ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಷ. ಬ್ರ. ಡಾ|| ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಡೋಣೂರು ಚಾನುಕೋಟಿ ಮಠ ಇವರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಭಾರತ ಪುಣ್ಯ ಭೂಮಿ, ಪ್ರಾಚೀನ ಕಾಲದ 18 ಪುರಾಣಗಳು, ವೇದಗಳು, ರಾಮಾಯಣ, ಮಹಾಭಾರತದಲ್ಲಿ ವೀರಶೈವದ ಬಗ್ಗೆ ಲಿಂಗ ಪೂಜೆಯ ಬಗ್ಗೆ ಉಲ್ಲೇಖವಿದೆ. ಆತ್ಮ ಸಾಕ್ಷಾತ್ಕಾರಕ್ಕೆ ಇಷ್ಟಲಿಂಗವನ್ನು ಯಾರು ಬೇಕಾದರೂ ಧಾರಣ ಮಾಡಬಹುದು. ಜೀವಿ ಶಿವನಾಗುವ, ಮಾನವ ಮಹಾ ಮಾನವನಾಗುವ, ಅಂಗ ಲಿಂಗವಾಗುವ ಅಧ್ಬುತ ಸಿದ್ದಾಂತವನ್ನು ಸಿದ್ದಾಂತ ಶಿಖಾಮಣಿ ಗ್ರಂಥಧ ಮೂಲಕ ಜಗತ್ತಿಗೆ ಶ್ರೀ ರೇಣುಕಾಚಾರ್ಯರು ಭೋಧಿಸಿದರು. “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎನ್ನುವ ಸಂದೇಶವನ್ನು ನೀಡಿದ್ದಾರೆ. ನಾವು ಬರೀ ಘೋಷಣೆ ಮಾಡಿದರೆ ಧರ್ಮಾಚರಣೆ ಆಗುವುದಿಲ್ಲ. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಶೀವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಪಂಚಾಕ್ಷರಿ ಸ್ವಾಮಿಗಳು ಬೆಣ್ಣಿಹಳ್ಳಿ ಹಿರೇಮಠ, ಶ್ರೀ ಹಾಲಸ್ವಾಮಿಗಳು, ಅಡವಿಹಳ್ಳಿ ಇವರು ಮಾತನಾಡಿದರು. ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಅವರ ಸಂದೇಶವನ್ನು ನಾವು ಪಾಲಿಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ವೇದಿಕೆಯಲ್ಲಿ ಎಂ. ಪ್ರತಿಭಾ ತಹಶೀಲ್ದಾರ್ ಗ್ರೇಡ್-2, ಎಂ ಶಿವಣ್ಣ ಎಪಿಎಂಸಿ ಉಪಾಧ್ಯಕ್ಷರು, ದೇವರಮನಿ ಕೊಟ್ರೇಶ್ ತಾಲೂಕು ಕಸಪ ಅಧ್ಯಕ್ಷರು, ಅಡಿಕಿ ಮಂಜುನಾಥ ತಾಲೂಕು ಜಂಗಮ ಸಮಾಜದ ಅಧ್ಯಕ್ಷರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಗುರುಕೊಟ್ಟೂರೇಶ್ವರ ದೇವಸ್ಥಾನದ ಧರ್ಮಕರ್ತರಾದ ಶೇಖರಯ್ಯ, ಅಯ್ಯನಹಳ್ಳಿ ಮಲ್ಲಿಕಾರ್ಜುನ, ನಾಗರಾಜ ಹ್ಯಾಳ್ಯಾ, ಎಂಎಂಜೆ ಮೂಗಣ್ಣ, ಗುರು ಟೆಕ್ಸ್ ಟೈಲ್ಸ್ ನ ಮಂಜುನಾಥ, ಶ್ರೀಧರ, ಕೆ ಎಂ ಕೊಟ್ರೇಶ್, ಅಟವಾಳಿಗಿ ಸಂತೋಷ, ಕೆ ಎಂ ಮಲ್ಲಿಕಾರ್ಜುನ, ಕಾರ್ತಿಕ, ಜಗದೀಶ, ವಿರುಪಾಕ್ಷಯ್ಯ, ಕರೂರು ಸತೀಶ, ಎಂ ಎಂ ಜೆ ಜಿತೇಂದ್ರ, ಅಯ್ಯನಹಳ್ಳಿ ನಾಗರಾಜ ವಿವಿಧ ಸಮಾಜದ ಮುಖಂಡರು, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಕಛೇರಿಯ ಸಿಬ್ಬಂದಿ ಹಾಜರಿದ್ದರು.
ಈಶ್ವರಯ್ಯ ಪಿ.ಎಂ ಪ್ರಾರ್ಥಿಸಿದರೆ, ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.
- ಕರುನಾಡ ಕಂದ