ಬಳ್ಳಾರಿ/ ಕಂಪ್ಲಿ : ಸರಳ ಸೂತ್ರಗಳ ಮೂಲಕ ಮಾನವ ಮಹಾದೇವನಾಗುವ ಜೀವಿ ಶಿವನಾಗುವ ಸಿದ್ಧಾಂತದ ಅಡಿಪಾಯದಲ್ಲಿ ವೀರಶೈವ ಧರ್ಮವನ್ನು ಸ್ಥಾಪಿಸಿದ್ದಾರೆ ಎಂದು ವಾಮದೇವ ಶಿವಾಚಾರ್ಯರು ತಿಳಿಸಿದರು.
ಅವರು ಇಲ್ಲಿನ ಎಮ್ಮಿಗನೂರನ ಗ್ರಾಮದ ಹಂಪಿ ಸಾವಿರ ದೇವರ ಮಹಾಂತರ ಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಜಾತಿ ಮತ ಭಾಷೆ ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ಬೇಕಾದ ಸಿದ್ಧಾಂತದ ತಳಹದಿಯನ್ನು ಭದ್ರವಾಗಿ ಕಟ್ಟಿಕೊಟ್ಟ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಪೂರ್ವದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ ಸದಾಶಿವಪ್ಪ ಬಿ ಮಹೇಶ್ ಗೌಡ ಪಿಗ್ಮಿ ಶರಣಪ್ಪ ಎಚ್ ಜಿಡಿಮೂರ್ತಿ ಎಚ್ ರುದ್ರಪ್ಪ ಚೆನ್ನಪ್ಪ ಬಿ ಶ್ರೀಶೈಲ ಗಣಮಠ ಸ್ವಾಮಿ ಜಡೆಸಿದ್ದ ಸ್ವಾಮಿ ಬಜಾರ್ ಬಸುವರಾಜ್ ಎಸ್ ರಾಮಪ್ಪ ಚನ್ನಪಟ್ಟಣ ಬಸವನಗೌಡ ಲೋಕೇಶ್ ಹನುಮನ ಗೌಡ ಸೇರಿದಂತೆ ಸಮಾಜದ ಹಿರಿಯರು ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್