ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚೌಡಾಪುರ ಗ್ರಾಮದಲ್ಲಿನ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್. ಟಿ. ಅವರು ದಿ. 09-04-2025 ರಂದು ಪಾಲ್ಗೊಂಡು, ಕ್ಷೇತ್ರದ ಒಳಿತಿಗಾಗಿ ಪೂಜೆ ಸಲ್ಲಿಸಿದರು.
ಜಾತ್ರೆಯ ಪ್ರಯುಕ್ತ, ಸಾಮಾಜಿಕ ನಾಟಕ ಉದ್ಘಾಟಿಸಿ, ಕಲೆಗೆ ಪ್ರೋತ್ಸಾಹಿಸಿದರು ವೇದಿಕೆಯಲ್ಲಿ, ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಹಬ್ಬಗಳು – ಜಾತ್ರೆಗಳಿಂದಾಗಿ ನಮ್ಮ ಮನುಷ್ಯನ ಸಂಬಂಧಗಳು ಉಳಿದಿವೆ. ಬಣ್ಣ – ಜಾತಿ ಮರೆಯುವ, ಎಲ್ಲರೂ ಕೂಡಿ ಬಾಳುವ ಸಂಪ್ರದಾಯ – ಆಚರಣೆಗಳು ಉಳಿಸಿಕೊಳ್ಳಲು ಶ್ರೀ ಚೌಡಮ್ಮ ದೇವತೆಯ ಗುಡಿಯ ಅಭಿವೃದ್ಧಿಯೂ ನಮ್ಮಿಂದ ಆಗಿರುವುದು ನಮ್ಮ ಅದೃಷ್ಟ, ಹೀಗಾಗಿ, ಸಂಬಂಧಗಳು ಉಳಿಯಲಿ, ಅಭಿವೃದ್ಧಿಯ ವಿಚಾರ ನಮಗೆ ಇರಲಿ ಎಂದರು.
ನಮ್ಮ ಕ್ಷೇತ್ರದಲ್ಲಿನ ಹಬ್ಬ, ಜಾತ್ರೆ, ಉತ್ಸವ, ಮದುವೆಗಳಲ್ಲಿ ಪಾಲ್ಗೊಳ್ಳುವ, ಎಲ್ಲರ ಪ್ರೀತಿ ಉಳಿಸಿಕೊಳ್ಳುವ, ಒಳ್ಳೆಯತನವನ್ನೂ, ಕ್ಷೇತ್ರದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುವ ಮನಸ್ಥಿತಿ ನನ್ನದು ಎಂದರು. ನಂತರ ಮುಖಂಡರನ್ನು ಭೇಟಿ ಮಾಡಿ, ಯೋಗ ಕ್ಷೇಮ ವಿಚಾರಿಸಿ, ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡರು.
ಓಣಿ – ಕೇರಿ ಎನ್ನದೇ, ಜಾತ್ರೆಯಲ್ಲಿ ಹೆಜ್ಜೆ ಹಾಕಿ, ಸಂಭ್ರಮದಿಂದ ಕುಣಿದು, ಮುಕ್ತವಾಗಿ ಬೆರೆತರು. ಇಡೀ ಊರಿನ ಜನ, ಶಾಸಕರನ್ನು ನೋಡಲು ಮುಗಿ ಬಿದ್ದಿರುವಂತದ್ದು, ಶಾಸಕರ ಜನಪ್ರಿಯತೆ ಹೆಚ್ಚಿಸಿದೆ.
ಈ ವೇಳೆ ಕೂಡ್ಲಿಗಿ ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪ ನಾಯಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಗುರುಸಿದ್ದನ ಗೌಡ, ಕೆ.ಪಿ.ಸಿ.ಸಿ ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ಜಿಂಕಲ್ ನಾಗಮಣಿ, ಮಾಜಿ ತಾ. ಪಂ. ಸದಸ್ಯರಾದ ಅಜ್ಜನ ಗೌಡ ಹಾಗೂ ಮುಖಂಡರಾದ ವಿರೂಪಾಪುರ ಅರೀಶ್, ಶಿವಪುರ ರಾಜಣ್ಣ, ಗುಣಸಾಗರ ಕೊಟ್ರೇಶ, ಸಿದ್ದಾಪುರ ಹನುಮಂತ ದಳವಾಯಿ,
ಚೌಡಾಪುರ ಗ್ರಾ. ಪಂ. ಅಧ್ಯಕ್ಷರು, ಹಾಗೂ ಸದಸ್ಯರಾದ ಮಲ್ಲಿಕಾರ್ಜುನ, ರಾಜೇಶ್ವರಿ ಸುರೇಶ, ಈ ವಿರೂಪಾಕ್ಷಿ ಅವರು, ಊರಿನ ಮುಖಂಡರಾದ ಡಾ. ಮಂಜುನಾಥ, ಪುಜಾರಿ ತಾತಪ್ಪ, ಕಳ್ಳೇರ ಪಾಲಪ್ಪ, ಅಗ್ನಿ ಓಬಳೇಶ, ಬಿ ವಿರೇಶ, ರಮೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
