ಕೆಟ್ಟು ನಿಂತು ವರ್ಷ ಕಳೆದರೂ ಸರಿಪಡಿಸದ ಅಧಿಕಾರಿಗಳು
ಯಾದಗಿರಿ/ಗುರುಮಠಕಲ್: ಪಟ್ಟಣದ ಕೃಷಿ ಮಾರುಕಟ್ಟೆ (ಎ.ಪಿ.ಎಮ್.ಸಿ) ಯಲ್ಲಿ ಕಳೆದ ಒಂದು ವರ್ಷದಿಂದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು, ಕುಡಿಯುವ ನೀರಿಗಾಗಿ ಪ್ರತಿ ನಿತ್ಯ ಬರುವ ರೈತರು ಪರದಾಡುವಂತಾಗಿದೆ
ಬೇಸಿಗೆಯ ಧಗೆಯಿಂದಾಗಿ ತಾಪಮಾನದಲ್ಲಿ ಭಾರೀ ಏರಿಕೆಯಾಗಿದೆ. ಹಗಲಿನ ವೇಳೆಯಲ್ಲಿ ಜನ ಮನೆಗಳಿಂದ ಹೊರ ಬರಲಾಗದಂತಹ ಸ್ಥಿತಿ ಇದೆ. ಇಂತಹ ಪರಿಸ್ಥಿತಿ ಸಂದರ್ಭದಲ್ಲಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗೆ ಪ್ರತಿದಿನ ಸುತ್ತಮುತ್ತಲಿನ ರೈತರು ತಾವು ಬೆಳೆದ ಧಾನ್ಯಗಳ ಮಾರಾಟ ಮಾಡಲು ಬರುತ್ತಾರೆ, ವಾರಕೊಮ್ಮೆ ಇಲ್ಲಿ ಪಶುಗಳ ಸಂತೆ ನಡೆಯುತ್ತದೆ, ಇಲ್ಲಿಗೆ ನೆರೆಯ ತೆಲಂಗಾಣ ಹಾಗೂ ಪಕ್ಕದ ಸೇಡಂ ತಾಲೂಕಿನ ಜನ ಸಹ ಇಲ್ಲಿ ಪಶುಗಳ ಖರೀದಿ ,ಮಾರಾಟಕ್ಕೆ ಬರುತ್ತಾರೆ, ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿ ಕೆಟ್ಟು ನಿಂತು ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಘಟಕ ಸರಿಪಡಿಸದೆ ಇರುವುದು, ರೈತರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಬಹು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ದುರಸ್ಥಿ ಮಾಡಿಸಲು ಮುಂದಾಗಬೇಕು.
ವರದಿ: ಜಗದೀಶ್ ಕುಮಾರ್
