ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾನಪದ ಉತ್ಸವ-2025 ಸರಕಾರಿ ಪದವಿ ಕಾಲೇಜು ಗುರುಮಠಕಲ್

ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ- ಪ್ರೊ. ಅಂಜನೇಯ

ಯಾದಗಿರಿ/ಗುರುಮಠಕಲ್: ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆ ಕು. ನವಿತಾ ಹಾಡಿದರು, ಪ್ರಾಸ್ತಾವಿಕ ನುಡಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಂಚಾಲಕರು ಪ್ರೊ. ಅಂಜನೇಯ ಉದ್ದೇಶಿಸಿ ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ಉತ್ಸವವನ್ನು ಉದ್ಘಾಟನೆಯನ್ನು ಶ್ರೀ. ಜಿ. ತಮ್ಮಣ್ಣ ಶಿಕ್ಷಣ ತಜ್ಞರು, ಗುರುಮಠಕಲ್ ಮತ್ತು
ಮುಖ್ಯ ಅತಿಥಿಗಳಾದ ಶ್ರೀ ಕೋಸ್ಗಿ ಪ್ರತಾಪರೆಡ್ಡಿ,
ಶ್ರೀ ಜಗದೀಶ ಆವಂಟಿ, ಶ್ರೀ ವೆಂಕಟೇಶ ಹೂಗಾರ,ಡಾ. ಜೆ. ವಿ. ಪುರಷೋತ್ತಮ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಠಕಲ್ ಉದ್ಘಾಟಿಸಿದರು.
ತದ ನಂತರ ಮಾತನಾಡಿದ ಜಿ. ತಮ್ಮಣ್ಣನವರು ಗ್ರಾಮೀಣ ಕ್ರೀಡೆಗಳು ಜನಪದ ಆಟೋಟಗಳು ಕ್ಷೀಣಿಸುತ್ತಿವೆ. ದೇಹ ಮನಸ್ಸುಗಳೆರಡಕ್ಕೂ ಆರೋಗ್ಯ ಸಂವರ್ಧನೆ ಮಾಡಬಲ್ಲ ಗ್ರಾಮೀಣ ಕ್ರೀಡೆಗೆ ಮಹತ್ವ ನೀಡುವ ಸಲುವಾಗಿ ಇಂತಹ ಗ್ರಾಮೀಣ ಕ್ರೀಡಾಕೂಟ ಆಯೋಜಿಸಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದರು.

ಸರ್ವರಿಗೂ ಸ್ವಾಗತವನ್ನು ಡಾ. ಬಾಬುರಾಯ ದೊರೆ ಕೋರಿದರು.
ಮಧ್ಯದಲ್ಲಿ ಜಾನಪದ ಗೀತೆಗಳನ್ನು ಉಪನ್ಯಾಸಕರು ಹಾಡಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದರು.
ಕೊನೆಯದಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ವಿ. ಪುರುಷೋತ್ತಮ ಅವರು ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಜಾನಪದ ಉತ್ಸವ -2025 ವನ್ನು ಆಚರಿಸುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಆಯಾ ಪ್ರಾದೇಶಿಕ ಸಾಂಪ್ರದಾಯಿಕ ಕಲೆ ಹಾಗೂ ಕೌಶಲ್ಯಗಳನ್ನು ಪುದರ್ಶಿಸಲು ಹಾಗೂ ಸ್ಪರ್ಧೆ/ಆಚರಣೆಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಜಾನಪದ ಮಹತ್ವ ಸಾರುವ ಉದ್ದೇಶದಿಂದ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳಿಗೆ ಹಗ್ಗ- ಜಗ್ಗಾಟ, ಗೋಣಿ ಚೀಲದ ಓಟ ಮತ್ತು ವಿಧ್ಯಾರ್ಥಿನಿಯರಿಗೆ ಒಳ ಕ್ರೀಡಾಂಗಣದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೋಧಕ ಡಾ.ವೆಂಕಟೇಶ್ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುರುಮಠಕಲ್ ಇನ್ನಿತರರು ಹಾಜರಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ