ಬಳ್ಳಾರಿ/ ಕಂಪ್ಲಿ : ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸ ಪೋಸ್ಟ್ ಪ್ಲೇಸ್ ಮೆಂಟ್ ಸೆಲ್ ಹಾಗೂ ವಾಣಿಜ್ಯ ವಿಭಾಗ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಂಗರಾಜ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ನಾಗರಿಕರಿಗೂ ಹಣಕಾಸು ಸಾಕ್ಷರತೆ ಇರಬೇಕಾದ ಜ್ಞಾನವಾಗಿದೆ. ಇದು ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಿ ಜೀವನವನ್ನು ನಿರ್ವಹಿಸಲು ಹಾಗೂ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ತಮ್ಮ ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಪದವಿ ಹಂತ ವಿದ್ಯಾರ್ಥಿಗಳ ಜೀವನಕ್ಕೆ ಮಮಹತ್ವಾಗಿದೆ. ಪದವಿ ಮುಗಿದ ನಂತರ ಉದ್ಯೋಗಕ್ಕೆ ಬೇಕಾಗಿರುವ ಆರ್ಥಿಕ ಮಾಹಿತಿ ಜೊತೆಗೆ ಸಬ್ಸಿಡಿಗಳನ್ನು ಉದ್ಯಮಶೀಲತೆಯ ಗುಣಲಕ್ಷಣ ಹಾಗೂ ಆರ್ಥಿಕ ಸಾಕ್ಷರತೆ, ಸಾಮಾಜಿಕ ಭದ್ರತಾ ಯೋಜನೆ ಆರ್ಥಿಕ ಅಪರಾಧಗಳು ಕುರಿತು ಮಾಹಿತಿ ನೀಡಲಾಯಿತು. ಪ್ಲೇಸ್ಮೆಂಟ್ ಸೆಲ್ ಸಮಿತಿ ಸಂಯೋಜಿಕೆ ಡಾಕ್ಟರ್ ಅನ್ನಪೂರ್ಣ ಗುಡದೂರು, ಉಪನ್ಯಾಸಕರಾದ ಮಮತಾ ಜಿ ಎಂ, ಡಾಕ್ಟರ್ ಕೆ ಮಹೇಶ್, ಡಾ. ಜೆ ಕೃಷ್ಣ, ಬಾಲಾಜಿ, ಡಾ ಸಂದೀಪ್ ಕುಮಾರ್, ಪ್ರಗತಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಹಾಗೂ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ