ಬೆಂಗಳೂರು: ” ಐ ಲವ್ ಬೆಂಗಳೂರು” ಎಂದು ನಗರದ ಬಸ್ ಸ್ಟೇಷನ್, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಇತ್ಯಾದಿ ಕಡೆ ದೊಡ್ಡದಾಗಿ ಲಕ್ಷಾಂತರ ವೆಚ್ಚದಲ್ಲಿ ಫಲಕ ಡಿಜಿಟಲ್ ಸೈನ್ ಬೋರ್ಡ್ ಗಳನ್ನು ಅಳವಡಿಸಿಕೊಂಡು ತನಗೆ ತಾನೇ ಸ್ಮಾರ್ಟ್ ಸಿಟಿ ಎಂಬ ವಿಭೂತಿ ಬಳಿದುಕೊಂಡಿರುವ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ನಡವಳಿಕೆ ಮತ್ತು ಕಾರ್ಯಕೌಶಲ್ಯಕ್ಕೆ ನಗಬೇಕೋ ಅಳಬೇಕೋ ತಿಳಿಯದಾಗಿದೆ ಎಂದು ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಷಿಯೇಷನ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ವ್ಯಂಗ್ಯದಿಂದ ಪ್ರಶ್ನಿಸಿದ್ದಾರೆ.
ನಗರದ ಹೃದಯ ಭಾಗದಲ್ಲಾಗಲೀ ಮತ್ತಿತರ ಬಾಗದ ಯಾವುದೇ ಕಡೆ ಸಹಿಸಲಾರದ ದುರ್ನಾತ ಬೀರುವ ಕಸದ ರಾಶಿಗಳಿದ್ದು ಅವುಗಳನ್ನು ಬೀದಿ ನಾಯಿಗಳು ಎಳೆದು ತಂದು ಎಲ್ಲೆಂದರಲ್ಲಿ ಹಾಕಿ ಗಲೀಜು ಮಾಡುತ್ತಿರವುದನ್ನು ವರ್ಣಿಸಲು ಪದಗಳೇ ದೊರಕದಂತಹ ವಿಕಲ್ಪ ಎಲ್ಲೆಡೆಯೂ ಕಾಣಬಹುದು.
ಕಸ ಸಾಗಿಸುವ ವಾಹನ ಎಲ್ಲಿ ಹೋಗಿದೇ ? ಅದನ್ನು ಅನ್ಯ ಉದ್ದೇಶಕ್ಕೆ ಬಳಸಿ ಸಾರ್ವಜನಿಕರ ತೆರಿಗೆ ಹಣ ಮಣ್ಣು ಪಾಲು ಮಾಡಲಾಗುತ್ತಿದೆಯೇ ಎಂಬುದನ್ನು ಬಿಬಿಎಂಪಿ ಸ್ಪಷ್ಟ ಪಡಿಸಬೇಕು ಎಂದ ಆಗ್ರಹಿಸಿದ್ದಾರೆ.
- ಕರುನಾಡ ಕಂದ
