ಯಾದಗಿರಿ/ಗುರುಮಠಕಲ್:
ನಗರದ ಹೃದಯ ಭಾಗದಲ್ಲಿರುವ ನಗರೇಶ್ವರ ದೇವಸ್ಥಾನ ಈಶ್ವರ,ಗಣಪತಿ, ನವಗ್ರಹ, ಸೂರ್ಯ ಭಾಗವನ್, ಕಾಳಿಕಾ ದೇವಿ, ಅಕ್ಕ ಮಹಾದೇವಿ, ಅಂಜನೇಯ, ಮತ್ತು ಶ್ರೀರಾಮ, ಸೀತಾ ಮಾತ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತ ಪ್ರತ್ಯಕ ಒಳ ಗುಡಿ ಹೊಂದಿದೆ, ಗುರುಮಠಕಲ್ ನಗರದ ಅತ್ಯಂತ ಪುರಾತನ ದೇವಾಲಯ ಆಗಿದೆ, ಇಂದು ದೇವಸ್ಥಾನದ ಶ್ರೀರಾಮ, ಸೀತಾ ಮಾತ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತ ಮೂರ್ತಿಗಳಿಗೆ ಪುರೋಹಿತರಾದ ಪ್ರಭಾಕರ್ ಪೂಜಾರಿಯವರು ಪೂಜೆ ಸಲ್ಲಿಸುವುದರೊಂದಿಗೆ ರಾಮ ನವಮಿ ಆಚರಣೆ ಮಾಡಲಾಯಿತು .
ರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡಿರುವ ಸಕಲ ಸಧ್ಭಕ್ತರಿಗೆ ಪಾನಕ ವ್ಯವಸ್ಥೆ ಏರ್ಪಡಿಸಲಾಗಿತ್ತು, ವಿಶೇಷ ಆಕರ್ಷಣೆ ಎಂಬಂತೆ ಎಲ್ಲಾ ಸಮಾಜದವರು, ಬಡಾವಣೆಯ ನಿವಾಸಿಗಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದುಕೊಟ್ಟರು.
ಕಾರ್ಯಕ್ರಮದಲ್ಲಿ ರಾಜರಮೇಶ್ ಗೌಡ, ಆಶಿರೆಡ್ಡಿ ಪಟೇಲ್, ಮೋನಪ್ಪ ಬಡಿಗೇರ,ರಾಘವೆಂದ್ರ, ಸಾಯಿಲು, ಶಿವಕುಮಾರ ಹಾಜರಿದ್ದರು.
ವರದಿ: ಜಗದೀಶ್ ಕುಮಾರ
