ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿ-24/05/2025 ರಂದು ಕಾನಿಪ ಧ್ವನಿ ಸಂಘಟನೆಯ ವತಿಯಿಂದ ನಡೆಯುವ 3 ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ವಿಚಾರ ಸಂಕಿರಣದಲ್ಲಿ ಖ್ಯಾತ ವೈದ್ಯರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಟಿ.ಎಚ್. ಆಂಜನಪ್ಪ ರವರಿಂದ ಪತ್ರಕರ್ತರ ಆರೋಗ್ಯದಲ್ಲಿ ನನ್ನ ಪಾತ್ರ ಎಂಬ ವಿಚಾರ ಕುರಿತು ವಿಚಾರ ಮಂಡಿಸಲಿದ್ದಾರೆ.
ಶ್ರೀಯುತರನ್ನು ಆಹ್ವಾನಿಸುವ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷ್ಮಣರಾವ್ ಹಾಗೂ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ವಸಂತಚಾರ್ಯ ರವರು ಉಪಸ್ಥಿತರಿದ್ದರು ಎಂದು ಶ್ರೀ ಬಂಗ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರು, ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
