
ಯಾದಗಿರಿ/ ಗುರುಮಠಕಲ್ : ನಿನ್ನೆ ಶಿವ ಶರಣೆ ಅಕ್ಕ ಮಹಾದೇವಿಯವರ ಜಯಂತಿಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ನಾಣ್ಯಪುರ (ನಾರಾಯಣ ಪುರ) ದಲ್ಲಿ ಶ್ರೀಮಾತಾ ಭದ್ರಕಾಳಿ ಮಹಿಳಾ ಭಜನಾ ಸಂಘದ ವತಿಯಿಂದ ಆಚರಿಸಲಾಯಿತು.
ಸಾಯಂಕಾಲ ದೇವಸ್ಥಾನದ ಆವರಣದಲ್ಲಿ ಪೂಜಾ ಕಾರ್ಯಕ್ರಮಗಳು, ತೊಟ್ಟಿಲು ಕಾರ್ಯಕ್ರಮ ಮತ್ತು ವಿಶೇಷವಾಗಿ ಅಕ್ಕ ಮಹಾದೇವಿಯವರ ಜೀವನ ಚರಿತ್ರೆ ತಿಳಿಸುವ ಹಾಡುಗಳನ್ನು ಭಜನೆಯ ಮುಖಾಂತರ ಹಾಡಿದರು.
ಜಯಂತಿಯ ಕುರಿತಾಗಿ ಮಾತನಾಡಿದ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸಿದ್ದಮ್ಮ ಗದ್ವಾಲ್ ಅಕ್ಕ ಮಹಾದೇವಿಯವರು 12 ನೇಯ ಶತಮಾನದ ಬಸವಾದಿ ಶರಣರ ಸಮಕಾಲಿನರಾಗಿದ್ದರು, ವೈರಾಗ್ಯ ನಿಧಿ ತಮ್ಮ ಜೀವನ ಮಲ್ಲಿಕಾರ್ಜುನ ಸ್ವಾಮಿಗೆ ಮುಡುಪಾಗಿಟ್ಟರು, ಶ್ರೀಶೈಲದ ಕದಳಿವನದಲ್ಲಿ ಅಕ್ಕ ಮಹಾದೇವಿಯವರು ಲಿಂಗೈಕ್ಯರಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷರಾದ ನಾಗಭೂಷಣ್ ಅವಂಟಿ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹಿರೇಮಠ, ಶಂಕ್ರಯ್ಯ ಸ್ವಾಮಿ ಗದ್ವಾಲ್, ಮಲ್ಲಿಕಾರ್ಜುನ ವಸ್ತ್ರದ, ನಾಗಣ್ಣ ಕಾಳಗಿ, ಆನಂದ ಬೂದಿ, ಶ್ರೀಮತಿ ರೂಪ ಕಡೆಚೂರ್, ಶ್ರೀಮತಿ ಗಂಗಮ್ಮ ಬೂದಿ, ಶ್ರೀಮತಿ ಅಶ್ವಿನಿ ಭೂಮಾ, ಶ್ರೀಮತಿ ಶರಣಮ್ಮ ಹೂಗಾರ, ಶ್ರೀಮತಿ ಶಿವಲೀಲಾ ಹಿರೇಮಠ, ಶ್ರೀಮತಿ ಅಮೃತ ನಾರಾಗಡ್ಡ, ಶ್ರೀಮತಿ ಉಮಾ ಅಡ್ಕಿ ಇನ್ನೂ ವೀರಶೈವ ಸಮಾಜ, ಭಜನಾ ಮಂಡಳಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಸದ್ಭಕ್ತರು ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್
