ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದ ಮಹತ್ವದ ರೈತರ ಸಭೆಯಲ್ಲಿ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಯ ಇನ್ನುಳಿದ ಕಾಮಗಾರಿಗಳಾದ ಕಿರುಗಾವಲಿ/FIC ನಿರ್ಮಾಣವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು. ಈ ಯೋಜನೆ 38 ಗ್ರಾಮಗಳು ಮತ್ತು 50,000 ಎಕರೆ ಕೃಷಿ ಭೂಮಿಗೆ ನೀರು ಪೂರೈಸಲು ಮಹತ್ವದ ಪಾತ್ರ ವಹಿಸಲಿದೆ.
ವಿವಿಧ ರೈತ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ರೈತರು ಮಾನ್ಯ ಮುಖ್ಯಮಂತ್ರಿಗಳು ಮತ್ತು ನೀರಾವರಿ ಮಂತ್ರಿಗಳನ್ನು ಭೇಟಿ ಮಾಡುವುದು ಸೇರಿದಂತೆ ಮುಂದಿನ ಹಂತದ ನಿರ್ಧಾರಗಳನ್ನು ಕೈಗೊಂಡರು. ಒತ್ತಾಯ ಹೆಚ್ಚಿಸಲು ಪ್ರತಿಭಟನೆಗಳು ಮತ್ತು ಜಾಗೃತಿಯ ಕಾರ್ಯಕ್ರಮಗಳು ನಡೆಸಲು ಯೋಜನೆ ರೂಪಿಸಲಾಗಿದೆ.
ನಾಯಕರು ಕೃಷಿ ಉತ್ಪಾದನೆ ಹಾಗೂ ರೈತರ ಜೀವನೋನ್ನತಿಯ ಹಿತ ದೃಷ್ಟಿಯಿಂದ ಈ ಯೋಜನೆ ಬೇಗನೆ ಪೂರ್ಣಗೊಳ್ಳಬೇಕೆಂದು ಒತ್ತಿ ಹೇಳಿದರು. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ನಿರೀಕ್ಷೆಯಿದೆ, ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ ಸಮಾಜ ಸೇವಕರು ಹಾಗೂ ನೇತ್ರ ತಜ್ಞರು ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ, ಸಿದ್ದು ಬುಳ್ಳಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು, ರೈತ ಸಂಘದ ಜಿಲ್ಲಾ ಕಾರ್ಯದರ್ಶಿಗಳು ವಿಜಯಪುರ, ಸಂಗಮೇಶ ಸಗರ ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷರು ವಿಜಯಪುರ, ಅರವಿಂದ ಕುಲಕರ್ಣಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರಭುಗೌಡ ಪಾಟೀಲ ಅಸ್ಕಿ, ಶಿವಪುತ್ರ ಮಾಡಗಿ, ಸೋಮನಗೌಡ ಪಾಟೀಲ ತಿಳಗೂಳ, ಹಣಮಂತ ವಡ್ಡರ, ಕಿರಣಕುಮಾರ ದೇಸಾಯಿ, ಕಾಶಿನಾಥ್ ತಳವಾರ್ ಅಸ್ಕಿ, ಕುಮಾರ ದೇಸಾಯಿ ಹಾಗೂ 38 ಹಳ್ಳಿಯ ರೈತರು ಉಪಸ್ಥಿತರಿದ್ದರು.
ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ, ತಾಳಿಕೋಟೆ