ಬಳ್ಳಾರಿ / ಕಂಪ್ಲಿ : ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮುನ್ನುಗ್ಗುವ ಮೂಲಕ ಯಶಸ್ಸು ಸಾಧಿಸಬೇಕಿದೆ ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ಅಕ್ಕ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ಸಾಕ್ಷರರಾಗುವ ಮೂಲಕ ಸರ್ವಾಂಗೀಣ ಪ್ರಗತಿ ಸಾಧಿಸಬೇಕಿದೆ. ಮಹಿಳಾ ಸ್ವಾಭಿಮಾನಿ ಮತ್ತು ಆತ್ಮಬಲದ ಸಂಕೇತವಾಗಿದೆ. ಅವರ ಜೀವನದ ಯಶೋಗಾಥೆಯಾಗಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ, ಪೋಷಣೆ ಮತ್ತು ಅವಕಾಶ ಕಲ್ಪಿಸಲು ಪಾಲಕರು ಮುಂದಾಗಬೇಕು. ಎಲ್ಲರ ಸಹಕಾರದಿಂದಾಗಿ ಕಾರ್ಯಕ್ರಮ ಯಶಸ್ವಿಗೊಂಡಿದೆ ಎಂದರು.
ಸಮಾಜ ಸೇವೆಗಾಗಿ ಎಚ್.ಸಂಗೀತಾ, ವಾಲಿ ಶಾರದಾ, ಜೆ.ಎಂ.ಶೋಭಾ, ಸಿ.ಕೆ.ಶೋಭಾ, ಬಿ.ಸುನಿತಾ, ಎಂ.ವಸಂತ, ಎಂ.ಜಯಶ್ರೀ, ಎಂ.ಶಾರದಾ, ಬಿ.ಎಂ.ಪುಷ್ಪಾ, ಎಸ್.ವಿ.ಜಯಲಕ್ಷ್ಮೀ, ಟಿ.ಎಂ.ವಿಜಯಲಕ್ಷ್ಮೀ, ರತ್ನಮ್ಮ, ಸಚ್ಚೇದ ಸುಶೀಲ ಇವರಿಗೆ ಅಕ್ಕ ಪ್ರಶಸ್ತಿ ನೀಡುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಶರಣೆ ಅತ್ತಿವೇರಿ ಬಸವಧಾಮ ಮಾತಾಜಿ, ಪ್ರಮುಖರಾದ ವಾಲಿ ಕೊಟ್ರಪ್ಪ, ಎಸ್.ಎಸ್. ಎಂ.ಚನ್ನಬಸವರಾಜ, ಎಸ್.ಎಂ.ನಾಗರಾಜ, ಎಚ್.ಜಗದೀಶ, ಮಂಡಳಿ ಉಪಾಧ್ಯಕ್ಷೆ ಭತ್ತದ ಸಂಧ್ಯಾ, ಸಹ ಕಾರ್ಯದರ್ಶಿ ಕೆ.ಎಂ.ಸೌಮ್ಯಾ, ಖಜಾಂಚಿ ತಾಂಡೂರು ಸುಜಾತಾ, ನಿರ್ದೇಶಕಿಯರಾದ ವಾಲಿ ಶಕುಂತಲಾ, ಕೆ.ರಾಜೇಶ್ವರಿ, ಕೆ.ಚನ್ನಮ್ಮ, ಕೆ.ನಾಗರತ್ನ, ಡಾ.ಶಾರದಾ ಹಿರೇಮಠ, ಯುಗಾದಿ ವಿನುತಾ, ಮುಕ್ಕುಂದಿ ಮಮತಾ, ಕೆ.ರತ್ನ, ಸುಭದ್ರಾ ದೇವಿ, ವಿಜಯಲಕ್ಷಿ ವೀರಶೈವ ಸಮಾಜದ ನಾನಾ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
