ಯಾದಗಿರಿ/ ಗುರುಮಠಕಲ್: ನಗರದ ಮುಖ್ಯ ರಸ್ತೆ ಕಾಮಗಾರಿ ಹಾಗೂ ಉಳಿದ ಕಾಮಗಾರಿಗಳ ಕಾರ್ಯಗಳಿಗೆ ಸಾರ್ವಜನಿಕರ ಹಾಗೂ ಎಲ್ಲಾ ಸಂಘಟನೆಗಳ ಸಹಕಾರ ಮಾಡಲು ಪುರಸಭೆ ಸರ್ವ ಸದಸ್ಯರು ಪಕ್ಷ ಬೇಧ ಮರೆತು ಅಭಿವೃದ್ದಿಗೆ ಸಹಕರಿಸಲು ತಿಳಿಸಿದ್ದಾರೆ.
KRDL ವತಿಯಿಂದ ಸದ್ಯ ಮುಖ್ಯ ರಸ್ತೆ ಕಾಮಗಾರಿಯನ್ನು ಟೆಂಡರ್ ಮುಖಾಂತರ ಪಡೆದಿದ್ದು, ಕೆಲಸದ ಬಗ್ಗೆ ಏನೇ ತೊಂದರೆ ಇದ್ದಲ್ಲಿ ಪುರಸಭೆಗೆ ಬಂದು ನಮ್ಮಲ್ಲಿ ಸಂಪರ್ಕಿಸಿ ಬಗೆಹರಿಸಿಕೊಳ್ಳಲು ತಮ್ಮಲ್ಲಿ ಮನವಿ ಎಂದು ಬಾಲಪ್ಪ ದಾಸರಿ ತಿಳಿಸಿದರು.
ಸಾರ್ವಜನಿಕರು ತಮಗೆ ಕಾಮಗಾರಿ ಕುರಿತಾದ ಯಾವುದೇ ಸಲಹೆ ನೀಡುವುದಾದರೆ ಪುರಸಭೆ ಕಾರ್ಯಾಲಯಕ್ಕೆ ಬಂದು ಮಾನ್ಯ ಅಧ್ಯಕ್ಷರು, ಮುಖ್ಯಾಧಿಕಾರಿಗಳಿಗೆ ತಿಳಿಸಬೇಕು, ದಯವಿಟ್ಟು ಯಾರೂ ಕಾಮಗಾರಿ ಸ್ಥಳದಲ್ಲಿ ತೊಂದರೆ ನೀಡಬಾರದು ಎಂದು ಪುರಸಭೆ ಸದಸ್ಯರಾದ ಶ್ರೀ ಮೈನುದ್ದಿನ್ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಶ್ರೀ ನವಾಜ್ ರೆಡ್ಡಿ, ಬಾಲು ದಾಸರಿ, ಫೈಯಾಜ್ ಅಹಮದ್, ಅಂಬಾದಾಸ ಜೀತ್ರಿ, ಆಶನ್ನ ಬುದ್ದಾ, ಚಂದೂಲಾಲ್ ಚೌದರಿ, ಬಾಬು ತಲಾರಿ ,ಶರಣಪ್ಪ ಲಿಕ್ಕಿ , ಅನಂತಪ್ಪ ಮುಕಡಿ , ನಾಮ ನಿರ್ದೇಶಕ ಸದಸ್ಯರಾದ ಭೀಮಶಪ್ಪ ಶನಿವಾರಂ ಹಾಜರಿದ್ದರು.
ವರದಿ: ಜಗದೀಶ್ ಕುಮಾರ
