
ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ 6 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ದತೆ ಕೈಗೊಂಡಿದ್ದು, ಇಲ್ಲಿನ ಸರ್ಕಾರಿ ಷಾಮಿಯಾಚಂದ್ ಪದವಿ ಪೂರ್ವ ಕಾಲೇಜಿ(ಪ್ರೌಢ ವಿಭಾಗ)ನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ನೋಂದಣಿ (ನಂಬರ್)ಗಳನ್ನು ಹಾಕುತ್ತಿರುವುದು ಗುರುವಾರ ಕಂಡು ಬಂತು.
ಪ್ರಸಕ್ತ ಸಾಲಿನ ಮಾ.21ರಿಂದ ಆರಂಭಗೊಳ್ಳಲಿರುವ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆ ಕಂಪ್ಲಿ ಪಟ್ಟಣದ ಸರ್ಕಾರಿ ಷಾಮಿಯಾಚಂದ್ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಕೇಂದ್ರಕ್ಕೆ ಮುಖ್ಯ ಅಧೀಕ್ಷಕರಾಗಿ ಸುಜಾತ, ಕಸ್ಟೋಡಿಯನ್ ಆಗಿ ಮುದುಕಪ್ಪ, ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆಗೆ ಮುಖ್ಯ ಅಧೀಕ್ಷಕರಾಗಿ ಹೆಚ್.ಶಕುಂತಲಾದೇವಿ, ಉಪ ಅಧೀಕ್ಷಕರಾಗಿ ರಾಮಚಂದ್ರಪ್ಪ, ಕಸ್ಟೋಡಿಯನ್ ಆಗಿ ಮಲ್ಲಿಕಾರ್ಜುನ, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಮುಖ್ಯ ಅಧೀಕ್ಷಕರಾಗಿ ಗಾಯತ್ರಿದೇವಿ, ಉಪ ಮುಖ್ಯ ಅಧೀಕ್ಷಕರಾಗಿ ನಿರ್ಮಲ, ಕಸ್ಟೋಡಿಯನ್ ಆಗಿ ಲಕ್ಕಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜು(ಬಾಲಕಿಯರ ವಿಭಾಗ) ಕೇಂದ್ರಕ್ಕೆ ಮುಖ್ಯ ಅಧೀಕ್ಷಕರಾಗಿ ಬಸವರಾಜ ಪಾಟೀಲ್, ಕಸ್ಟೋಡಿಯನ್ ಆಗಿ ಡಾ.ಸುನೀಲ್ ಹಾಗೂ ತಾಲೂಕು ವ್ಯಾಪ್ತಿಯ ಸುಗ್ಗೇನಹಳ್ಳಿ ವಿದ್ಯಾಭಾರತಿ ಪ್ರೌಢಶಾಲೆಗೆ ಮುಖ್ಯ ಅಧೀಕ್ಷಕರಾಗಿ ಹುಲುಗಪ್ಪ, ಉಪ ಅಧೀಕ್ಷಕರಾಗಿ ಶ್ರೀನಿವಾಸ, ಕಸ್ಟೋಡಿಯನ್ ಆಗಿ ಶ್ರೀಕಾಂತ ಮತ್ತು ಎಮ್ಮಿಗನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ಮುಖ್ಯ ಅಧೀಕ್ಷಕರಾಗಿ ನಂದಕಿಶೋರ, ಕಸ್ಟೋಡಿಯನ್ ಆಗಿ ಡಾ.ಸುನೀಲ್ ಇವರನ್ನು ನೇಮಿಸಲಾಗಿದೆ. ಒಟ್ಟಾರೆ ಕಂಪ್ಲಿ ತಾಲೂಕಿನೆ 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2230 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸಿಸಿ ಟಿವಿ ವೆಬ್ ಕಾಸ್ಟಿಂಗ್ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷೆಯ ಸುತ್ತಲು ಬಿಗಿ ಭದ್ರತೆ ಜತೆಗೆ ಕಟ್ಟೆಚ್ಚರವಹಿಸಿರುವುದು ಕಂಡು ಬಂತು.
ಎಲ್ಲಾ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ನಮ್ಮ ಕರುನಾಡ ಕಂದ ಪತ್ರಿಕಾ ಬಳಗದಿಂದ ಆಲ್ ದ ಬೆಸ್ಟ್.
ವರದಿ : ಜಿಲಾನ್ ಸಾಬ್ ಬಡಿಗೇರ.
