ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಗತ್ ಸಿಂಗ್ ‌ರವರ ಹುತಾತ್ಮ ದಿನ ಅಂಗವಾಗಿ ಪಂಜಿನ ಮೆರವಣಿಗೆ

ಕಲಬುರಗಿ/ ಜೇವರ್ಗಿ: ಯುವಕರು ಉನ್ನತ ವೈಚಾರಿಕತೆ ಬೆಳೆಸಿಕೊಳ್ಳಬೇಕೆಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಮುಖಂಡರಾದ ಮಹೇಶ ನಾಡಗೌಡ ಹೇಳಿದರು.
ದಿ. 26 ಮಾರ್ಚ್ 2025 ರಂದು ಜೇವರ್ಗಿ ಪಟ್ಟಣದಲ್ಲಿ ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಸೇಶನ್ (ಎಐಡಿವೈಓ) ಹಾಗೂ ಭಗತ್ ಸಿಂಗ್ ಸೇವಾ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಶಹೀದ್ ಭಗತ್ ಸಿಂಗ್ ರವರ 94ನೇ ಹುತಾತ್ಮ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಮಾತನಾಡಿದರು. ಮುಂದುವರಿದ ಅವರು ಭಗತ್ ಸಿಂಗ್ ಅವರು ವೈಜ್ಞಾನಿಕ ವಿಚಾರ ತಿಳಿದುಕೊಳ್ಳುವುದರಲ್ಲಿ ಬಹಳ ಎತ್ತರ ಸ್ಥಾನದಲ್ಲಿದ್ದರು ಹಾಗೂ ಕೋಮುವಾದವನ್ನು ಬಹಳ ಪ್ರಬಲವಾಗಿ ವಿರೋಧಿಸಿದರು. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಎಲ್ಲಾ ರೀತಿಯ ಅಧಿಕಾರವು ಕಾರ್ಮಿಕ ವರ್ಗಕ್ಕೆ ಸೇರಬೇಕು ಎಂಬ ಆಸೆ ಭಗತ್ ಸಿಂಗ್ ಅವರದಾಗಿತ್ತು ಆದರೆ ಇವತ್ತು ಅವರು ಕಂಡಂತಹ ಕನಸು ನನಸಾಗಿಲ್ಲ ಬ್ರಿಟಿಷ್ ರ ಬದಲಿಗೆ ನಮ್ಮದೆ ದೇಶದ ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಅಧಿಕಾರ ವಹಿಸಿ ಬಡ ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದಾರೆ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆಯನ್ನು ಹರಿಬಿಡುವುದರಿಂದ ಯುವಜನರ ನೈತಿಕ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗಾಗಿ ಕೊಲೆ , ದರೋಡೆ, ಅತ್ಯಾಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದರಿಂದ ಭಗತ್ ಸಿಂಗ್ ರ ವಿಚಾರಗಳನ್ನು ತಿಳಿದುಕೊಂಡು ಯುವಜನರು ನೈತಿಕವಾಗಿ ಮತ್ತು ವೈಚಾರಿಕವಾಗಿ ತಿಳಿದುಕೊಂಡು ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಭಗತ್ ಸಿಂಗ್ ಅವರ ಕನಸಿನ ಸಮಾಜವಾದಿ ಭಾರತ ಕನಸು ನನಸಾಗಲು ಮುಂದೆ ಬರಬೇಕೆಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಸುರೇಶ ಹಿರೇಮಠ ರವರು ಮಾತನಾಡುತ್ತಾ ಭಗತ್ ಸಿಂಗ್ ಅವರ ತಾಯಿ ವಿದ್ಯಾವತಿ; ಭಗತ್ ಸಿಂಗ್ ರಲ್ಲಿ ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಪ್ರೀತಿ ವಾತ್ಸಲ್ಯ ಕೊಟ್ಟಿದ್ದರು, ಅಂತಹ ಪ್ರೀತಿ ವಾತ್ಸಲ್ಯ ನಮ್ಮ ತಾಯಂದಿರು ಕೊಟ್ಟರೆ ಇನ್ನು ಹಲವಾರು ಭಗತ್ ಸಿಂಗರು ಬರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೆಚ್ ಮತ್ತು ರಾಜು ರದ್ದೆವಾಡಗಿ ಮಾತಾಡಿದರು.

ರಿಲಾಯನ್ಸ್ ಪೆಟ್ರೋಲ್ ಬಂಕ್ ನ ಪಾರ್ಕಿ ಹತ್ತಿರದಲ್ಲಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯನ್ನು ತಹಸೀಲ್ದಾರಾದ ಶ್ರೀ ಮಲ್ಲಣ್ಣ ಯಲಗೋಡ ಯುವಕರಿಗೆ ಪಂಜು ಕೊಡುವುದರ ಮುಖಾಂತರ ಮೆರವಣಿಗೆಯನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಭಗತ್ ಸಿಂಗ್ ಸೇವಾ ಸಮಿತಿ ಜೇವರ್ಗಿ ತಾಲೂಕ ಅಧ್ಯಕ್ಷರಾದ ದೇವರಾಜ ದೊಡ್ಡಮನಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಐಡಿವೈಓ ನ ಜೇವರ್ಗಿ ನಾಯಕರಾದ ರಮೇಶ ದೇವಕರ್ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಮದ್ದರಕಿ, ಸಂತೋಷ್ ಪಾಟೀಲ್, ಪಾಂಡುರಂಗ, ರಮೇಶ ಬಿಳಾ, ಸೇರಿದಂತೆ
ಅನೇಕ ಯುವಕರು ಭಾಗವಹಿಸಿದ್ದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ