ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಕರಾದ ಸ೦ಜಯ ಕುರಣೆಯವರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ನೀಡುತ್ತಿದ್ದಾರೆ ಕೂಡಾ 17 ಕೃತಿ ರಚನೆ ಮಾಡಿರುವ ಕುರಣೆಯವರು ಗಡಿ ಭಾಗದ ಕನ್ನಡ ಬೆಳವಣಿಗೆ ಪಾತ್ರ ದೊಡ್ಡದು. ಕಟ್ಟಿದ ಬುತ್ತಿ ಹೈಕುಗಳು ಜಪಾನ ದೇಶದಿಂದ ಬಂದಿದೆ ಕರುನಾಡಿನ ಮಹಿಪಾಲ ರಡ್ಡಿ ಮನ್ನೂರ ಹಾಗೂ ಡಾIIಕೆ.ಬಿ.ಬ್ಯಾಳಿ ಯವರ ಪರಿಶ್ರಮದಿಂದ ಇಂದು ಅನೇಕರು ಹೈಕು ಬರೆಯುತ್ತಿರುವುದು ಸಂತೋಷದ ವಿಷಯ ಅದೇ ರೀತಿ ಸ೦ಜಯ ಕುರಣೆಯವರ ಹೈಕು ರಚನೆ ಮಾಡಿರುವುದು ಅಭಿನಂದನೀಯ.
ನೀರು ಮಹತ್ವ ಜೀವ ಜೀವಕ್ಕೆ ಬೇಕು ದಿನ ನಿತ್ಯವು..
ನೀರು ಪ್ರಾಣಿಗಳಿಗೆ ಮಾನವ ಕುಲಕ್ಕೆ ಅವಶ್ಯವಾದದು ಇಲ್ಲದೇ ಹೋದರೆ ಜೀವನ ಮಾಡಲು ಸಾಧ್ಯವೆ? ಇಲ್ಲ ಅದೇ ಜೀವನದ ಪ್ರಮುಖ ಅಂಗ ಇಡೀ ವಿಶ್ವ ನಿಂತಿರುವುದು ನೀರಿನ ಮೇಲೆ ಪ್ರತಿಯೊಬ್ಬರೂ ನೀರನ್ನು ಹಿತಮಿತವಾಗಿ ಬಳಕೆ ಮಾಡಿ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗೋಣ
ನಾಡಿನ ನಾವು ಕನ್ನಡಕ್ಕೆ
ಹೋರಾಟ ಮಾಡಲೇಬೇಕು.
ಇಂದು ಕನ್ನಡ ನೆಲದಲ್ಲಿ ಕನ್ನಡ ಉಳಿಸುವ ಬೆಳೆಸುವ ಕೆಲಸಕ್ಕೆಪ್ರತಿಯೊಬ್ಬ ಕನ್ನಡಿಗ ಕೈ ಜೋಡಿಸಬೇಕಾಗಿದೆ. ಸ್ವಾಭಿಮಾನಿ ಹಾಗೂ ಹಠವಾದಿ ಆಗಲೇ ಬೇಕಾಗಿದೆ ಕನ್ನಡಹಾಗೂ ಕನ್ನಡಿಗನ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು ಕೂಡ ಅನ್ಯಾಯದ ವಿರುದ್ಧ ಹೋರಾಟ ಮಾಡದೇ ಕಣ್ಣು ಮುಚ್ಚಿ ಕುಳಿತಕೊಂಡ ನಿರಭಿಮಾನಿಗಳಿಗೆ ಏನು? ಹೇಳುವುದು ಇನ್ನಾದರೂ ಭಾಷೆ ಉಳಿದರೆ ನಾವು ಉಳಿಯುವುದು.
ಪ್ಲಾಸ್ಟಿಕ್ ಬಂತು ಜೀವಕಂಟಿಕೊಂಡಿತು ಭಯ ಹುಟ್ಟಿತು.
ಎಲ್ಲಿ ನೋಡಿದರೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೇಳತೀರದು ಬಳಕೆಯಿಂದ ಭೂಮಿಯಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾಗಿದೆ ಇದರಿಂದ ನಾನಾ ತರದ ರೋಗಗಳು ಒಂದು ಜೀವಕ್ಕೆ ಕಂಟಕವಾಗಿ ಕಾಡುತ್ತಿವೆ ಸರ್ಕಾರ ಕಡಿವಾಣ ಹಾಕಬೇಕಾಗಿದೆ.
ಬರಡು ಭೂಮಿ ರೈತನ ಶ್ರಮದಿಂದ ಹಸಿರಾಯಿತು
ರೈತ ಶ್ರಮಜೀವಿ ಸತತ ಕಾಯಕದಿಂದ ಭೂಮಿಯನ್ನು ಹದ ಗೊಳಿಸಿ ಸರಿಯಾಗಿ ನೀರು ಗೊಬ್ಬರ ಹಾಕಿ ಬೆಳೆದು ನಾಡಿಗೆ ಅನ್ನ ನೀಡುವ ಅನ್ನಧಾತ ಬರಡುಭೂಮಿಯನ್ನು ಲಾಭ ನಷ್ಟ ನೋಡದೆ ದುಡಿಮೆಯ ಬೆವರನ್ನು ಭೂಮಿಯ ಮೇಲೆ ಸುರಿಸುತ್ತಾನೆ.
ಕುಡಿಯಬೇಡ ಕುಡಿದು ಚಲಾಯಿಸಬೇಡ ವಾಹನ
ಇಂದಿನ ದಿನಮಾನಗಳಲ್ಲಿ ಮದ್ಯ ಸೇವನೆ ಮಾಡಿ ಗಾಡಿ ಚಲಾಯಿಸುವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿರುವುದು ವಿಷಾದನೀಯ ರಸ್ತೆ ಬದಿಯ ಮದ್ಯ ಅಂಗಡಿಯಲ್ಲಿ ಕುಡಿದು ನಿಶೆಯಲ್ಲಿ ಚಲಾಯಿಸಿದ ಅನೇಕರು ಜೀವ ಕಳೆದುಕೊಂಡ ಘಟನೆಗಳನ್ನು ಪ್ರತಿ ದಿನ ನೋಡುತ್ತಿದ್ದೇವೆ ಸರ್ಕಾರ ತನ್ನ ಆದಾಯಗೋಸ್ಕರ ಅನುಮತಿ ನೀಡುತ್ತಿರುವುದು ಖಂಡನೀಯ.
ನ್ಯಾಯದೇವತೆ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿರುವಳು
ನ್ಯಾಯ ಪ್ರತಿಯೊಬ್ಬ ಪ್ರಜೆಗೆ ಸಿಗಲೇಬೇಕು ಆದರೆ ಇಂದು ಮರೀಚಿಕೆಯಾಗಿ ಉಳಿದಿದೆ ಹಣವಂತರಿಗೆ ಒಂದು ಬಡವರಿಗೆ ಒಂದು ಸಮಾಜದ ಕಟ್ಟಕಡೆಯ ಪ್ರಜೆಗೆ ಸಿಗಬೇಕಾಗಿದೆ ಸಂವಿಧಾನದ ಹಕ್ಕುಗಳು ಬರೀ ಮಾತಿನಲ್ಲಿ ಆಗುತ್ತಿರುವುದು ಅಷ್ಟೇ ವಿಷಾದದಿಂದ ಹೇಳಬೇಕಾಗಿದೆ.
ಹೃದಯ ಭಾಷೆ ಕಲಿಯಲು ಸರಳ ಕನ್ನಡ ಬೇಕು.
ಕನ್ನಡ ಭಾಷೆ ಸಂಸ್ಕೃತಿ ಕನ್ನಡ ನಾಡಿನ ಸೌಭಾಗ್ಯ ಎಂದು ಅಭಿಮಾನದ ವಿಷಯ ವಿಶಾಲ ಹಾಗೂ ಸರಳದಿಂದ ಮಾತನಾಡಬಹುದು. ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರು ಕೆಲವೇ ತಿಂಗಳದಲ್ಲಿ ಮಾತನಾಡುತ್ತಾರೆ ಇದು ತಾಯಿ ಭಾಷೆಯನ್ನು ಪ್ರೀತಿಸಬೇಕು ಅಭಿಮಾನ ಇಲ್ಲದವನು ತಾಯಿಯನ್ನು ಪ್ರೀತಿಸಲಾರ ಅ. ನ. ಕೃಷ್ಣರಾಯರು ಆಡಿದ ಮಾತು 8 ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿಗೆ ನಾಡು ಧನ್ಯ ಬಾದಾಮಿ ಚಾಲುಕ್ಯರು ಇಡೀ ದೇಶ ಅಲ್ಲದೇ ಪ್ರಪಂಚ ಆಳ್ವಿಕೆ ಮಾಡಿದ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ.
ಕಷ್ಟ ಬಂದರೂ ಸತ್ಯ ಮರೆಯಬೇಡ. ನಿತ್ಯ ಜೀವನ
ಸತ್ಯ ಪ್ರತಿಯೊಬ್ಬರ ಜೀವನಕ್ಕೆ ಆಧಾರ ಸ್ತಂಬ ಹೇಳಿದರೆ ತಪ್ಪಗಲಾರದು ಕಷ್ಟ ನಷ್ಟ ಬಂದರೂ ಕೂಡಾ ಸತ್ಯವನ್ನು ನುಡಿಯಬೇಕು ಸುಳ್ಳು ಗಾಳಿಯಲ್ಲಿ ಹಾರಿದರೆ ಸತ್ಯ ನೂರು ಕಾಲಕ್ಕೂ ನಿರಂತರ.
ತಿಂದ ಮನೆಗೆ ದ್ರೋಹ ಬಗೆಯ ಬೇಡ ಮನುಜ ನೀನು.
ಯಾರೇ ಯಾಗಲಿ ಸಹಾಯ ಮಾಡಿದ ವ್ಯಕ್ತಿ ಅಥವಾ ಅನ್ನ ಹಾಕಿದ ಮನೆಯನ್ನು ಉಸಿರು ಇರುವ ತನಕ ಮರೆಯಬಾರದು ಒಳ್ಳೆಯತನ ಸದಾ ಕಾಪಾಡುತ್ತದೆ ಅದೇ ರೀತಿ ಒಳ್ಳೆಯ ಕೆಲಸ ಮಾಡೋಣ ಮಾನವ ವಿಶ್ವ ಮಾನವರಾಗಿ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಯವರು ಹೇಳಿದ ಮಾತು.
ಸಾಧನೆ ಮಾಡು ಸಾವಿರಾರು ಜನರು ನಿನ್ನ ಮಡಿಲು.
ಸಾಧನೆಗೆ ವಯಸ್ಸು ಬೇಕಿಲ್ಲ ಹಣ ಬೇಕಿಲ್ಲ ಕ್ಷೇತ್ರ ಯಾವುದೇ ಇರಲಿ ಅದರಲ್ಲಿ ಶ್ರಮ ಹಾಗೂ ಪರಿಶ್ರಮದಿಂದ ಮಾತ್ರ ಸಾಧ್ಯ ಉಸಿರು ಹೋದರೂ ಹೆಸರು ಉಳಿಯಬೇಕು ಸಿದ್ದಗಂಗಾ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಪುನೀತ ರಾಜಕುಮಾರ ಅಂತಹ ಮಹಾ ಚೇತನಗಳು ದಾನ ಅನ್ನದಾಸೋಹ ಜ್ಞಾನ ದಾಸೋಹಗಳಿಂದ ಸಮಾಜಕ್ಕೆ ಹಾಗೂ ವಿಶ್ವಕ್ಕೆ ಆಕಾಶದಲ್ಲಿ ಮಿಂಚುವ ನಕ್ಷತ್ರಗಳಿಂತೆ ಸದಾ ಅಜರಾಮರ.
ಲೇಖಕರಾದ ಸಂಜಯ ಕುರಣೆಯವರ ಸಾಹಿತ್ಯ ಯಾತ್ರೆ ನಿರಂತರ ಸಾಗಲಿ ಎಂದು ಶುಭ ಹಾರೈಕೆ ಹಾಗೂ ತುಂಬು ಹೃದಯದ ಅಭಿನಂದನೆಗಳು.
ಲೇಖಕರು : ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ, ಮಹಾರಾಷ್ಟ್ರ
