ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಈರಣ್ಣಕ್ಯಾಂಪಿನಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡುಕಟ್ಟುಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಭಾನುವಾರ ಆಯ್ಕೆಗೊಳಿಸಲಾಯಿತು.
ಡಾ.ಕೆ.ಎಂ.ಮೈತ್ರಿ (ರಾಜ್ಯಾಧ್ಯಕ್ಷ), ಕುಪ್ಪೆ ನಾಗರಾಜ (ಕಾರ್ಯಾಧ್ಯಕ್ಷ), ಸಣ್ಣ ಮಾರೆಪ್ಪ, ಸಿದ್ದಣ್ಣ ಕಾಳೆ, ರಾಮಯ್ಯ ಶಿಳ್ಳೆಕ್ಯಾತಿ, ಚಾವಡಿ ಲೋಕೇಶ, ಅಯ್ಯಂ ಬಳಬಟ್ಟಿ, ಡಾ.ಕುಮುದಾ ಸುಶೀಲಪ್ಪ ಬಿ (ಉಪಾಧ್ಯಕ್ಷರು), ಡಾ.ಮಲ್ಲಿಕಾರ್ಜುನ ಮಾನ್ಪಡೆ (ಕಾರ್ಯದರ್ಶಿ), ಜಗದೀಶ ಗರಾಸಿಯಾ (ಕೋಶಾಧ್ಯಕ್ಷ), ವಾಸುದೇವ ಕಾಳೆ, ಹೆಚ್.ಪಿ.ಶಿಕಾರಿರಾಮು ಕಂಪ್ಲಿ (ಸಂಘಟನಾ ಕಾರ್ಯದರ್ಶಿ), ಸಿ.ಡಿ.ಗಿರೀಶ್, ಶಿಕಾರಿ ಬಾಬು, ಎಸ್.ಎಂ.ವಿರೇಶ ಸಿಂಧೋಳ್, ಭರತ್, ಬಾಬು ಗರಾಸಿಯಾ, ಸಿ.ಡಿ.ಮಂಜುನಾಥ, ಸಿ.ಡಿ.ರಂಗಪ್ಪ ಕುರುಗೋಡು (ಸದಸ್ಯರು), ಸಿ.ಡಿ.ರಾಜಶೇಖರ (ಬಳ್ಳಾರಿ ಜಿಲ್ಲಾಧ್ಯಕ್ಷ), ಹಾಗೂ ಡಿ.ಜಂಭಣ್ಣ (ಗುಡಾರ ಗುಡಿಸಲು ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ), ಜಿ.ಮಾಧವರಾವ್ (ಗೌರವಾಧ್ಯಕ್ಷ) ಇವರು ಸರ್ವಾನುಮತದಿಂದ ನೇಮಕಗೊಂಡರು.
ನಂತರ ರಾಜ್ಯಾಧ್ಯಕ್ಷ ಡಾ.ಕೆ.ಎಂ.ಮೈತ್ರಿ ಮಾತನಾಡಿ, ಅಲೆಮಾರಿಗಳು ಇತ್ತೀಚಿನ ದಿನಮಾನದಲ್ಲಿ ಸರ್ಕಾರದ ಸೌಲಭ್ಯಗಳೊಂದಿಗೆ ಬದಲಾವಣೆಯಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಲೆಮಾರಿ ಕುಟುಂಬಗಳು ಸಂಪೂರ್ಣವಾಗಿ ಹಿಂದುಳಿದ್ದು, ವಿಶೇಷ ಯೋಜನೆಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಆಧ್ಯತೆ ನೀಡಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಲೆಮಾರಿ ಸಮುದಾಯ ಆಗಬೇಕಾಗಿದೆ. ಈಗಾಗಲೇ ರಾಜ್ಯದ 127 ಕಡೆಗಳಲ್ಲಿ ಗ್ರಂಥಾಲಯಗಳಿದ್ದು, ಇದರಿಂದ ಜ್ಞಾನ ಸಂಪಾದನೆಯಾಗುತ್ತಿದೆ ಎಂದರು.
ತದನಂತರ ನೂತನ ಪದಾಧಿಕಾರಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಿಂಧೋಳ್ ಸಮಾಜದ ರಾಜ್ಯಾಧ್ಯಕ್ಷ ರಾಹುಲ್ ನಾಗಪ್ಪ, ಹಕ್ಕಿಪಿಕ್ಕಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ ಹಾಗೂ ಮೀನಾಕ್ಷಿ ಸೇರಿದಂತೆ ಕರ್ನಾಟಕ ರಾಜ್ಯ ಅಲೆಮಾರಿ ಸಮುದಾಯದ ಮುಖಂಡರು, ಸ್ಥಳೀಯರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
