ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮೋಸ ಮಾಡಿರುವ ಕಂಪನಿಗಳ ಆಸ್ತಿ ಮುಟ್ಟುಗೊಲು ಹಾಕಿಕೊಂಡು ಹರಾಜು ಮಾಡಿ ಹಣ ನೀಡಬೇಕು : ಶರಣಬಸಪ್ಪ ದಾನಕೈ ರೈತ ಸಂಘದ ಅಧ್ಯಕ್ಷ

ಕೊಪ್ಪಳ/ ಕುಷ್ಟಗಿ : ರಾಜ್ಯದಲ್ಲಿ ಟಿ.ಪಿ.ಜೆ.ಪಿ ಸಂಘಟನೆ ಪ್ರತಿಯೊಂದು ಜಿಲ್ಲೆಯಲ್ಲಿ ಸಂಘಟನೆ ಮಾಡಿ ವಿವಿಧ ಕಂಪನಿಗಳಿಂದ ಮೋಸವಾಗಿರುವ ಗ್ರಾಹಕರ ಪರವಾಗಿ ಹೋರಾಟ ಮಾಡುತ್ತಾ ಬಂದಿರುತ್ತದೆ ಆದರೆ ಹಣ ಬಂದಿಲ್ಲ, ಮೋಸ ಮಾಡಿರುವ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆ ನಡೆಸಿ ಬಡ ರೈತರ, ಕೂಲಿ ಕಾರ್ಮಿಕರ, ಬೀದಿ ವ್ಯಾಪಾರಿಗಳ, ಮಧ್ಯಮ ವರ್ಗದ ಸಾರ್ವಜನಿಕರ ಹಣವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಯಲಬುರ್ಗಾ ತಾಲೂಕ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಹಣ ಕೊಡಿಸಿ ಪ್ರಾಣ ಉಳಿಸಿ ಎಂದು ಮಾರ್ಚ್ ೧೨ ರಂದು ಪವರ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಮಾತನಾಡಿ ರೈತರಿಗೆ ಬಡವರಿಗೆ ಮೋಸ ಮಾಡಿರುವ ಕಂಪನಿಗಳಾದ ಸಮೃದ್ಧ ಜೀವನ ,ಗ್ರೀನ್ ಬಡ್ಸ್ , ಪರ್ಲ್ಸ್, ವಿ-ತ್ರಿ, ಗುರುಟೀಕ್ , ಅಗ್ರಿಗೋಲ್ಡ್, ಜನಸ್ನೇಹಿ ಹಿಗೇ ವಿವಿಧ ಕಂಪನಿಗಳಲ್ಲಿ ಹಣವನ್ನು ಬಡ ರೈತರು, ಕೂಲಿಕಾರರು ಸೇರಿದಂತೆ ತಮ್ಮ ಮಕ್ಕಳ ಬದುಕಿಗಾಗಿ ಹಣ ತುಂಬಿ ಹಣ ಮರಳಿ ಬರಲಾರದೆ ೧೦ ವರ್ಷಗಳಿಂದ ಕಂಗಾಲಾಗಿ ತೊಂದರೆ ಅನುಭವಿಸಿದ್ದಾರೆ ಇಂತಹ ಅಧಿಕವಾಗಿ ಇರುವ ೧೮೦ ಕ್ಕೂ ವಿವಿಧ ಕಂಪನಿಗಳು ಮೋಸ ಮಾಡಿರುತ್ತವೆ ಇದರಿಂದ ಎಷ್ಟೋ ಬಡ ಪಾಯಿಗಳು ಮಾನ ಮರ್ಯಾದೆಗೆ ಅಂಜಿ ಜೀವದ ಭಯಕ್ಕೆ ಹೆದರಿಕೊಂಡು ಊರು ಬಿಟ್ಟಿದ್ದಾರೆ ,ಕೆಲವರು ಆತ್ಮಹತ್ಯೆಗೆ ಶರಣರಾಗಿದ್ದಾರೆ ಇದರಿಂದ ಅವರ ಕುಟುಂಬದವರ ಪಾಡೆನು ? ಆದ್ದರಿಂದ ೨೦೧೯ ರ ಬಡ್ಸ್ ಕಾಯ್ದೆ ಪ್ರಕಾರ ಹಾಗೂ ಇನ್ನಿತರ ಕಾಯ್ದೆ ನಿಯಮಗಳನ್ನು ಜಾರಿ ಮಾಡಿ ಇಂತಹ ಕಂಪನಿಗಳಿಗೆ ಸರ್ಕಾರದವರೆ ಅನುಮತಿ ನೀಡಿದ್ದಿರಿ ! ಆದ್ದರಿಂದ ಬಡ ರೈತರ ಜೀವ ಉಳಿಸುವ ಶಕ್ತಿ ನಿಮ್ಮ ಕೈಯಲ್ಲಿದೆ ಆದ್ದರಿಂದ ಸಿ.ಎಂ. ಸಿದ್ದರಾಮಯ್ಯನವರು ಎಲ್ಲಾ ಕಂಪನಿಗಳ ಕಂಪ್ಯೂಟರ್ ಸಿಸ್ಟಂ ಸಾಪ್ಟ್ ವೇರ್ ಓಪನ್ ಮಾಡಿಸಿ, ಹಣ ನೀಡುವ ಕಾರ್ಯ ಮಾಡಬೇಕು ಮತ್ತು ನಿರುದ್ಯೋಗ ಸಮಸ್ಯೆಗಳಿಂದ ಏಜೆಂಟರು ಸೇರಿಕೊಂಡು ಕಮಿಷನ್ ಆಸೆಗಾಗಿ ಗ್ರಾಹಕರ ಹಣ ತುಂಬಿ ಸಾರ್ವಜನಿಕರ ಕಿರಿ ಕಿರಿ ತಾಳಲಾರದೆ ನಿರುದ್ಯೋಗಿಯಾಗಿದ್ದಾರೆ ಇಂತವರಿಗೆ ಉದ್ಯೋಗ ಒದಗಿಸಿ ಇವರ ಬಾಳ ಬದುಕಿಗೆ ಸರ್ಕಾರ
ಆಸರೆಯಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. ಟಿ.ಪಿ.ಜೆ.ಪಿ ಸಂಘಟನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ ಅವರು ಮಾತನಾಡಿ ಎಪ್ರಿಲ್‌ ೯ ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪವರ್ ಅಭಿಯಾನದಲ್ಲಿ ವಿವಿಧ ಕಂಪನಿಗಳಲ್ಲಿ ಮೋಸ ಹೋಗಿರುವ ಗ್ರಾಹಕರು, ಏಜೆಂಟರು ೨ ಲಕ್ಷಕ್ಕೂ ಅಧಿಕವಾಗಿ ಭಾಗವಹಿಸಿ ಟಿ.ಪಿ.ಜೆ.ಪಿ ಸಂಘಟನೆಯ ರಾಜ್ಯ ಅಧ್ಯಕ್ಷ ಅಪ್ಪಾಸಾಹೇಬ ಬುಗಡೆ ಅವರಿಗೆ ಸಾಥ್ ನೀಡಬೇಕು ಅಂದಾಗ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತದೆ ಎಂದರು. ಕುಷ್ಟಗಿ ತಾಲೂಕು ಅಧ್ಯಕ್ಷ ಮಂಜೂರ ಅಲಿ ಬನ್ನು, ಕೊಪ್ಪಳ ತಾಲೂಕ ಅಧ್ಯಕ್ಷ ಗವಿಸಿದ್ದಪ್ಪ ಪಲ್ಲೇದ ಅವರು ಮಾತನಾಡಿ ಹಣ ಮರಳಿ ಪಡೆಯಬೇಕಾದರೆ ಹಣ ಕಳೆದುಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಗ್ರಾಹಕರಾದ ಶಿವಯ್ಯ ರಾವಣಿಕಿಮಠ, ಕೆ.ಡಿ.ವಾಲೀಕಾರ, ಯಲ್ಲಪ್ಪ ಜಿಗಳೂರ , ಶರಣಪ್ಪ ಪತ್ತಾರ, ರಜೀಯಾ ಸುಲ್ತಾನ್, ಬಾಳನಗೌಡ ಪುಂಡಗೌಡರ, ವೆಂಕಟೇಶ ವಡ್ಡರ, ಕಾಳಪ್ಪ ಬಡಿಗೇರ, ಹಮ್ಮದ ಹುಸೇನ್ ರಾಂಪೂರ, ಶಾಂತಪ್ಪ ಇಟಗಿ, ದ್ಯಾಮಣ್ಣ ಸೂಡಿ ಸೇರಿದಂತೆ ಇತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ