ಯಾದಗಿರಿ/ಗುರುಮಠಕಲ್ : ₹2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ಉತ್ತಮ ಗುಣಮಟ್ಟದ ರಸ್ತೆ ನೀಡುವುದಾಗಿ ಭರವಸೆ ನೀಡಿದ್ದಾರೆ, ಆದರೆ ಈ ರಸ್ತೆ ಕಾಮಗಾರಿ ತೆಗೆದುಕೊಂಡಿರುವ ಲ್ಯಾಂಡ್ ಆರ್ಮಿ ಯವರು ತೀರ ಕಳಪೆ ಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ತಡ ರಾತ್ರಿ ರಸ್ತೆ ನಿರ್ಮಾಣ ಕಾಮಗಾರಿ ಕೆಲಸದ ಬಗ್ಗೆ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದಾರೆ, ನ್ಯಾಯಯುತವಾದ ರಸ್ತೆ ನಿರ್ಮಾಣವಾಗಲಿ, ಒಂದು ವೇಳೆ ಹೀಗೆ ಮುಂದುವರೆದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನರಸಿಂಹಲು ಗಂಗಾನೊಳ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗಿರುವ ಸಿ.ಸಿ ರಸ್ತೆ ಸಾಕಷ್ಟು ಗುಂಡಿಗಳಿಂದ ತುಂಬಿ ವಾಹನ ಸವಾರರು ಪ್ರತಿ ನಿತ್ಯ ಸರ್ಕಸ್ ಮಾಡುವಂತಹ ಪರಿಸ್ಥಿತಿ ಇದೆ, ರಸ್ತೆ ದುರಸ್ಥಿ ಕೈಗೊಂಡಿರುವ ಲ್ಯಾಂಡ್ ಆರ್ಮಿ ಕೇವಲ ಸಿಮೆಂಟ್ ಕಾಂಕ್ರೀಟ್ ಮಿಶ್ರಣ ಮಾತ್ರ ರಸ್ತೆ ನಿರ್ಮಾಣಕ್ಕೆ ಬಳಸುತ್ತಿದ್ದು, ಯಾವುದೇ ಕಬ್ಬಿಣದ ರಾಡು ಬಳಸದೇ ಇರುವದು ಮತ್ತು ಹಳೆ ಕಾಂಕ್ರೀಟ್ ಪೂರ್ತಿಯಾಗಿ ಕಿತ್ತು ಆಮೇಲೆ ಹೊಸ ಕಾಂಕ್ರೀಟ್ ಹಾಕಬೇಕು ಎಂದು ನರಸಿಂಹಲು ಗಂಗನೊಳ ಸಾಮಾಜಿಕ ಕಾರ್ಯಕರ್ತ, ಜಯಕರ್ನಾಟಕ ವೇದಿಕೆಯ ತಾಲೂಕ ಕಾರ್ಯದರ್ಶಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ರೀತಿ ಮಾಡುವುದರಿಂದ ರಸ್ತೆ ನಿರ್ಮಾಣದಿಂದ ಮಳೆ ಬಂದ ಸಮಯದಲ್ಲಿ ಅಂಗಡಿಗಳಿಗೆ ನೀರು ಹೊಕ್ಕು ವ್ಯಾಪಾರಸ್ಥರಿಗೆ ತೊಂದರೆ ಆಗುವುದು ಎಂದು ಶ್ರೀಕಾಂತ್ ತಲಾರಿ ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ತಾಲೂಕ ಅಧ್ಯಕ್ಷರು ಅಭಿಪ್ರಾಯ ಪಟ್ಟರು.
ಇದೇ ಸಮಯದಲ್ಲಿ ಸಾರ್ವಜನಿಕರಾದ ಶ್ರೀನಿವಾಸ ಯಾದವ ಸಹ ಕಳಪೆ ಕಾಮಗಾರಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.
ವರದಿ: ಜಗದೀಶ್ ಕುಮಾರ್
