ಬಳ್ಳಾರಿ / ಕಂಪ್ಲಿ : ತುಂತುರು ಮಳೆ ಭೂಮಿಗೆ ಮುತ್ತಿಕ್ಕಿತರಲು ಮಣ್ಣಿನ ಸುವಾಸನೆ ಮೂಗಿಗೆ
ಬಡಿಯುತ್ತಿರಲು ಮೊದಮೊದಲ ಮಳೆ ಕಾಣಲೆಷ್ಟು ಸುಂದರ ಶುಭವಾಗಲಿ ನಿಮಗೆ ಇವತ್ತಿನ ಗುರುವಾರ ಹೌದು ಈ ಕವನದಂತೆ ಕಂಪ್ಲಿ ನಗರ ಸೇರಿದಂತೆ ಬುಧವಾರ ರಾತ್ರಿಯಿಂದಲೇ ವರ್ಷದ ಮೊದಲ ಮಳೆಯ ಸಿಂಚನವಾಯಿತು. ಬಿಸಿಲ ತಾಪಕ್ಕೆ ನಲುಗಿದ್ದ ಜನರಿಗೆ ರಾತ್ರಿಯಿಂದಲೇ ಬರುತ್ತಿದ್ದ ಬಂದ ವರುಣ ದೇವ…
ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿ 11: 48 ರಿಂದ ಬೆಳ್ಳಗಿನ ಜಾವದವರೆಗೂ ಮಳೆ ಆಗುತ್ತಲ್ಲಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಕೂಡಾ ತುಂತುರು ಮಳೆಯಾಗಿದೆ.
ಬೇಸಿಗೆ ಬಿಸಿಲು ತೀವ್ರವಾಗಿರುವುದರಿಂದ ಅಂತರ್ಜಲ ಮಟ್ಟ ಅಲ್ಲಲ್ಲಿ ಕುಸಿಯುತ್ತಿದ್ದು ವರ್ಷದ ಮಳೆ ಜನರಿಗೆ ಹರ್ಷವನ್ನು ಉಂಟು ಮಾಡಿದೆ.
ರಾಜ್ಯ ಹವಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಮಾತನಾಡಿ, ತಿಂಗಳ ಆರಂಭದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿತ್ತು. ತಾಪಮಾನ ಏರಿಕೆ ಬೆನ್ನಲೆ ನಿನ್ನೆಯಿಂದ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ರಾಜ್ಯದಲ್ಲಿ ಸಾಧಾರಣ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಿಸಿಲಿನ ತಾಪಕ್ಕೆ ವರುಣರಾಯ ತಂಪೆರೆದಿದ್ದಾನೆ. ಮಳೆ ಬಂದಿದ್ದರಿಂದ ಜನರು ಖುಷ್ ಆಗಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
