ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ್ ಶ್ರೀಗಳ 117 ನೇ ಜಯಂತಿ ಆಚರಣೆ

ಬಳ್ಳಾರಿ / ಕಂಪ್ಲಿ : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ಹಿನ್ನೆಲೆಯಲ್ಲಿ ನಗರದ ಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಿವಂಗತ ಸಜ್ಜನರ ವೀರಭದ್ರಪ್ಪ ಇವರ ಮಗ ಶರಣಪ್ಪ ಸಜ್ಜನ್ (ಗಾಣಿಗೇರ) ಕುಟುಂಬದ ಪ್ರಾಯೋಜಕತ್ವದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದಿಂದ ನಡೆದಾಡುವ ದೇವರು ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ 118ನೇ ಜಯಂತಿಯನ್ನು ಆಚರಣೆ ಮಾಡಿ ಸಾರ್ವಜನಿಕರಿಗೆ ತಂಪಾದ ಮಜ್ಜಿಗೆ ವಿತರಿಸುವ ಮೂಲಕ ಆಚರಿಸಲಾಯಿತು.
ಶ್ರೀ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುರಸಭೆ ಮುಖ್ಯ ಅಧಿಕಾರಿ ಕೆ. ದುರುಗಣ್ಣ ನೇತೃತ್ವದಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿ ಪುಷ್ಪಾರ್ಚನೆಯನ್ನು ಸಲಿಸಲಾಯಿತು.
ನಂತರ ಮುಖ್ಯ ಅಧಿಕಾರಿ ಕೆ. ದುರುಗಣ್ಣ ಮಾತನಾಡಿ ನಿಸ್ವಾರ್ಥ ಮತ್ತು ಕರುಣೆಯ ನೈಜ ಸಾಕಾರ ಮೂರ್ತಿಗಳಾಗಿದ್ದ ಶ್ರೀಗಳು ಸಮಾಜ ಸೇವೆಗೆ ಅಪ್ರತಿಮ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರ ಕೆಲಸವು ಲಕ್ಷಾಂತರ ಜನರ ಜೀವನವನ್ನು ತಲುಪಿದೆ ಮತ್ತು ಸಮರ್ಪಣೆ ಹಾಗೂ ಮಾನವೀಯ ಸೇವೆಗೆ ಅತ್ಯುನ್ನತ ಉದಾಹರಣೆಯಾಗಿದೆ. ಅವರ ಜೀವನ ಆದರ್ಶವಾಗಿದ್ದು ಅವರ ಜೀವನ ತತ್ವಾ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ವೇಳೆ ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಜೆಸಿ ಬಿ. ರಸೂಲ್ ಮಾತನಾಡಿ ಅನೇಕ ಮೂಲೆ ಮೂಲೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ವಿದ್ಯಾಭ್ಯಾಸದ ಮೂಲಕ ಅವರ ಜೀವನವನ್ನು ಕಟ್ಟಿಕೊಂಡಿದ್ದಾರೆ. ಹಾಗಾಗಿ ಪರಮಪೂಜ್ಯ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಪದ್ಮಭೂಷಣ ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾಕ್ಟರ್ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ತಿಳಿಸಿದರು. 118ನೇಸ್ವಾಮೀಜಿಗಳ ಜಯಂತಿ ಅಂಗವಾಗಿ ದಿವಂಗತ ಸಜ್ಜನರ ವೀರಭದ್ರಪ್ಪ ಕುಟುಂಬದ ಸದಸ್ಯರಾದ ಸಜ್ಜನರ ಶರಣಪ್ಪರಿಂದ ಜಯಂತಿ ಅಂಗವಾಗಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಸಜ್ಜನ್, ವಿಶ್ವನಾಥ ಸಜ್ಜನ್, ವಲಯ 24ರ ಪೂರ್ವ ಉಪಾಧ್ಯಕ್ಷರಾದ ಜೆಸಿ ಸಂತೋಷ್ ಕೊಟ್ರಪ್ಪ ಸೋಗಿ, ಪೂರ್ವ ಅಧ್ಯಕ್ಷರಾದ ಜೆಸಿ ಜಿ. ಚಂದ್ರಶೇಖರಗೌಡ, HGF ಬಡಿಗೇರ್ ಜಿಲಾನ್ ಸಾಬ್, ಕಾರ್ಯದರ್ಶಿ JFM ಇಂತಿಯಾಜ್ SK , ಜೆಸಿ D. ಭರತ್, ಜಿಸಿ ಡಾ. ಭರತ್ ಪದ್ಮಶಾಲಿ, ಜೆಸಿ ನವೀನ್ ಭಾಗ್ರೇಚ್, ಜೆಸಿ SM ಗುರುಪ್ರಸನ್ನ, ಜೆಸಿ ಸಿದ್ದರಾಮ ಶಾಸ್ತ್ರಿ, ಜೆಸಿ ಮನೋಜ್ ಕುಮಾರ್ ದಾನಪ್ಪ, ಜೆಸಿ ಕನಕರಾಯ, ಜೆಸಿ ಡಿ. ಇಸ್ಮಾಯಿಲ್, ಜೆಸಿ ಯುಸೂಫ್, ಮುಖಂಡರಾದ SD ಬಸವರಾಜ, ಟೈಲರ್ ಶಂಕರ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ ಬಾಬು, ಸಜ್ಜನರ ಕುಟುಂಬದ ಸದಸ್ಯರು ಸೇರಿದಂತೆ ಭಕ್ತಾದಿಗಳು ಅನೇಕರಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ