ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನುವಾದಕನು ಉಭಯ ಭಾಷೆಯ ಸಂಸ್ಕೃತಿ-ಶೈಲಿ ಬಲ್ಲವನಾಗಿರಬೇಕು- ಕೆ ಪ್ರಭಾಕರನ್

ಬೆಂಗಳೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ವರ್ಣಬೇಧ ನೀತಿ, ಅಸ್ಪೃಶ್ಯತೆ ಕಂಡು ಬೇಸರವಾಗಿದ್ದು, ಪತ್ರಕರ್ತರಾಗಿ ದುಡಿದದ್ದು, ಅಲ್ಲಿ ಗಾಂಧೀಜಿ ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಆತ್ಮಕಥೆಯಲ್ಲಿ ಹೇಗೆ ವಿವರಿಸಿದ್ದಾರೆ ಎಂಬ ಕುರಿತು ಎನ್ ಆರ್ ವಿಶುಕುಮಾರ್
ವಿಶ್ರಾಂತ ನಿರ್ದೇಶಕ, ಕರ್ನಾಟಕ ಸಾರ್ವಜನಿಕ ಸಂಪರ್ಕ ಇಲಾಖೆ, ಅವರು ಮನಮುಟ್ಟುವಂತೆ, ವಿಚಾರ ಪೂರ್ಣ ಮಾತುಗಳನ್ನು ಆಡಿದರು.

ಅವರು ಇಂದು ನಗರದ ಆನಂದರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಆಶ್ರಯದಲ್ಲಿ ಪತ್ರಕರ್ತರಾಗಿ ಗಾಂಧೀಜಿ ವಿಶೇಷ ಉಪನ್ಯಾಸ ನೀಡಿ ಗಾಂಧೀಜಿಯವರ ಜೀವನದ ಪ್ರಮುಖ ಘಟನೆಗಳನ್ನೆಲ್ಲಾ ವಿವರಿಸುತ್ತಾ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದನ್ನು ವಿಶೇಷವಾಗಿ ಕೇಂದ್ರೀಕರಿಸಿ ಅವರು ಮಾತನಾಡುತ್ತಿದ್ದರು. ಚೌರಿ ಚೌರಾದಲ್ಲಿ ನಡೆದ ಸತ್ಯಾಗ್ರಹ ಹಿಂಸೆಗೆ ತಿರುಗಿದ್ದರ ಕುರಿತು, ಅದಕ್ಕೆ ತಾನೇ ನೈತಿಕ ಜವಾಬ್ದಾರಿ ಹೊತ್ತು “ತನಗೆ ಶಿಕ್ಷೆ ನೀಡಿ” ಎಂದು ನ್ಯಾಯಾಧೀಶರಲ್ಲಿ ವಿನಂತಿಸಿಕೊಂಡಿದ್ದು ಉಲ್ಲೇಖನೀಯ ಎಂದು ತಿಳಿಸಿದರು. ಗಾಂಧೀಜಿ ಅವರು ನವ ಜೀವನ, ಯಂಗ್ ಇಂಡಿಯಾ, ಹರಿಜನ ಪತ್ರಿಕೆಯ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದರು. ಆ ಕಾಲದಲ್ಲಿಯೇ ಹರಿಜನ ಪತ್ರಿಕೆಯ ಪ್ರಸಾರ ಸಂಖ್ಯೆ 5 ಲಕ್ಷ ಇರುವುದು ಗಮನಾರ್ಹ ಸಂಗತಿಯಾಗಿತ್ತು ಎಂದು ತಿಳಿಸಿದರು. ದೇಶದ ಎಲ್ಲಾ ಪತ್ರಿಕೆಗಳಿಗೂ ಗಾಂಧೀಜಿ ಬರಹಗಳೇ ಮೂಲ ಸರಕಾಗಿದ್ದವು. ಪತ್ರಿಕೆಗಳ ಮೂರು ಪ್ರಮುಖ ಉದ್ದೇಶಗಳನ್ನು ಗಾಂಧೀಜಿಯವರು ವಿವರಿಸಿ ಜನರಿಗೆ ಇಷ್ಟವಾಗುವ ಚಿಂತನೆಯನ್ನು ಅಭಿವೃದ್ಧಿಗೊಳಿಸಬೇಕು, ರಾಷ್ಟ್ರೀಯ, ಐತಿಹಾಸಿಕ ಆಧ್ಯಾತ್ಮಿಕ ಭಾವನೆಗಳನ್ನು ಜನರಲ್ಲಿ ಉತ್ತೇಜನಗೊಳಿಸಬೇಕು, ತಪ್ಪುಗಳ ಬಗ್ಗೆ ನಿರ್ಭೀತಿಯಿಂದ ಬರೆಯಬೇಕು ಎಂಬ ಮೂರು ಮುಖ್ಯ ವಿಷಯಗಳನ್ನು ತಿಳಿಸಿದ್ದರು, ಅವು ಇಂದಿಗೂ ಪ್ರಸ್ತುತ ಎಂಬುದನ್ನು ಉಪನ್ಯಾಸದಲ್ಲಿ ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಡಿನ ಪ್ರಮುಖ ವ್ಯಂಗ್ಯ ಚಿತ್ರ ಕಲಾವಿದರಾದ ಕೆ ಆರ್ ಸ್ವಾಮಿ ಹಾಗೂ ಮಲಯಾಳಂ ನಿಂದ ಕನ್ನಡಕ್ಕೆ ಹಲವಾರು ಪುಸ್ತಕಗಳನ್ನು ಅನುವಾದಿಸಿದ, ಸ್ವತಂತ್ರ ಕೃತಿಗಳನ್ನೂ ರಚಿಸಿದ ಕೆ ಪ್ರಭಾಕರನ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಕೆ ಆರ್‌ ಸ್ವಾಮಿಯವರು ಮಾತನಾಡುತ್ತಾ ಪ್ರತಿ ನಗುವಿನ ಹಿಂದೆ ನೋವಿದೆ, ನೋವಿನ ಹಿಂದೆ ನಲಿವಿದೆ; ಆದ್ದರಿಂದ ಸಂದೇಶ ಕೊಡುವ, ಗಂಭೀರ ವಿಷಯದ ಕುರಿತು ಕಾರ್ಟೂನ್ ರಚಿಸಲು ಆರಂಭಿಸಿದೆ; ಲಂಚಾವತಾರದ ಬಗ್ಗೆ ಅನೇಕ ಕಾರ್ಟೂನ್ ಗಳನ್ನು ಬರೆದಿದ್ದೇನೆ ಎಂದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸನ್ಮಾನಿತರಾದ ಇನ್ನೋರ್ವ ಕನ್ನಡ ಮಲೆಯಾಳಂ ಉಭಯ ಭಾಷಾ ತಜ್ಞರಾದ, 20 ಪುಸ್ತಕಗಳನ್ನು ಈಗಾಗಲೇ ರಚಿಸಿರುವ ಹಾಗೂ 5-6 ಪುಸ್ತಕಗಳು ಪ್ರಕಟಣೆಯ ಹಂತದಲ್ಲಿರುವ, ಕೆ.ಪ್ರಭಾಕರನ್, ಕಳೆದ 30 ವರ್ಷಗಳಿಂದ ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದನ್ನು , 200 ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿರುವುದನ್ನು ತಿಳಿಸಿ, ಸಾಹಿತ್ಯ ಅನುವಾದ ಅಧ್ಯಯನ, ಶಿಸ್ತು ಅಪೇಕ್ಷಿಸುತ್ತದೆ ; ಇದು ಅಸಾಧಾರಣ ಪ್ರಕ್ರಿಯೆ ಎಂದು ಹೇಳಿದರು.
ಎರಡು ಭಾಷೆಯ ಸಂಸ್ಕೃತಿ,ಶೈಲಿ ಬಲ್ಲವರಾಗಿರಬೇಕು, ನಾನು ಇಂತಹ ಸಾಹಿತ್ಯದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿ ಸನ್ಮಾನ ಮಾಡಿರುವದಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ ಜನಪ್ರಿಯ ಸಾಹಿತಿ ಡಾ. ಗಜಾನನ ಶರ್ಮ ಅವರು ಅಧ್ಯಕ್ಷೀಯ ನುಡಿಗಳನ್ನು ನುಡಿಯುತ್ತಾ, ವ್ಯಂಗ್ಯ ಚಿತ್ರಕಾರ ಕೆ ಆರ್ ಸ್ವಾಮಿ ಅವರ ವೈಶಿಷ್ಟ್ಯ ತಿಳಿಸಿ ಹಲವು ಹಿರಿಯ ಸಾಹಿತಿಗಳ ಒಡನಾಟ ದಿಂದ ಬರೆಯಲಾದ ಅವರ *ಚಿಗುರು ಚಿತ್ತಾರ ಪುಸ್ತಕವನ್ನು ಎಲ್ಲರೂ ಓದಲೇಬೇಕೆಂದು ಕರೆ ನೀಡಿದರು.

ವಿಶುಕುಮಾರ್ ಅವರು ಗಾಂಧೀಜಿ ಅವರ ಕುರಿತು ಆಪ್ತವಾಗಿ ಮಾತನಾಡಿದ್ದನ್ನು ಸ್ಮರಿಸಿ ಇಂತಹ ಅಪರೂಪದಲ್ಲೇ ಅಪರೂಪದ ಮಾಹಿತಿ ಪೂರ್ಣ ವಿಶುಕುಮಾರ್ ಅವರ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು ಎಂದು ನುಡಿದರು. ಉಭಯ ಭಾಷಾ ಪರಿಣಿತರಾದ ಕೆ ಪ್ರಭಾಕರನ್ ಅವರು ನಿವೃತ್ತಿಯ ನಂತರವೂ ಪ್ರವತ್ತಿಯಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯ, ಅವರ ರಂಗ ಚಟುವಟಿಕೆಗಳು, ಅನುವಾದ ಕಾರ್ಯಗಳು ರಾಜ್ಯಕ್ಕೆ ಮಾದರಿ ಎಂದು ಅವರ ಸಾಹಸವನ್ನು ಶ್ಲಾಘಿಸಿದರು. ಭರತನಾಟ್ಯ, ಯೋಗ ನೃತ್ಯ ಮಾಡಿದ ಬಾಲಕಿ ನೇಹಾ ಕುರ್ಸೆ ಅವರ ಅಂಗಾಭಿನಯ ತುಂಬಾ ಇಷ್ಟವಾಯಿತು; ಪ್ರತಿಭೆಗಳು ಬೆಳೆದರೆ ನಮ್ಮ ಬದುಕಿಗೆ ಅರ್ಥ ಬರುವುದು ಎಂದು ಕಲಾವಿದೆಯ ಕಲೆಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಕುಮಾರಿ ನೇಹಾ ಕುರ್ಸೆ ಅವರ ಭರತನಾಟ್ಯ ಹಾಗೂ ಯೋಗ ನೃತ್ಯ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಕಾರ್ಯಕ್ರಮದ ನಿರೂಪಣೆ, ಗಣ್ಯರ ಪರಿಚಯವನ್ನು ಇಂಜಿನಿಯರ್ ಗಳಾದ ವಿನಯ ಕೂರ್ಸೆ, ಹೇಮಂತ್ ಲಿಂಗಣ್ಣ ಅವರು ಅಚ್ಚುಕಟ್ಟಾಗಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆ ಆರ್ ಸ್ವಾಮಿಯವರ ವ್ಯಂಗ್ಯ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜಿ ಮೃತ್ಯುಂಜಯ, ಸಿದ್ದಣ್ಣ ಸೊನ್ನದ, ಚಿಕ್ಕಲಿಂಗೇಗೌಡ, ಪುರುಷೋತ್ತಮ್ ದಾಸ್ ಹೆಗ್ಗಡೆ, ಪ್ರಭಾಕರ್ ಗಂಗೊಳ್ಳಿ, ಲೆಕ್ಕಾಧಿಕಾರಿಗಳ ಸಂಘದ ಕೆಂಪೇಗೌಡ, ಉಲಿಗೆ ಸ್ವಾಮಿ, ಬಿ ಸತ್ಯನಾರಾಯಣ, ಸುಧಾ, ನಿತ್ಯಾನಂದಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಶಂಕರ್, ಸುಚೇತನ ಬಿ ಎಸ್, ವಾಸುದೇವ ಕಾರಂತ್, ಪ್ರಕಾಶ್ ಪೂರ್ಣಮಠ, ರಾಜೇಶ್ವರಿ ಅಜ್ಜಿಬಾಳ್, ಗೀತಾ ಸಭಾಹಿತ, ಶ್ರೀವಾಣಿ, ನಿವೃತ್ತರ ಸಂಘದ ಶ್ಯಾಮರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು ಎಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ