ವಿಜಯಪುರ/ಸಿಂದಗಿ: ದಿ 17-03-2025 ರಂದು ಜಯ ಕರ್ನಾಟಕ ಸಂಘಟನೆ ಸಿಂದಗಿ ತಾಲೂಕಾ ಘಟಕದ ವತಿಯಿಂದ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೋರಾಟನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮಾಂತೇಶ ಯಡ್ರಾಮಿ, (ಬಿ.ಇ.ಓ) ಆಗಮಿಸಿ ಮನವಿಯನ್ನು ಸ್ವೀಕರಿಸಿ ಕಾಲಾವಕಾಶ ಕೇಳಿ ಕೆಲವು ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳಿ ಆಶ್ವಾಸನೆ ನೀಡಿದರು, ಅದರಲ್ಲಿ ಒಂದು ಕೋಣೆಯು ಶಿಥಿಲಗೊಂಡಿದ್ದು ಬಯಲಲ್ಲಿ ಪಾಠ ಭೋದನೆ ಮಾಡುತ್ತಿದ್ದಾರೆ ಶಾಲೆಗೆ ಬೇಟಿ ನೀಡಿ ಪರಿಶೀಲಿಸಿದ್ದಿರಿ, ಕುಡಿಯುವ ನೀರು ಹಾಗೂ ಶಾಲಾ ಕೊಠಡಿಗಳು ತೊಂದರೆ ಇದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಲಿಖಿತವಾಗಿ/ ಮೌಖಿಕವಾಗಿ ತಿಳಿಸಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಆದ ಕಾರಣ ದಯಾಳುಗಳಾದ ತಾವುಗಳು (3) ಕೋಣೆಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೂತನ ಕಾಂಪೌಂಡ್ ನಿರ್ಮಿಸಿ ಶಾಲಾ ಮಕ್ಕಳಿಗೆ ಕಲಿಯಲು ಅನುಕೂಲ ಮಾಡಿಕೊಡುವಿರೆಂದು ಸಂಘಟನೆಯ ವತಿಯಿಂದ ಮನವಿ ಸಲ್ಲಿಸಿದರು.
ಈ ಎಲ್ಲಾ ಸಮಸ್ಯೆಗಳಿಗೆ ಒಂದು ತಿಂಗಳ ಒಳಗಾಗಿ ಸ್ಪಂದಿಸದಿದ್ದರೆ ಜಯ ಕರ್ನಾಟಕ ಸಂಘಟನೆ, ಹಾಗೂ ಕೆ,ಜಿ,ಎಸ್, ಹಂದಿಗನೂರ ಶಾಲೆಯ (ಎಸ್,ಡಿ,ಎಮ್, ಸಿ) ಸರ್ವ ಸದಸ್ಯರುಗಳ ವತಿಯಿಂದ ಶಾಲೆ ಬೀಗ ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮದ ನೇತೃತ್ವವನ್ನು ಚನ್ನಪ್ಪಗೌಡ ಎಸ್, ಬಿರಾದಾರ, ಜಿಲ್ಲಾ ವಕ್ತಾರರು ಹಾಗೂ ಸಿಂದಗಿ ತಾಲೂಕಾಧ್ಯಕ್ಷರಾದ ಸಂತೋಷ ಮನಗೂಳಿ, ಮತ್ತು ದೇವರ ಹಿಪ್ಪರಗಿ ತಾಲೂಕಾಧ್ಯಕ್ಷರಾದ ಸಿದ್ರಾಮಪ್ಪ ಅವಟಿ, ಹಾಗೂ ತಾಲೂಕಾ ಪದಾಧಿಕಾರಿಗಳಾದ ರಮೇಶ ರಾಠೋಡ, ತಾಲೂಕಾ ಕಾರ್ಯಧ್ಯಕ್ಷರು, ಭೀಮನಗೌಡ ಬಿರಾದಾರ, ತಾಲೂಕಾ ಪ್ರಧಾನ ಕಾರ್ಯದರ್ಶಿಗಳು, ಪ್ರವೀಣ್ ಶೆಟ್ಟಿ , ಮುಖಂಡರು, ಹಾಗೂ (ಎಸ್,ಡಿ,ಎಮ್,ಸಿ) ಉಪಾಧ್ಯಕ್ಷರಾದ ಎಮ್,ಎನ್,ಗುಬ್ಬೇವಾಡ, ಹಾಗೂ ಸದಸ್ಯರಾದ ವೀರುಪಾಕ್ಷ ಮಾಶ್ಯಾಳ, ಹಾಗೂ ವ್ಹಿ , ಆರ್, ಕುಲಕರ್ಣಿ, ಮುಖ್ಯ ಗುರುಗಳು, ಹಾಗೂ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಹಣಮಂತ.ಚ. ಕಟಬರ