!ಆಯುಷ್ಮಾನ್ ಅಯ್ಯಣ್ಣಮಹಾರಾಜ್ ಜೊತೆ ಆಯುಷ್ಮಾತಿ ಶಾಂಭವಿ!
ರಾಯಚೂರು : ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯ ದಿನದಂದು ರಾಯಚೂರು ನಗರದ
ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್ ನಲ್ಲಿ ಭಗವಾನ್ ಗೌತಮ್ ಬುದ್ಧರ ಸಂಪ್ರದಾಯದಂತೆ ಮತ್ತು ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್, ರಾಮ್ ಜೀ ಸಕ್ಪಾಲ್ ಅವರ ಸಿದ್ದಾಂತದಂತೆ ವಿವಾಹ ಜರುಗಿತು.
ಆಯುಷ್ಮಾನ್ ಅಯ್ಯಣ್ಣ ಮಹಾರಾಜ್ ಜೊತೆ ಆಯುಷ್ಮಾತಿ ಶಾಂಭವಿ (ತಾಯಮ್ಮ) ಇವರು ನವ ದಾಂಪತ್ಯ ಜೀವನಕ್ಕೆ ನೂತನವಾಗಿ ಕಾಲಿಟ್ಟರು.
ಆಯುಷ್ಮಾನ್ ಅಯ್ಯಣ್ಣ ಮಹಾರಾಜ್ ಅವರು ಮಾತನಾಡಿ ನಮ್ಮ ಜೀವನದ ಬದುಕಿಗೆ ದಾರಿ ದೀಪ ಹಾಗೂ ಬೆಳಕಿನ ಕಿರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶೀರ್ವಾದ ಹಾಗೂ ನಾವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಇನ್ನಿತರ ಕ್ಷೇತ್ರಗಳಲ್ಲಿ ಬೆಳೆಯಲು ನಮ್ಮ ಜೀವನಧಾತ ನಮ್ಮ ಬದುಕಿನ ದೇವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು.
ಇಂದು ಶುಭದಿನ ಶುಭಮೂರ್ತವಾಗಿರೋದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮದಿನವಾಗಿದೆ ಇದು ನಮಗೆ ಶುಭದಿನ ಹಾಗೂ ಪವಿತ್ರಾದಿನವಾಗಿದೆ ಹಾಗಾಗಿ ಬುದ್ಧನ ತತ್ವ ಸಿದ್ದಾಂತದಂತೆ ಮಂಗಳ ಪರಿಣಯವನ್ನು ಮಾಡಿಕೊಳ್ಳಲಾಗಿದೆ.
ಈ ಮದುವೆಗೆ ಪ್ರೇರಣೆ ಹಾಗೂ ಸತತವಾಗಿ ಕಾರ್ಯರೂಪದಲ್ಲಿ ನೆರವೇರಿಸಿದ ಛಲವಾದಿ ಸಮುದಾಯದ ಹಿರಿಯ ಮುಖಂಡರಾದ ಅಯುಷ್ಮಾನ್ ರವೀಂದ್ರನಾಥ್ ಪಟ್ಟಿ ಅವರ ಕೃಪಾ ಆಶೀರ್ವಾದದ ಮೂಲಕ ಜರುಗಿತು.
ಸಂವಿಧಾನ ಶಿಲ್ಪಿ, ಭಾರತದ ಭಾಗ್ಯವಿಧಾತ, ವಿಶ್ವಚೇತನ, ಮಹಾನಾಯಕ, ಮಹಾಮಾನತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರಿಂದ ನಮ್ಮ ಬದುಕು ನಮ್ಮ ಜೀವನ ನಮ್ಮ ಉಸಿರು ಅವರಿಂದಲೇ ನಮ್ಮ ಬಾಳಿಗೆ ಬೆಳಕು ಎಂದರು.
ಈ ಸಂದರ್ಭದಲ್ಲಿ ಬಂತೆ ಗುರುಗಳು, ಬೌದ್ಧ ಉಪಾಸಕರು,ಬಂತೆ ಉಪನ್ಯಾಸಕರು, ಛಲವಾದಿ ಸಮುದಾಯದ ಹಿರಿಯ ಮುಖಂಡರುಗಳು ಆಯುಷ್ಮಾನ್ ರವೀಂದ್ರನಾಥ್ ಪಟ್ಟಿ, ಜಗನಾಥ್ ಸುಂಕಾರಿ,ರವಿ ಕಂಡಕ್ಟರ್ ರಾಂಪುರು,ರಾಜು ಪಟ್ಟಿ, ವಿಶ್ವನಾಥ್ ಪಟ್ಟಿ, ನರಸಿಂಹಲು ರಾಂಪುರು, ಸಂತೋಷ ನಂದಿನ್ನಿ, ಹನುಮಂತಪ್ಪ ಸಿಕಲ್, ವೆಂಕಟೇಶ್ ಕಲ್ಲೂರಕಾರ್, ಸೂರಜ್ ಕೂನಲ್ ರಾಂಪುರು, ಉಪೇಂದ್ರ, ಆದರ್ಶ್, ಮಲ್ಲೇಶ್ ಕೋಲಮಿ, ಮಲ್ಲಿಕಾರ್ಜುನ ಪೊಲೀಸ್, ಮರೀಗೌಡ್ರು, ಶಿವಪ್ಪ ನಾಯಕ, ಎಮ್. ವಸಂತ್, ವೀರೇಶ್ ಗಾಣಧಾಳ್, ಈರಣ್ಣ ಡಿ. ಎಸ್. ಎಸ್., ನರಸಿಂಹಲು ನೆಲಹಾಳ್, ಕೆ. ಇ. ಕುಮಾರ್, ಮಾರೆಪ್ಪ, ವೀನೋದ್ ಸಾಗರ್ ವಕೀಲರು, ಈಶ್ವರ ಹುಮ್ನಾಬಾದ್ ವಕೀಲರು, ಭಾಸ್ಕರ್ ರಾಜ್, ಮಂಚಲ್ ಭೀಮಣ್ಣ, ಬಿ.ಯೆಲ್ಲಾರೆಡ್ಡಿ ಬಂಡಿ,ಗಂಗಮ್ಮ ಸಣ್ಣ ತಾಯಣ್ಣ ಕಪಗಲ್ ಹಂಪರೆಡ್ಡಿ ದೊರಸಾನಿ,ಅಂಜನ್ ರೆಡ್ಡಿ ದೊರಸಾನಿ,ಶಿವಮ್ಮ ಈರಣ್ಣಮಹಾರಾಜ್,ತಿಮಲಮ್ಮ ತಾಯಣ್ಣ ಓಣಕೇರಿ,ನೀಲಮ್ಮ ಹನುಮಂತಮಹಾರಾಜ್ ಹೀರಾ,ಈರಮ್ಮ ಕರಿಯಪ್ಪ ಗೋನಾಳ್,ಶಿವುಕುಮಾರ್ ಕಪಗಲ್, ಮುದಿಯ ಗೋನಾಳ್,ನಾಗರಾಜ್, ಹನುಮೇಶ್ ಕೋಳೂರು,ಮಂಜುಳಾ ಯಲ್ಲಪ್ಪ,ತಾಯಮ್ಮ ಹುಚ್ಚಪ್ಪ ಹಣಗಿ,ಮೌನೇಶ್, ತಾಯಣ್ಣ, ಶ್ರೀಧರ, ಮೌನೇಶ್ ಬುದ್ದಿನ್ನಿ, ಬಸವರಾಜ್ ಹೆಸರೂರು, ಶಿವುರಾಜ್ ಹೆಸರೂರು,ಸೂರಜ್, ಪ್ರಜ್ವಲ್, ಉದಯಕುಮಾರ್, ಮೌನೇಶ್ ಹೀರಾ,ಸೇರಿದಂತ್ತೆ ದಲಿತ ಪ್ರಗತಿ ಪರ ಸಂಘಟನೆಗಾರರು,ಪ್ರಗತಿ ಪರ ಹೋರಾಟಗಾರರು, ಛಲವಾದಿ, ಬ್ಯಾಗರ್, ಹೊಲೆಯ, ಮಾಲ ಸಮಾಜದ ಕುಲಭಾಂದವರು,ಗುರು ಹಿರಿಯರು ಉಪಸ್ಥಿತರಿದ್ದರು.
- ಕರುನಾಡ ಕಂದ
