಾನ್ ಹೋಳಿ ಹಬ್ಬ ಹಾಗೂ ನಿಮ್ಮೂರಿನ ಶರಣು ಮುತ್ಯಾ ಅವರ ಜಾತ್ರೆ ಕೂಡಿ ಬಂದಿದೆ, ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಂಡು ಶಾಂತಿ ಹಾಗೂ ಸೌಹಾರ್ದತೆಯಿಂದ ಈ ಹಬ್ಬಗಳನ್ನು ಆಚರಿಸಿ ಎಂದು ಸಿಪಿಐ ಮಹಮ್ಮದ್ ಪಸಿಯುದ್ದೀನ್ ಹೇಳಿದರು. ದಿ.10-3-2025 ರ ಸೋಮವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಹೋಳಿ ಹಬ್ಬ ಹಾಗೂ ಶರಣ ಮುತ್ಯಾ ಅವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಂತ ಶಾಂತಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾರ್ಚ್ 13 ರಂದು ಕಾಮದಹನ ಇದ್ದು ಅಂದು ಪ್ರತಿಯೊಬ್ಬರೂ ತಮ್ಮಲ್ಲಿರುವ ಕೆಟ್ಟ ಯೋಚನೆ ಹಾಗೂ ದ್ವೇಷ ಭಾವನೆಗಳನ್ನು ಸುಟ್ಟು ಹಾಕಲು ಪ್ರಯತ್ನಿಸಬೇಕು ಪ್ರತಿಯೊಂದು ಹಬ್ಬದ ಹಿಂದೆ ಶ್ರೇಷ್ಠ ಉದ್ದೇಶವಿದೆ ಅದನ್ನು ತಿಳಿದು ಹಬ್ಬಗಳನ್ನು ಆಚರಿಸಲು ಪ್ರಯತ್ನಿಸಬೇಕು, ಮಾರ್ಚ್ 14 ಮತ್ತು 15ರಂದು ಬಣ್ಣದಾಟ ಇರುವುದರಿಂದ ಯಾರಿಗೂ ತೊಂದರೆ ಆಗದಂತೆ ನೋಡಿಕೊಂಡು ನಿಗದಿತ ಅವಧಿಯಲ್ಲಿ ಬಣ್ಣದಾಟವನ್ನು ಮುಗಿಸಲು ಪ್ರಯತ್ನಿಸಿ ಎಲ್ಲಾ ಹಬ್ಬಗಳನ್ನು ಶಾಂತ ರೀತಿಯಿಂದ ನಡೆಸಲು ಇಲಾಖೆ ನಿಮ್ಮೊಂದಿಗೆ ಸಹಕರಿಸುತ್ತದೆ ನಿಮ್ಮ ಸಹಕಾರವು ಅವರ ಜೊತೆಯಲ್ಲಿರಲಿ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಬಿ.ಎಸ್ ಪಾಟೀಲ್ ಯಾಳಗಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಜಯ ಸಿಂಗ್ ಹಜೇರಿ, ದಲಿತ ಮುಖಂಡರಾದ ಜೈ ಭೀಮ್ ಮುತ್ತಗಿ, ಮುತ್ತಪ್ಪ ಚಾಮಲಾಪುರ, ಸಿದ್ದನಗೌಡ ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ್ ಚೋರ ಗಸ್ತಿ, ಪ್ರಭುಗೌಡ ಮದರಕಲ್, ಕಾಶಿನಾಥ್ ಮುರಾಳ್, ಎಂ ಎಸ್ ಸರ್ ಶೆಟ್ಟಿ, ಅಣ್ಣಪ್ಪ ಜಗತಾಪ್, ಆನಂದ್ ಸಿಂಗ್ ಹಜೇರಿ, ಫಯಾಜ್ ಉತ್ನಾಳ, ಆಸಿಫ್ ಕೆಂಭಾವಿ, ಗೋಪಾಲ್ ಕಟ್ಟಿಮನಿ, ಅಬೂಬಕ್ಕರ್ ಲಹೋರಿ, ತಾಳಿಕೋಟಿ ಠಾಣೆಯ ಪಿಎಸ್ಐ ರಾಮನಗೌಡ ಸಂಕನಾಳ, ಆರ್ ಎಸ್ ಬಂಗಿ, ಇಲಾಖೆಯ ಸಿಬ್ಬಂದಿಗಳು, ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.
ವರದಿ – ನಜೀರ್ ಅಹಮದ್ ಚೋರಗಸ್ತಿ