ಬಳ್ಳಾರಿ / ಕಂಪ್ಲಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಕೃಷ್ಣಪ್ಪ ಸ್ಥಾಪಿತ ಬಣ)ಯು ತಾಲೂಕಿನ ಕಣವಿ ತಿಮ್ಮಲಾಪುರ, ದೇವಸಮುದ್ರ ಗ್ರಾಮಗಳಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಸಡಗರ ಸಂಭ್ರಮದಿಂದ ನೀಲಿ ಬಣ್ಣ ಧರಿಸಿ ಆಚರಿಸಿದರು.
ಸಮಿತಿಯ ತಾಲೂಕು ಮುಖಂಡ ಎಚ್.ಗುಂಡಪ್ಪ ಮಾತನಾಡಿ, ಮನುಸ್ಮೃತಿಗಿಂತ ಅಂಬೇಡ್ಕರ್ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು ಸಮಾನತೆ, ಜಾತ್ಯಾತೀತತೆ, ಭಾವೈಕ್ಯತೆ, ಸಮಗ್ರತೆ ಮತ್ತು ಅಖಂಡತೆಯನ್ನು ಸಾರುತ್ತದೆ. ಭಾರತದ ಸಂವಿಧಾನ ಪರಿಪಾಲನೆಯೇ ಭಾರತೀಯರ ಆದರ್ಶವಾಗಿದೆ ಎಂದರು. ಸಮಾಜಸೇವೆ ಪ್ರಶಸ್ತಿ ಪುರಸ್ಕೃತ ಜಗದೀಶ ಪೂಜಾರರನ್ನು ಗೌರವಿಸಲಾಯಿತು.
ಕಣವಿ ತಿಮ್ಮಲಾಪುರದಲ್ಲಿ ಗ್ರಾಮ ಘಟಕ ಸಂಚಾಲಕ ಎಚ್.ಶಂಕ್ರಪ್ಪ, ಗ್ರಾಪಂ ಸದಸ್ಯರಾದ ಓ.ಮಹಾದೇವ, ಎಲ್.ವೆಂಕಟೇಶ, ಗೌರಮ್ಮ, ಪ್ರಮುಖರಾದ ಜಿ.ಕೆ.ತಿಪ್ಪೇಶ, ರಾಮಲಿಸ್ವಾಮಿ, ಪಂಪಾಪತಿ, ಊಳೂರು ಪಕ್ಕೀರಪ್ಪ, ಬಿ.ವೀರೇಶ, ಬೋಜರಾಜ, ಕುಬೇರ, ಪೊಲೀಸ್ ತಿಪ್ಪಯ್ಯ, ಕೆ.ಬಸಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಪಿ.ನಿಂಗಪ್ಪ, ಗ್ರಾಪಂ.ಮಾಜಿ ಅಧ್ಯಕ್ಷ ಸಣ್ಣ ವೆಂಕಟೇಶ ಇತರರಿದ್ದರು.
ದೇವಸಮುದ್ರ ಗ್ರಾಮದಲ್ಲಿ ಕೆಂಚಮ್ಮ ಗುಡಿಯಿಂದ ಸಹಿಪ್ರಾ ಶಾಲೆಯ ತನಕ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ಯುವತಿಯರು ಆರತಿ ತಟ್ಟೆಗಳನ್ನು ಹಿಡಿದು ಪಾಲ್ಗೊಂಡಿದ್ದರು. ಪ್ರಮುಖರಾದ ಕಡೆಮನಿ ಮಂಜುನಾಥ, ಎನ್.ಹೊನ್ನೂರಪ್ಪ, ಕುರುಬರ ಬಸವರಾಜ, ನಾಯಕರ ವೆಂಕೋಬಿ, ಎಚ್.ವೀರೇಶ, ಗ್ರಾಮ ಸಂಚಾಲಕ ಎಚ್.ರುದ್ರಪ್ಪ, ಎಚ್.ದುರ್ಗೇಶ, ಬಾಳಾಪುರ ಮಂಜುನಾಥ, ಎಚ್.ಪ್ರಭು ಇತರರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
