ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿವೇಕರಾವ್ ಪಾಟೀಲರ ಒಡೆತನದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಪರಮಾನಂದವಾಡಿ ಗ್ರಾಮದ ಶ್ರೀ ಗುರು ಬ್ರಹ್ಮಾನಂದ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 7 ನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ವೇದಿಕೆಯನ್ನು ಶ್ರೀ ಗುರು ಬ್ರಹ್ಮಾನಂದ ಅನುದಾನಿತ ಶಾಲೆಯ ಅಧ್ಯಕ್ಷರು ಅಸಫಲಿ ಮುಲ್ಲಾ ,ಮಾಜಿ ತಾಲೂಕ ಪಂಚಾಯತಿ ಸದಸ್ಯ ಸಾತಪ್ಪಾ ಅಂಬಿ , ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ನಿಜಲಿಂಗಪ್ಪ ಮುರಗ್ಗನವರ್, ಉಪಾಧ್ಯಕ್ಷ ನಜೀರ ಡಾಂಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಗುರುಗಳು ಶ್ರೀಗುರುದೇವ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಶ್ರೀ ಮಯಕ್ಕಾ ದೇವಿ ಮತ್ತು ಸಂಸ್ಥೆಯ ಸಂಸ್ಥಾಪಕ ಶ್ರೀ ವಸಂತರಾವ್ ಪಾಟೀಲ ರವರು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ತಾಲೂಕ ಪಂಚಾಯತಿ ಸದಸ್ಯ ಸಾತಪ್ಪ ಅಂಬಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಮುಬಾರಕ ಮುಲ್ಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಬಗ್ಗೆ ಮತ್ತು ಒಂದರಿಂದ ಏಳನೇಯ ತರಗತಿವರೆಗೆ ಗುರುಗಳು ಕಲಿಸಿದ ಪಾಠ, ತಾವು ಮಾಡಿದ ತುಂಟಾಟಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರು ಸಿದ್ದು ಬಳೋಬಾಳ, ಸುಕುಮಾರ ಗಳತಗೆ, ಹನಮಂತ ಯಲ್ಲಟ್ಟಿ, ಬಾಬುರಾವ್ ಬಡೋರೆ ,ಪ್ರತಾಪ್ ಬಳೋಬಾಳ, ಗುರುಮಾತೆಯರಾದ ಲಕ್ಷ್ಮೀ ತೇಲಿ, ಚೈತ್ರಾ ವಾಳಕೆ ,ಸುನಿತಾ ವಾಳಕೆ, ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :ಸಂಗಮೇಶ ಕಾಂಬಳೆ
