ಯಾದಗಿರಿ; ಗುರುಮಠಕಲ್ ಪಟ್ಟಣದಲ್ಲಿ ಯಾದಗಿರಿ ಜಿಲ್ಲಾ ಲೋಕೋಪಯೋಗಿ ಇಲಾಖೆ ವತಿಯಿಂದ ಪೊಲೀಸ್ ಇಲಾಖೆಯವರು ಸೂಚಿಸಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ, ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುತ್ತಿದ್ದು, ಅಪರಾಧ ತಡೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ, ಸಾರ್ವಜನಿಕರ ಬಹು ದಿನದ ಬೇಡಿಕೆ ಈಗ ಈಡೇರುತ್ತಿದೆ…
ಸ್ಥಳ ಮತ್ತು CCTV ಸಂಖ್ಯೆ
ಬಿಡಕಿ ಕಟ್ಟಾ 03, ಚೌಡಿಕಟ್ಟಾ 04, ಖಾಸಾಮಠ ಕ್ರಾಸ (ಪೆಟ್ರೋಲ್ ಬಂಕ ಹತ್ತಿರ) 03, ಸಿಹಿನೀರಿನ ಬಾವಿ 02,
ಅಂಬಿಗರ ಚೌಡಯ್ಯ ವೃತ್ತ(ಬಸನಿಲ್ದಾಣ) 06 ,ಬಸವೇಶ್ವರ ವೃತ್ತ 03,ಐಬಿ ಕ್ರಾಸ 02, ಕಾಕಾಲವಾರ್ ಕ್ರಾಸ್ 04
,ಚಪ್ಪೇಟ್ಲಾ ಕ್ರಾಸ 05
ಒಟ್ಟು 32 ಶೀಘ್ರ ದಲ್ಲಿಯೇ ಸಿಸಿಟಿವಿ ಅಳವಡಿಕೆ ಕೆಲಸ ಮುಕ್ತಾಯವಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಯಾದಗಿರಿ ಜಿಲ್ಲಾ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಶ್ರೀಯುತ ಶ್ರೀಧರ್ ರವರು ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್
