ಬಳ್ಳಾರಿ / ಕಂಪ್ಲಿ : ತಾಲೂಕಿನೆಲ್ಲೆಡೆ ಶ್ರೀ ರಾಮ ನವಮಿಯನ್ನು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ರಾಮ ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಬೆಳಗ್ಗೆಯಿಂದಲೇ ಸಂಭ್ರಮೋತ್ಸಾಹದಿಂದ ಜರುಗಿದವು. ರಾಮ, ಸೀತಾ ಮತ್ತು ಲಕ್ಷ್ಮಣರ ಮೂರ್ತಿಗಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು.
ತಾಲೂಕಿನ ಸಣಾಪುರ ಗ್ರಾಮ ಬಳಿಯ ನಾರಾಯಣಸ್ವಾಮಿ ಕ್ಯಾಂಪಿನಲ್ಲಿರುವ ಶ್ರೀ ಸೀತಾ ಸಮೇತ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ರಾಮ ನವಮಿ ಅಂಗವಾಗಿ ಶಿಲ್ಪ ಸತ್ಯಸಾಯಿ ಮತ್ತು ತುಳಸಿ ಶಿವ ದಂಪತಿಗಳ ನೇತೃತ್ವದಲ್ಲಿ ಸೀತಾರಾಮರ ಕಲ್ಯಾಣ ಮಹೋತ್ಸವ ಸಂಭ್ರಮದಿಂದ ಜರುಗಿತು. ಇಲ್ಲಿನ ದೇವಸ್ಥಾನದಲ್ಲಿ ಸೀತಾ, ರಾಮ, ಲಕ್ಷ್ಮಣ ಇವರಿಗೆ ಪುರೋಹಿತರಾದ ಕಿರಣ್ ಕುಮಾರಸ್ವಾಮಿ, ಗಿರೀಶಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿದ್ದು, ಮತ್ತು ಪುಷ್ಪಾಲಂಕಾರದಿಂದ ಶೃಂಗರಿಸಲಾಗಿತ್ತು. ನಂತರ ಅನ್ನ ಸಂತರ್ಪಣೆ ಜರುಗಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷ ರಮಣಯ್ಯ ಹಾಗೂ ಮುಖಂಡ ಎಂ.ಅಚ್ಚುತ್ತರಾಯ ವರ್ಮ, ಚೊಕ್ಕರಾವ್, ವೆಂಕಟೇಶಲು, ನರಸಿಂಹಲು ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ಬಸವೇಶ್ವರಕ್ಯಾಂಪ್ :
ಇಲ್ಲಿನ ಬಸವೇಶ್ವರ ಕ್ಯಾಂಪಿನ ಕೋದಂಡರಾಮ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಸಂಭ್ರಮದಿಂದ ಆಚರಿಸಿದರು. ಶಿವಾಜಿ ಪುರೋಹಿತ್ಯದಲ್ಲಿ ಕಲ್ಯಾಣ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಮುಖಂಡ ವೆಂಕಟರಾಮರಾಜು ಸೇರಿದಂತೆ ಕ್ಯಾಂಪಿನ ಜನರು ಪಾಲ್ಗೊಂಡಿದ್ದರು.
ವರದಿ : ಜಿಲಾಸಾಬ್ ಬಡಿಗೇರ್
