ಬಳ್ಳಾರಿ / ಕಂಪ್ಲಿ : ಸಾಹಿತ್ಯ ಸಿರಿ ಪ್ರತಿಷ್ಠಾನ ( ರಿ. ) ವತಿಯಿಂದ ಕಂಪ್ಲಿ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಕೋಟೆಯ ಜಿ ಪ್ರಕಾಶರವರ 14ನೇ ಕಾವ್ಯ ಕಂಪನ ಕವನ ಸಂಕಲನ ನಗರದ ಗಂಗಾ ಸಂಕೀರ್ಣದಲ್ಲಿ ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಹಿತರಕ್ಷ ಸಂಘದ ಗೌರವಾಧ್ಯಕ್ಷರಾದ ಕ. ಮ. ಹೇಮಯ್ಯಸ್ವಾಮಿರವರು ಕಾವ್ಯ ಕಂಪನ ಒಂದು ಉತ್ತಮ ಓದುಗರ ಕವನ ಸಂಕಲನವಾಗಿದ್ದು ಇಂದಿನ ಜಗತ್ತಿಗೆ ಕಾವ್ಯವು ಮನಸ್ಸಿನ ಅನೇಕ ಭಾವನೆಗಳನ್ನು ಒಳಗೊಂಡಿದೆ. ಕಾವ್ಯ ಶೈಲಿಯಲ್ಲಿ ಬಹಳ ಕಡಿಮೆ ಸಾಹಿತ್ಯ ಉಳಿದುಕೊಂಡಿದ್ದರೂ, ಕಾವ್ಯಕ್ಕೆ ಕವಿಗಳಿರುವಷ್ಟೇ ವ್ಯಾಖ್ಯಾನಗಳಿವೆ. ಕಾವ್ಯವು ಶಕ್ತಿಯುತವಾಗಿದೆ. ಈ ಕಾವ್ಯ ಕಂಪನ ಕವನ ಸಂಕಲನ ಪುಸ್ತಕವನ್ನು ಎಲ್ಲರೂ ಕೊಂಡು ಓದಬೇಕು ಎಂದು ತಿಳಿಸಿದರು.
ಕೃತಿ ಪರಿಚಯವನ್ನು ಸಾಹಿತಿ ಹಾಗೂ ಹಿರಿಯ ವರದಿಗಾರರಾದ ಬಂಗಿ ದೊಡ್ಡ ಮಂಜುನಾಥ ಪರಿಚಯಿಸಿ ಮಾತನಾಡಿ ಜಿ ಪ್ರಕಾಶ್ರವರ ಈ ಕಾವ್ಯಕಂಪನ 14ನೇ ಕೃತಿಯಾಗಿದ್ದು ಇದರಲ್ಲಿ 77 ಕವನಗಳು ಬಹಳ ಸುಂದರವಾಗಿ ಮೂಡಿಬಂದಿದೆ. ಈ ಕವನ ಸಂಕಲನದಲ್ಲಿ ಸಮಾಜದ ನಿರ್ದೇಶನ ನೀಡಿ ತಿಳಿ ಹೇಳಿದ್ದಾರೆ. ಕರುಣೆ ಇಲ್ಲದ ಜನರ ಮಧ್ಯೆ ಹೇಗೆ ಬದುಕಬೇಕು ಮತ್ತು ಬದುಕಿನ ಸಾರ್ಥಕತೆ ಸಾಧನೆ ನಾವಾಗಿ ಹುಡುಕಬೇಕು ಎಂಬುದನ್ನು, ಅರಿವಿನ ಹಂಬು ಹಿಡಿದು ದಡ ಮುಟ್ಟಿಸಿದಂತೆ ಇಲ್ಲಿ ಕವಿಗಳು ಓದಗಿರಿಗೆ ತಿಳಿಸಿದ್ದಾರೆ ಎಂದರು.
ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕ ಅಧ್ಯಕ್ಷರಾದ ಬಿ. ರಮೇಶ ಮಾತನಾಡಿ ಈ ದಿನ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡಿರುವ ಸಾಹಿತ್ಯದ ಅಭಿರುಚಿ ಇನ್ನು ಬೆಳೆಯಬೇಕು ಇಂಥ ಅಭಿವೃದ್ಧಿ ಉಳಿದುಕೊಂಡಿರುವುದು ಸಾರ್ಥಕತೆಯಾಗಿದೆ ಇಂಥ ಕೃತಿಗಳು ಇನ್ನೂ ಹೊರಬರಲಿ ಅನೇಕ ಕವಿಗಳು ತಮ್ಮ ಕೃತಿಗಳನ್ನು ರಚಿಸಲಿ ಕನ್ನಡ ಅಕ್ಷರ ಸಂಸ್ಕೃತಿಯ ಉಳಿವಿಗಾಗಿ ನಮ್ಮ ರಕ್ಷಣಾ ವೇದಿಕೆ ಯಾವಾಗಲೂ ಸಹಕರಿಸುತ್ತದೆ ಎಂದು ಶುಭ ಹಾರೈಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಬಾಲಾಜಿ ಎಂ.ಪಿ. ಮಾತನಾಡಿ ನಾವೆಲ್ಲರೂ ಮೊಬೈಲ್ ಮಂಪರಿನಲ್ಲಿ ಇದ್ದೇವೆ ಇದನ್ನು ಬಿಟ್ಟು ಪುಸ್ತಕದ ಮಂಪರಿನ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳಬೇಕು. ಪುಸ್ತಕ ಮತ್ತು ಸಂಸ್ಕೃತಿಯನ್ನು ಎಲ್ಲಾ ಸಂಘ ಸಂಸ್ಥೆಗಳು ಬೆಳೆಸಬೇಕು ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಮಕ್ಕಳಿಗೆ ಪುಸ್ತಕಗಳನ್ನ ನೀಡಿ ಎಂದು ತಿಳಿಸಿದರು. ಕಾವ್ಯ ಕಂಪನ ಕವನ ಸಂಕಲನದ ಧರ್ಮ ನಿಜಭಕ್ತಿ ಯೋಗಿಗಳ ಯೋಗ್ಯತೆ ಅದರಲ್ಲೂ ರಾಮನ ಭಕ್ತಿ, ರಾಮರಾಜ್ಯ , ಕೃಷ್ಣ ಮತ್ತು ಗಾಂಧಿ ಕವನ ಬಗ್ಗೆ ಹೇಳುತ್ತಾ ಗಾಂಧಿ ಹಾಗೂ ಸ್ಥಿತ ಪ್ರಜ್ಞೆ ಬಗ್ಗೆ ಜಗದ ಆಕರ್ಷಣೆ ಬಗ್ಗೆ ತಿಳಿಸಿದರು.
ಸಂತೋಷ ಸೋಗಿ ಮಾತನಾಡಿ ಲೇಖಕರ ಪ್ರವಾಸ ಕಥನವಾದ ಕಂಪ್ಲಿಯಿಂದ ಕಾಶಿಯವರಿಗೆ ಪ್ರವಾಸ ಕಥನವನ್ನು ಓದಿದ್ದೇನೆ ಇವರು ರಚಿಸಿದ ಎಲ್ಲಾ ಕೃತಿಗಳು ಉತ್ತಮವಾಗಿವೆ. ಇವರು ಸೃಜನಶೀಲರು ಇವರ ಪ್ರತಿಯೊಂದು ಕವನದಲ್ಲೂ ಪ್ರೀತಿಯ ಗಮವಿದೆ ಆದ್ದರಿಂದ ಈ ಕವನ ಸಂಕಲನ ಕೊಂಡು ಓದಿ ಪ್ರತಿಯೊಬ್ಬರು ಬದುಕಿನಲ್ಲಿ ನಮಗೆ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹ ಚಿಮ್ಮಿಸುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಷಣ್ಮುಖಪ್ಪ ಚಿತ್ರಗಾರ ಮಾತನಾಡಿ ಕಾವ್ಯ ಕತ್ತಲೆಯೊಳಗೆ ಉಸಿರಾಡುವ ಧ್ವನಿಯಾಗಿದೆ ಎಂದರು. ವಿದ್ಯಾರ್ಥಿಗಳು ಕಾವ್ಯ, ಕಾದಂಬರಿ, ಕಥೆಗಳನ್ನು ಓದಬೇಕು ಎಂದು ತಿಳಿಸಿದರು.
ಈ ಈ ಸಂದರ್ಭದಲ್ಲಿ ಆಂಗ್ಲ ಕವಿ/ ಶಿಕ್ಷಕ ನಟರಾಜ, ಸಾಹಿತ್ಯ ಸಿರಿ ಪದಾಧಿಕಾರಿಗಳಾದ S.D. ಬಸವರಾಜ, ಡಾ. ಸುನಿಲ, ಎಂ. ಬಿ.ನೆಲಜೇರಿ, ಚಂದ್ರಯ್ಯ ಸೊಪ್ಪಿನ ಮಠ, ಎಲಿಗಾರ್ ವೆಂಕಟರೆಡ್ಡಿ, ಅಶೋಕ್ ಕುಕನೂರು, ಯು. ಎಂ. ವಿದ್ಯಾಶಂಕರ, ಬಡಿಗೇರ್ ಜಿಲಾನಸಾಬ್, ಎಸ್. ವಿಜಯಲಕ್ಷ್ಮಿ ಈರಮ್ಮ ನಾಗರಾಜ, ವೆಂಕಟರೆಡ್ಡಿ ಇತರರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಎಸ್ ರಾಮು ನಿರ್ವಹಿಸಿದರು. ಶಾಮ್ ಸುಂದರ ವಂದನಾರ್ಪಣೆ ಮಾಡಿದರು.
ವರದಿ : ಜಿಲಾನ್ ಸಾಬ್ ಬಡಿಗೇರ್