ಬಳ್ಳಾರಿ / ಕಂಪ್ಲಿ : ಹುಲಿಗೆಮ್ಮ ಕ್ಯಾಂಪಿನ ಅಂಬೇಡ್ಕರ್ ಯುವಕರ ಬಳಗದಿಂದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ವಿಜೃಂಭಣೆಯಿಂದ ಸೋಮವಾರ ಜರುಗಿತು.
ಇಲ್ಲಿನ ಕ್ಯಾಂಪಿನ ರಕ್ಷಣಾ ವೇದಿಕೆ ಕಟ್ಟೆಯಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ಆರಂಭಗೊಂಡು, ಸಕ್ಕರೆ ಕಾರ್ಖಾನೆ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತೆರಳಿ, ಪುನಃ ಕ್ಯಾಂಪಿನಲ್ಲಿ ಸಮಾವೇಶಗೊಂಡಿತು. ಧ್ವನಿ ವರ್ಧಕದ ಹಾಡುಗಳಿಗೆ ಯುವಕರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.
ನಂತರ ಕ್ಯಾಂಪಿನ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಿತು. ಯುವ ಮುಖಂಡ ಡಿಎಸ್ ಪ್ರಸಾದ್ ಮಾತನಾಡಿ, ಸಂವಿಧಾನ ರಚನೆಯಿಂದಾಗಿ ಸ್ವತಂತ್ರದ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ. ಸಮಾತನೆಯನ್ನು ಸಾರಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಇವರ ಆದರ್ಶಗಳನ್ನು ಪಾಲಿಸಬೇಕೆಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ವೀರಾಂಜನಿ, ಪಿಐ ಕೆ.ಬಿ.ವಾಸುಕುಮಾರ ಮುಖಂಡರಾದ ಲಕ್ಷ್ಮಿಪತಿ, ಶ್ರೀನಿವಾಸ, ಎನ್.ಗಂಗಣ್ಣ, ಓಬಳೇಶ, ಹೊನ್ನೂರಪ್ಪ, ದೊಡ್ಡರಾಜು, ಪೆದ್ದಣ್ಣ, ಕಳವಳಿ ರಾಜು, ಯಲ್ಲಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
