ಬೀದರ / ಬಸವಕಲ್ಯಾಣ : ಇದೇ ಏಪ್ರಿಲ್ 06, 2025 ರಿಂದ ಕರ್ನಾಟಕ ರಾಜ್ಯದಲ್ಲಿ ಜಾತಿ ಗಣತಿ ಪ್ರಾರಂಭವಾಗುತ್ತಿದ್ದು. ನಮ್ಮ ಸಮುದಾಯದ ಮುಖಂಡರು ಸುಮಾರು 35 ವರ್ಷಗಳಿಂದ ಒಳಮೀಸಲಾತಿ ಜಾರಿ ಕುರಿತು ಅನೇಕ ಹೋರಾಟ, ತ್ಯಾಗ ಬಲಿದಾನಗಳ ಫಲಿತಾಂಶವಾಗಿ ಇತ್ತೀಚೆಗೆ 1ನೇ ಆಗಸ್ಟ್ 2024 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ನೀಡಲು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಅದರ ಭಾಗವಾಗಿ ಈಗ ಹೊಸದಾಗಿ ಪರಿಶಿಷ್ಟ ಜಾತಿ ಸಮೀಕ್ಷೆ ಮಾಹಿತಿ ಕಲೆಹಾಕಲು ಸರ್ಕಾರ ಪ್ರತಿ ಮನೆಗೆ ಬಂದು ಜಾತಿ ಗಣತಿ ಮಾಡಲು ಜಾತಿ ವಿವರ ಪಡೆದುಕೊಂಡು ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಹಾಗಾಗಿ ಪ್ರಸಕ್ತ ಹೊಸ ಜನಗಣತಿ ಫಾರಂನಲ್ಲಿ ಧರ್ಮ : ಹಿಂದೂ,ಜಾತಿ: ಪರಿಶಿಷ್ಟ ಜಾತಿ, ಉಪಜಾತಿ : ಮಾದಿಗ ಎಂದೇ ಪ್ರತಿ ಕುಟುಂಬದವರು ಖುದ್ದಾಗಿ ಬರೆಸತಕ್ಕದ್ದು.
ಇದು ನಮ್ಮ ಸಮುದಾಯದ ಮುಂದಿನ ಪೀಳಿಗೆಗಳ ಶಿಕ್ಷಣ, ಉದ್ಯೋಗ, ಉದ್ಯೋಗ ಬಡ್ತಿ, ಇತರ ಸೌಲಭ್ಯಗಳಿಂದ ಸರ್ಮಾಂಗಿಣ್ ಅಭಿವೃದ್ಧಿಗೆ ಪೂರಕವಾಗಲಿದೆ, ಈ ಸಮಯವನ್ನು ಉತ್ತಮವಾಗಿ ಬಳಸಿಕೊಂಡು ಯುವಕರು, ನೌಕರರು, ಸಾಮಾಜಿಕ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಈ ಕೆಲಸದಲ್ಲಿ ಕೂಡಲೇ ಕಾರ್ಯ ಪ್ರವರ್ತರಾಗಿ ಯಶಸ್ವಿ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
