ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ಭಗವಾನ್ ಮಹಾವೀರರ ಜನ್ಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಜೈನ ಮುಖಂಡರಾದ ರಾಜೇಂದ್ರ ಜೈನ್ ಇವರು ಮಹಾವೀರರು ನೀಡಿದ ಸಂದೇಶ ಒಂದು ಧರ್ಮಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಅಹಿಂಸೆಯನ್ನ ಬೋಧಿಸಿದರು. “ನೀನು ಬದುಕು, ಇತರೆ ಜೀವಿಗಳು ಬದುಕಲು ಬಿಡು” ಎಂದು ಭಗವಾನ್ ಮಹಾವೀರರು ಇಡೀ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯನ್ನು ಭೋದಿಸಿದರು. ಪಂಚ ಪರಮೇಷ್ಪ್ಟಿ ಮಹಾಮಂತ್ರ ಬೋಧಿಸಿದರು. ಆಚಾರ್ಯರು, ಗುರುಗಳು, ಉಪಾಧ್ಯಾಯರು ಮುಂತಾದವರಿಗೆ ಗೌರವಿಸುವುದನ್ನು ತಿಳಿಸಿದ್ದಾರೆ ಎಂದರು.
ಪ್ರಸ್ತುತ ಜಗತ್ತಿಗೆ ಮಹಾವೀರರ ಅಹಿಂಸೆಯ ಮಂತ್ರ ಬೇಕಿದೆ. ಸಕಲ ಜೀವಕ್ಕೆ ಶಾಂತಿಯನ್ನು ಕೋರಿದ ಅವರ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕಿದೆ. ಈ ದಿನ ಪಟ್ಟಣದಲ್ಲಿ ಪ್ರಾಣಿವಧೆ, ಮಾಂಸದ ಅಂಗಡಿ ವ್ಯಾಪಾರ ನಿಲ್ಲಿಸುವ ಮೂಲಕ ಪ್ರಾಣಿ ಹಿಂಸೆಯನ್ನು ತಡೆಯಲು ಪ್ರಯತ್ನಿಸ ಬೇಕಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ಇನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶ್ವೇತಾಂಬರ ಸಮಾಜದ ಅಧ್ಯಕ್ಷರಾದ ಬಾಬುಲಾಲ್ ಜೈನ್ ಹೇಳಿದರು.
ಪಟ್ಟಣ ಪಂಚಾಯತಿ ಸದಸ್ಯ ಲಕ್ಷ್ಮಿ ಚೆನ್ನಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಭಾ ಎಂ ತಹಸೀಲ್ದಾರ್ ಗ್ರೇಟ್-2 ಇವರು ಮಹಾವೀರರು ಮನುಕುಲಕ್ಕೆ ನೀಡಿದ ಸಂದೇಶವನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು ಎನ್ನುತ್ತಾ ಎಲ್ಲರಿಗೂ ಮಹಾವೀರರ ಜನ್ಮ ಕಲ್ಯಾಣೋತ್ಸವದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ದಿಗಂಬರ ಸಮಾಜದ ಅಧ್ಯಕ್ಷರಾದ ಬ್ರಹ್ಮೇಶ್ ಕುಮಾರ್, ಜೈನ ಸಮಾಜದ ಮುಖಂಡರಾದ ರಾಜೇಂದ್ರ ಕುಮಾರ್ ಜೈನ್, ಸಮೀರ್ ಮಲ್ಕಿ ಚೋಪ್ರಾ, ಕೊಟ್ರಪ್ಪ ಜೈನರ್, ಸತೀಶ್ ಜಾಯಿನರ್, ರಾಮಚಂದ್ರಪ್ಪ ಜೈನರ್ , ಧರಣೇಂದ್ರಪ್ಪ ಜಯನಗರ್ ಮುಂತಾದವರು, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಹರೀಶ್, ಸಿಬ್ಬಂದಿ ಮಂಜುನಾಥ್, ಹನುಮಂತ ಹಾಜರಿದ್ದರು. ಸಿ. ಮ. ಗುರು ಬಸವರಾಜ್ ಸ್ವಾಗತಿಸಿ ನಿರೂಪಿಸಿದರು.
- ಕರುನಾಡ ಕಂದ
