ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಕ್ಷ ಪ್ರಾಮಾಣಿಕ ಜವಾಬ್ದಾರಿಯುತ ಪಿಎಸ್ಐ ಬಸವರಾಜ್ ಜಿ. ಕೆ. ಅವರಿಗೆ ಭೀಮ್ ಆರ್ಮಿ ವತಿಯಿಂದ ಸನ್ಮಾನ

ಬಳ್ಳಾರಿ / ಕಂಪ್ಲಿ : ಬೇರೆಲ್ಲಾ ಇಲಾಖೆಯ ಅಧಿಕಾರಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ಚಲಾಯಿಸುವಾಗ ಅಧಿಕಾರಿ ಎರಡೆರಡು ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕಾನೂನು ಪಾಲನೆಯಲ್ಲಿ ಸಮಾಜದೊಂದಿಗೆ ಕಠಿಣವಾಗಿ ನಡೆದುಕೊಳ್ಳುವುದು ಜೊತೆಗೆ ಕರ್ತವ್ಯ ನಿರ್ವಹಿಸುವಾಗ ಕಪ್ಪು ಕಲೆ ಸಮವಸ್ತ್ರ ಖಾಕಿಗೆ ತಾಗದಂತೆ ನಡೆದುಕೊಳ್ಳುವುದು ಬಹುದೊಡ್ಡ ಸವಾಲು.
ಪಿಎಸ್ಐ ಬಸವರಾಜ್ ಜಿ.ಕೆ. ರವರು ಎಲ್ಲಿಯೂ ಕಪ್ಪು ಚುಕ್ಕೆ ತಾಗದಂತೆ ಸಮಾಜದಿಂದ ( ಗೌರವ ಸನ್ಮಾನ, ಹೊಗಳಿಕೆ, ಪ್ರಚಾರ) ಏನನ್ನೂ ನಿರೀಕ್ಷಿಸದೆ ತಮ್ಮ ಕರ್ತವನ್ನು ತಾವು ನಿರ್ವಹಿಸಿಕೊಂಡು ಬಂದವರು. ಹಗಲು ರಾತ್ರಿ ಎನ್ನದೆ ಫೀಲ್ಡ್ ನಲ್ಲಿ ಇಳಿದು ಕೆಲಸ ಮಾಡಿ ಸ್ಟ್ರಿಕ್ಟ್ ಆಫೀಸರ್ ಎಂದೇ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕಳ್ಳತನ ಪ್ರಕರಣಗಳು ಮಲೆನಾಡಿನ ಹಲವು ತಾಲೂಕುಗಳಲ್ಲಿ ಹರಡಿದ ಗಾಂಜಾ ಬೆಳೆಯುವುದು ಪೂರೈಕೆ ಹಾಗೂ ಮಾರಾಟ ಮಾಡುತ್ತಿದ್ದ ಹಲವಾರು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಟ್ರಾಫಿಕ್ ಸಮಸ್ಯೆಯನ್ನು ತಿಳಿಗೊಳಿಸಿ, ರಸ್ತೆ ಬಂದೋಬಸ್ ನಿರ್ವಹಿಸುವಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ, ಅಕ್ರಮ ಗೋವುಗಳ ಸಾಗಾಣಿಕೆ ತಡೆಗಟ್ಟುವಲ್ಲಿ, ಹೀಗೆ ನೂರಾರು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ದಕ್ಷ ಜವಾಬ್ದಾರಿ ಹೊಂದಿರುವ ಅಧಿಕಾರಿಯಾಗಿ ತಾಲೂಕು ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಯಾರನ್ನೂ ಹೆಚ್ಚು ಹಚ್ಚಿಕೊಳ್ಳದೆ ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ ಕರ್ತವ್ಯಕ್ಕೆ ತನ್ನ ಮೂಲ ಆದ್ಯತೆಯೆಂದು ಠಾಣೆಯಲ್ಲಿಯೇ ಇದ್ದು ತಂಪು ಗಾಳಿಯ ಕೆಳಗೆ ಕೆಲಸ ಮಾಡುವ ಬದಲು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದು ಔಟ್ ಡೋರ್ ಫೀಲ್ಡ್ ಕೆಲಸ ಅಪಘಾತ, ಸಣ್ಣಪುಟ್ಟ ಗದ್ದಲ, ಕಾನೂನುಬಾಹಿರ ಘಟನೆಗಳು ನಡೆದಾಗ ಬಸವರಾಜ್ ಜಿ.ಕೆ. ರವರು ಸ್ಥಳದಲ್ಲಿ ಇರುತ್ತಿದ್ದರು. ಬಡವರಿಗೆ ಸಹಾಯ, ಪರಿಸರ ಪ್ರೇಮಿಯಾಗಿ ಜನಾನುರಾಗಿರುವ ಪಿಎಸ್ಐ ಬಸವರಾಜ್ ಜಿ.ಕೆ.ರವರು ಕಂಪ್ಲಿ ತಾಲೂಕಿನ ಚಿಕ್ಕಜಾಯಿಗನೂರಿನಲ್ಲಿ ಜನಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು ಕಂಪ್ಲಿಯ ಷಾಮಿಯಾ ಚಂದ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸವನ್ನು, ಕಂಪ್ಲಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸವನ್ನು ಪಡೆದು ಎಂ.ಎ. ಪೊಲಿಟಿಕಲ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆಯನ್ನು ಗಳಿಸಿ ಮೈಸೂರಿನಲ್ಲಿ ಪೊಲೀಸ್ ತರಬೇತಿಯನ್ನು ಪಡೆದು ರಾಜಧಾನಿ ಬೆಂಗಳೂರಿನಲ್ಲಿ ಪ್ರಥಮವಾಗಿ ವೃತ್ತಿ ಸೇವೆಯನ್ನು ಆರಂಭಿಸಿ ಬೇರೆ ಬೇರೆ ಊರುಗಳಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ಜನಮನ್ನಣೆ ಹಾಗೂ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ ಚಿಕ್ಕಮಂಗಳೂರಿನ ಬಾಳೆ ಹೊನ್ನೂರಿನಲ್ಲಿ ಉತ್ತಮ ಸೇವೆಯನ್ನು ಗೈದು ಪ್ರಸ್ತುತ ಕೊಪ್ಪ ತಾಲೂಕಿನಲ್ಲಿ ಒಂದು ವರ್ಷ ಮೂರು ತಿಂಗಳಿಂದ ಅತ್ಯಂತ ಪಾರದರ್ಶಕ ಹಾಗೂ ಪ್ರಾಮಾಣಿಕತೆಯೊಂದಿಗೆ ಕಾರ್ಯ ನಿರ್ವಹಿಸುತ್ತಾ, ಜನಾನುರಾಗಿ ದಕ್ಷ ಅಧಿಕಾರಿಯಾಗಿ ಜನರ ಪ್ರೀತಿ ಹಾಗೂ ಅಭಿಮಾನವನ್ನು ಸಂಪಾದಿಸಿರುವುದು ಇವರ ಸೇವೆಯ, ವ್ಯಕ್ತಿತ್ವದ ಪ್ರತಿಬಿಂಬವಾಗಿದೆ. ಈ ಹಿಂದೆ ಅವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಅಚ್ಚರಡಿಯ ದಲಿತ ಯುವತಿಯ ಕೊಲೆಯ ಪ್ರಕರಣವನ್ನು ಅತ್ಯಂತ ಚಾಣಾಕ್ಷತೆಯೊಂದಿಗೆ ಭೇದಿಸಿ ಸಂಬಂಧಪಟ್ಟವರಿಗೆ ನ್ಯಾಯ ಒದಗಿಸಿ ಕೊಟ್ಟಿದಾರೆ. ಇಂತಹ ದಕ್ಷ ಹಾಗೂ ಪ್ರಾಮಾಣಿಕ ಪಿಎಸ್ಐ ಬಸರಾಜ್ ಜಿ.ಕೆ. ಅವರಿಗೆ ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಭೀಮ್ ಆರ್ಮಿಯು ಇನ್ನು ಇವರಿಂದ ಜನಪರ ಕಾರ್ಯಗಳು ಮೂಡಿಬರಲಿ ಎಂದು ಆಶಿಸುತ್ತಾ ಅಭಿಮಾನ ಪೂರಕವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಎ. ಎಸ್. ಐ. ಗುರುಮೂರ್ತಿ, ಹೆಡ್ ಕಾನ್ ಸ್ಟೇಬಲ್ ಮತಾಯಿ, ಉಷಾ, ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ಸುಧಾಕರ, ಜಿಲ್ಲಾ ಉಪಾಧ್ಯಕ್ಷ ಸುನಿಲ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ