ಯಾದಗಿರಿ/ ಶಹಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದಿಂದ ತಾಲ್ಲೂಕಿನ ಅಣಬಿ ಹೋಬಳಿ ಹಾಗೂ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ಅವರು ಮಾತನಾಡಿ ರೈತ ಸಂಘ ಅಂದ್ರೆ ರಾಜಕೀಯ ವ್ಯಕ್ತಿಯಲ್ಲ ಜಾತೀನೆ ಇಲ್ಲ ಹಸಿರು ಶಾಲು ಯಾರು ಹಾಕುತ್ತಾರೋ ಅವರು ನಮ್ಮ ಜಾತಿ ರೈತ ಜಾತಿ ಸುತ್ತಮುತ್ತಲಹಳ್ಳಿಗಳಲ್ಲಿ ನಮ್ಮ ರೈತ ಬಾಂಧವರಿಗೆ ಏನೇ ಸಮಸ್ಯೆ ಇರಲಿ ಅವರಿಗೆ ನಾವು ಸ್ಪಂದನೆ ಕೊಡಬೇಕು ಎಂದರು.
ನಂತರ ಶಹಾಪುರ ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಕೋಲ್ಕಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಒಂದು ಸಂಘಟನೆ ಅಂದರೆ ಒಬ್ಬ ಬಡವನೇ ಇರಲಿ ಯಾರೇ ಒಬ್ಬ ವ್ಯಕ್ತಿ ಇರಲಿ ಒಂದು ನಾಡಕಚೇರಿ ಸಮಸ್ಯೆ ಇರಲಿ ಆರ್ ಆರ್, ತಹಶೀಲ್ದಾರ್ ಕಚೇರಿ ಅಲೆದಾಟ ಯಾವುದೇ ಸಮಸ್ಯೆ ಇರಲಿ ಒಂದು ರೈತ ಸಂಘಟನೆ ಮಾಡಿರಿ ಒಬ್ಬ ರೈತನಿಗೆ ಅನ್ಯಾಯ ಆಗುತ್ತೆ ಅಂದರೆ ಅದು ನಮ್ಮೆಲ್ಲರ ಸಮಸ್ಯೆ ಎಂದು ಹೋರಾಟ ಮಾಡಿ ನ್ಯಾಯ ಪಡೆಯೋಣ ಆ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಹಗರಟಗಿ ಹಾಗೂ ಶಹಾಪುರ ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಕೋಲ್ಕರ್ ನೇತೃತ್ವದಲ್ಲಿ ತಾಲೂಕು ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಅಯ್ಯಾಳ್, ರಾಜು ಆಲ್ದಾಳ ತಾಲೂಕು ಉಪಾಧ್ಯಕ್ಷರು,
ಹೋಬಳಿ ಗೌರವಾಧ್ಯಕ್ಷ ಬಾಬ ಮಕಾಶಿ,
ಹೋಬಳಿ ಅಧ್ಯಕ್ಷರಾದ ಚಂದ್ರಕಾಂತ್ ತಂದೆ ತೊಕಲಪ್ಪ ಗುಂಡಳ್ಳಿ,
ಗ್ರಾಮ ಘಟಕ ಗೌರವಾಧ್ಯಕ್ಷರಾದ
ಪರಸಪ್ಪ ತಂದೆ ಹನುಮಂತ,
ಅಧ್ಯಕ್ಷರಾದ ಸಿದ್ದಪ್ಪ ತಂದೆ ನಿಂಗಪ್ಪ ಶಹಾಪುರ,
ಉಪಾಧ್ಯಕ್ಷರಾದ ಇಮಾಮ್ ಸಾಬ್ ತಂದೆ ದಶಗಿರಿ,
ಹಾಗೂ ಉಪಾಧ್ಯಕ್ಷರಾದ ಹನುಮಂತ ತಿಮ್ಮಣ್ಣ ದೇವಗುಡ್ಡ,
ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾಳಪ್ಪ,
ಕಾರ್ಯದರ್ಶಿ ಶರಣಪ್ಪ ತಂದೆ ಶಿವಪ್ಪ,
ಸಹ ಕಾರ್ಯದರ್ಶಿ ಮರಿಯಪ್ಪ ತಂದೆ ಸೋಮಲಿಂಗಪ್ಪ,
ಸಂಚಾಲಕರು ಮುದುಕಪ್ಪ ತಂದೆ ಸುಭಾಷ್,
ಸಹ ಸಂಚಾಲಕರು ದೇವೇಂದ್ರಪ್ಪ ತಂದೆ ಶರಣಪ್ಪ, ಕೋಶಾಧ್ಯಕ್ಷರು ನಾಗಪ್ಪ ತಂದೆ ರಾಯಪ್ಪ ಕನಕಪುರ,
ಹಾಗೂ ಸದಸ್ಯರುಗಳಾದ ವೀರಪ್ಪ ತಂದೆ ನಾಗಪ್ಪ ಸಂಜು ತಂದೆ ಈರಣ್ಣ, ಯಮುನಪ್ಪ ತಂದೆ ಮರಿಯಪ್ಪ, ಇರ್ಘಟ್ಟಪ್ಪ ತಂದೆ ಶರಣಪ್ಪ,
ಸಾಹೇಬಣ್ಣ ತಂದೆ ಮಾನಪ್ಪ, ಮಲ್ಲಪ್ಪ ತಂದೆ ರಾಯಪ್ಪ, ಬಸಲಿಂಗಪ್ಪ ಗೌಡ ತಂದೆ ಮರಿಯಪ್ಪ ಗೌಡ, ಬಸವರಾಜ್ ತಂದೆ ಸಿದ್ದಪ್ಪ, ಹೊನ್ನಪ್ಪ ತಂದೆ ಶರಣಪ್ಪ, ಸಿರಪ್ಪ ತಂದೆ ಧರ್ಮಪ್ಪ, ಸಿದ್ದಪ್ಪ ತಂದೆ ಈರಪ್ಪ, ಪರಸಪ್ಪ ತಂದೆ ಅಯ್ಯಪ್ಪ ಸೇರಿದಂತೆ ಇನ್ನಿತರ ಸದಸ್ಯರು, ಪದಾಧಿಕಾರಿಗಳು, ಸ್ಥಳೀಯರು, ರೈತ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
— ಕರುನಾಡ ಕಂದ